ಸಾಯಿ ಭಜನ ಗಾಯಕಿ - ಶ್ರೀಮತಿ.ಹರ್ಲೀನ್ ಕೊಹ್ಲಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಖ್ಯಾತ ಸಾಯಿ ಭಜನ ಗಾಯಕಿ ಮತ್ತು ಗಜಲ್ ಗಾಯಕಿ. ಇವರು ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಪ್ರಖ್ಯಾತ ಗಾಯಕಿಯಾಗಿ ಹೆಸರು ಮಾಡಿದ್ದಾರೆ. ಇವರು ೨೧ ನೆ ಸೆಪ್ಟೆಂಬರ್ ೧೯೭೬ ರಂದು ಪಂಜಾಬ್ ನ ಸಂಗ್ರುರ್ ನಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಎಸ್.ಪಿ.ಎಸ್.ಕೊಹ್ಲಿ ಮತ್ತು ತಾಯಿಯವರು ಶ್ರೀಮತಿ.ಗುರುಚರಣ್. ಪ್ರಸ್ತುತ ಇವರು ತಮ್ಮ ಪತಿ ಶ್ರೀ.ಪ್ರದೀಪ್ ಸಿಂಗ್ ಮತ್ತು ಮಗಳು ಕುಮಾರಿ.ರಿಯಾಜ್ ರೊಂದಿಗೆ ದೆಹಲಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ಇವರು ತಮ್ಮ ಗಾಯನ ವೃತ್ತಿಯನ್ನು ಮುಂದುವರಿಸುತ್ತಿರುವುದೇ ಅಲ್ಲದೇ ದೆಹಲಿಯ ಪ್ರತಿಷ್ಟಿತ ಶಾಲೆ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆಯನ್ನು ಕೂಡ ಸಲ್ಲಿಸುತ್ತಿದ್ದಾರೆ.
ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಸಂಗೀತದಲ್ಲಿ ಬಿ.ಎ.ಹಾನರ್ಸ್ ಪದವಿಯನ್ನು ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಶ್ರೀಮತಿ.ಹರ್ಲೀನ್ ರವರಿಗೆ ಸಂಗೀತ ರಕ್ತಗತವಾಗಿ ಬಂದಿದೆ. ಇವರು ತಮ್ಮ ಸಂಗೀತ ಶಿಕ್ಷಣವನ್ನು ಪಂಡಿತ್ ಭೀಮಸೇನ ಶರ್ಮ ಮತ್ತು ಪಂಜಾಬ್ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ನಿವೃತ್ತ ಚೇರ್ಮೆನ್ ಶ್ರೀ.ಯಶಪಾಲ್ ಶರ್ಮರವ ಬಳಿ ಪಡೆದಿರುತ್ತಾರೆ.
ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಅನೇಕ ಸಾಯಿ ಭಜನೆ ಮತ್ತು ಗಜಲ್ ನೇರ ಪ್ರಸಾರದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಿಂದಿ, ಪಂಜಾಬಿ, ಪಾಕಿಸ್ತಾನಿ ಭಾಷೆಗಳಲ್ಲಿ ಅನೇಕ ವೀಡಿಯೋ ಆಲ್ಬಮ್ ಗಳಲ್ಲಿ ಹಾಡಿದ್ದಾರೆ. ಅಲ್ಲದೇ, ಇವರು ಅನೇಕ ಸೂಫಿ ಗೀತೆಗಳನ್ನು ಕೂಡ ಹಾಡಿದ್ದಾರೆ.
ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಪಂಜಾಬಿ ಭಾಷೆಯ ಅನೇಕ ವೀಡಿಯೋ ಅಲ್ಬಮ್ ಗಳನ್ನು ಹೊರತಂದಿದ್ದಾರೆ. ಅಷ್ಟೇ ಅಲ್ಲಾ, ಇವರು ಶಿರಡಿ ಸಾಯಿಬಾಬಾರವರ ಮೇಲೆ ಎರಡು ಧ್ವನಿಸುರಳಿಗಳನ್ನು ಹೊರತಂದಿದ್ದಾರೆ.
ಶ್ರೀಮತಿ.ಹರ್ಲೀನ್ ಕೊಹ್ಲಿಯವರ ಸಾಧನೆಯ ಮೈಲಿಗಲ್ಲುಗಳನ್ನು ಈ ಕೆಳಗೆ ಕೊಡಲಾಗಿದೆ:
ಸಾಧನೆಯ ಹೆಜ್ಜೆಗುರುತುಗಳು:
- ಇವರು ತಮ್ಮ ಮೊದಲ ಆಲ್ಬಮ್ "ಸಮ್ ದಿ ದೌರಾಲ್ಯ" ವನ್ನು ಪ್ರಾಂತೀಯ ಭಾಷೆಯಾದ ಗರ್ವಾಲಿ ಭಾಷೆಯಲ್ಲಿ ಮಾಡಿದ್ದಾರೆ.
- ಟೀ-ಸೀರಿಸ್ ನವರು ಪಂಜಾಬಿ ಭಾಷೆಯಲ್ಲಿ ಹೊರತಂದಿರುವ "ಇಶ್ಕ್ ಇಶ್ಕ್" ನಲ್ಲಿ ಹಾಡಿದ್ದಾರೆ.
- ಬೈಸಾಕಿಯ ಅಂಗವಾಗಿ ಹೊರತಂದ ಪಂಜಾಬಿ ಆಲ್ಬಮ್ "ಪಂಜಾಬಿಯಾನ್ ದಿ ಶಾನ್ ವಕ್ರಿ"ಯಲ್ಲಿ ಹಾಡಿದ್ದಾರೆ.
- ಸಹಾರಾ ಏನ್.ಸಿ.ಆರ್ ನ ಟಿವಿ ಷೋ "ಶಿಕಾರ್ ತಕ್" ನಲ್ಲಿ ಹಾಡಿದ್ದಾರೆ.
- ಸಾಯಿಬಾಬಾ ರವರ ಮೇಲೆ ಹೊರತಂದ "ಸಾಯಿ ನೇ ಕಹಾ ಮೇ ಹೂ ನಾ" ನಲ್ಲಿ ಹಾಡಿದ್ದಾರೆ.
- ಸಾಯಿಬಾಬಾರವರ ಮೇಲೆ ಹೊರತಂದ "ಸಾಯಿ ದೇಖ್ ರಹಾ ಹೇ" ದ ಎಲ್ಲ ಹಾಡುಗಳನ್ನು ಹಾಡಿದ್ದಾರೆ.
- ಟಾಗೋರ್ ರಂಗಮಂದಿರ, ಚಂಡೀಘಡ ದಲ್ಲಿ ನಡೆದ ಅನೇಕ ಸಂಗೀತ ಸಂಜೆಗಳಲ್ಲಿ ಲತಾ ಮಂಗೇಶ್ಕರ್, ಮುಕೇಶ್, ಶಿವಕುಮಾರ್ ಬತಾಲ್ವಿ, ಲಕ್ಷ್ಮಿಕಾಂತ್ ಪ್ಯಾರೇಲಾಲ್ ಮತ್ತು ಇನ್ನು ಅನೇಕ ಚಿತ್ರ ಜಗತ್ತಿನ ಖ್ಯಾತನಾಮರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
- ಚಂಡೀಘಡದ ಸುಖ್ನಾ ಲೇಕ್ ನಲ್ಲಿ ನಡೆದ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಚಂಡೀಘಡ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ಚಂಡೀಘಡದ ಪೆರೇಡ್ ಮೈದಾನದಲ್ಲಿ ನಡೆದ ಬೇಸಿಗೆಯ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ಚಂಡೀಘಡದ ರೋಸ್ ಗಾರ್ಡನ್ ನಲ್ಲಿ ನಡೆದು ಪಂಜಾಬ್ ನ ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ರಾಕ್ ಗಾರ್ಡನ್ ನಲ್ಲಿ ನಡೆದು ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಗಿಲ್ ಎಸ್ಟೇಟ್ ನಲ್ಲಿ ನಡೆದ ಮತ್ತು ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ "ಮಿಲಾನಿಯಂ ಮ್ಯುಸಿಕಲ್ ಬ್ಲಾಸ್ಟ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಮೊಹಾಲಿ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ದಿ ಟ್ರಿಬ್ಯೂನ್ ಏರ್ಪಡಿಸಿದ್ದ ಮೊಹಾಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಚಂಡೀಘಡದ ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಕಲಾಗ್ರಾಮ್, ಚಂಡೀಘಡದಲ್ಲಿ ಏರ್ಪಡಿಸಿದ್ದ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ಚಂಡೀಘಡದ ಪ್ರಾಚೀನ ಕಲಾ ಕೇಂದ್ರದಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ಹರಿಯಾಣ ಟೂರಿಸಂ ನವರು ಏರ್ಪಡಿಸಿದ್ದ ಮಾವಿನ ಹಣ್ಣಿನ ಮೇಳದಲ್ಲಿ 3 ಬಾರಿ ಕಾರ್ಯಕ್ರಮ ನೀಡಿದ್ದಾರೆ.
- ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಶಿಮ್ಲಾದ ಗೈಟಿ ಥಿಯೇಟರ್ ನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಚಂಬಾದಲ್ಲಿ 3 ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಜೈಪುರ್ ಕ್ಲಬ್ ನವರು ಏರ್ಪಡಿಸಿದ್ದ ಮೇ ಕ್ವೀನ್ ಬಾಲ್ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾರೆ.
- ಘಾಯ್ ಫಿಲಂಸ್ ನವರು ಗುರ್ ಗಾವ್ ನಲ್ಲಿ ಏರ್ಪಡಿಸಿದ್ದ ದೀಪಾವಳಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
- ಅನೇಕ ಸಾಯಿ ಭಜನ ಸಂಧ್ಯಾ ನೇರ ಪ್ರಸಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಶ್ರೀಮತಿ.ಹರ್ಲೀನ್ ಕೊಹ್ಲಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ವಿಳಾಸ:
ಆಶೀರ್ವಾದ್ ಅಪಾರ್ಟ್ ಮೆಂಟ್ಸ್,
ಪ್ಲಾಟ್ ನಂ.11, ಬಿ-63, ಸೆಕ್ಟರ್ 12,
ದ್ವಾರಕ ,ನವದೆಹಲಿ- 110 075.
+91 11 2803 5002/+91 98919 77624/+91 98919 77258
ಈ ಮೇಲ್ ವಿಳಾಸ:
harleen_music@yahoo.com, riyaazproduction@gmail.com, riyaaz.harleen@gmail.com, saiharleen@gmail.com
ಅಲ್ಬಮ್ ಗಳು:
ಸಾಯಿ ನೇ ಕಹಾ ಮೇ ಹೂ ನಾ, ಸಾಯಿ ದೇಖ್ ರಹಾ ಹೇ
ಭಜನೆಗಳು:
ಅಲ್ಬಮ್ ಗಳು:
ಸಾಯಿ ನೇ ಕಹಾ ಮೇ ಹೂ ನಾ, ಸಾಯಿ ದೇಖ್ ರಹಾ ಹೇ
ಭಜನೆಗಳು:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment