ಶ್ರೀಮತಿ.ಮಾಲಿನಿ ಆನಪ್ಪರವರು 20ನೇ ಅಕ್ಟೋಬರ್ 1957 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಪಿ.ಚೆನ್ನಕೇಶವಯ್ಯನವರು ಮತ್ತು ತಾಯಿ ಶ್ರೀಮತಿ.ನಾಗಮ್ಮ. ಇವರು ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿರುತ್ತಾರೆ ಮತ್ತು ವೀಣಾ ವಾದನದಲ್ಲಿ ಪ್ರಾಥಮಿಕ ತರಬೇತಿಯನ್ನು ವೀಣಾ ವಿದ್ವಾನ್ ಶ್ರೀಮತಿ.ಇಂದಿರಾ ಅವರಿಂದ ಕಲಿತಿರುತ್ತಾರೆ. ಇವರು 1999 ರಿಂದ ಸಾಯಿಬಾಬಾರವರ ಭಕ್ತೆಯಾಗಿರುತ್ತಾರೆ.
ಶ್ರೀಮತಿ.ಮಾಲಿನಿ ಆನಪ್ಪನವರು 1999 ರಲ್ಲಿ "ಶ್ರೀ ಸಾಯಿ ಕಾಳಿಕಾ ಭಜನ ಮಂಡಳಿ" ಯನ್ನು ಪ್ರಾರಂಭಿಸಿ ಅದರ ಮುಖಾಂತರ ಬೆಂಗಳೂರಿನ ಪದ್ಮನಾಭನಗರದ ಶ್ರೀ.ಕಾಳಿಕಾಂಬ ದೇವಾಲಯದಲ್ಲಿ ನಿಯಮಿತವಾಗಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಬೆಂಗಳೂರಿನ ಮತ್ತು ಮೈಸೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಸಾಯಿಭಕ್ತರ ಮನೆಗಳಲ್ಲಿ ಸಾಯಿಭಜನೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುತ್ತಾರೆ. ಶ್ರೀಮತಿ.ಮಾಲಿನಿಯವರು ಇಲ್ಲಿಯವರೆಗೂ ಸರಿ ಸುಮಾರು 500ಕ್ಕೂ ಹೆಚ್ಚು ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಶ್ರೀಮತಿ.ಮಾಲಿನಿಯವರು ಬೆಂಗಳೂರಿನ ಚಿನ್ಮಯಿ ವಾಸವಿ ಆರ್ಯ ವೈಶ್ಯ ಟ್ರಸ್ಟ್, ರಾಮಕೃಷ್ಣ ಆಶ್ರಮ ಮತ್ತು ಕಾಳಿಕಾಂಬ ಮಂದಿರಗಳಲ್ಲಿ ನೀಡಿದ ಕಾರ್ಯಕ್ರಮಗಳಿಗಾಗಿ ಪ್ರಶಂಸೆಯನ್ನು ಗಳಿಸಿರುತ್ತಾರೆ.
ಪ್ರಸ್ತುತ ಶ್ರೀಮತಿ ಮಾಲಿನಿಯವರು ಪತಿ ಶ್ರೀ.ಆನಪ್ಪ ಮತ್ತು ಮಗ ಮತ್ತು ಸೊಸೆಯೊಂದಿಗೆ ಬೆಂಗಳೂರಿನ ರಾಜೀವ್ ನಗರದ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀಮತಿ.ಮಾಲಿನಿ ಆನಪ್ಪನವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ.
ವಿಳಾಸ:
ನಂ.49, 7ನೇ ಮುಖ್ಯರಸ್ತೆ,7ನೇ ಬ್ಲಾಕ್,
4ನೇ ಹಂತ , “ಇ” ಅಡ್ಡರಸ್ತೆ, ರಾಜೀವ್ ನಗರ,
ಬನಶಂಕರಿ 3ನೇ ಹಂತ, ಬೆಂಗಳೂರು-560 085, ಕರ್ನಾಟಕ.
ದೂರವಾಣಿ ಸಂಖ್ಯೆಗಳು:
+91 80 2669 1051 / +91 98458 99495
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment