ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ (ನೋಂದಣಿ), ಈಶ್ವರ ಮನೋಹರಿ ಸಂಘ, ನಂ.37, ಶಿವಾಜಿ ರಸ್ತೆ, ಎಲ್ಜಿನ್ ಚಿತ್ರಮಂದಿರದ ಹಿಂಭಾಗ, ಶಿವಾಜಿನಗರ, ಬೆಂಗಳೂರು-560 052. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವನ್ನು 26ನೇ ಫೆಬ್ರವರಿ 1966 ರಂದು ಶ್ರೀ.ಗುರೂಜೀ ರಾಮಸ್ವಾಮಿಯವರು ಪ್ರಾರಂಭಿಸಿದರು. ಮೊದಲು ಈ ಮಂದಿರದಲ್ಲಿ ಸಾಯಿ ಸಮಾಜ, ಮೈಲಾಪುರದಿಂದ ತಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲ್ಪಟ್ಟ ಪುಟ್ಟದಾದ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿತ್ತು.
ಮಂದಿರವನ್ನು ಹೊಸದಾಗಿ ನವೀಕರಿಸಿ ಅಲ್ಲಿ ದೊಡ್ಡದಾದ ಅಮೃತ ಶಿಲೆಯ ಸಾಯಿಬಾಬಾ ವಿಗ್ರಹವನ್ನು 26ನೇ ಫೆಬ್ರವರಿ 2002 ರಂದು ಕರ್ನಾಟಕದ ತುಮಕೂರು ಜಿಲ್ಲೆಯ ಸಿದ್ದಗಂಗಾ ಕ್ಷೇತ್ರದ "ನಡೆದಾಡುವ ದೇವರು" ಎಂದೇ ಪ್ರಸಿದ್ದರಾದ ಡಾ.ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಪ್ರತಿಷ್ಟಾಪಿಸಿದರು.
ಮಂದಿರದಲ್ಲಿ ಅಮೃತ ಶಿಲೆಯ ಸಾಯಿಬಾಬಾ, ಗಣೇಶ, ಕೃಷ್ಣ ದೇವರುಗಳ ವಿಗ್ರಹಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲ್ಪಟ್ಟ ಪುಟ್ಟದಾದ ಸಾಯಿಬಾಬಾರವರ ವಿಗ್ರಹವನ್ನು ನೋಡಬಹುದು.
ಸಾಯಿಬಾಬಾರವರ ಅಮೃತ ಶಿಲೆಯ ಪಾದುಕೆಗಳನ್ನು ಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.
ಧ್ಯಾನ ಮಂದಿರವನ್ನು ಮಂದಿರದ ಮೊದಲನೇ ಮಹಡಿಯಲ್ಲಿ ಸ್ಥಾಪಿಸಲಾಗಿದೆ.
ಪ್ರತಿನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಬೆಳಿಗ್ಗೆ : 9:00 ಘಂಟೆ
ಮಧ್ಯಾನ್ಹ : 12:00 ಘಂಟೆ
ರಾತ್ರಿ : 9:00 ಘಂಟೆ
ಗುರುವಾರಗಳಂದು ಮತ್ತು ವಿಶೇಷ ಉತ್ಸವದ ದಿನಗಳಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 251/- ರುಪಾಯಿಗಳು.
ಗುರುವಾರಗಳಂದು ಮತ್ತು ವಿಶೇಷ ಉತ್ಸವದ ದಿನಗಳಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕ ಮತ್ತು ಪ್ರಸಾದ ಸೇವೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 501/-ರುಪಾಯಿಗಳು.
ವಿಶೇಷ ಉತ್ಸವದ ದಿನಗಳು:
- ಶ್ರೀರಾಮನವಮಿ.
- ದೇವಾಲಯದ ವಾರ್ಷಿಕೋತ್ಸವ 26ನೇ ಫೆಬ್ರವರಿ ಯಂದು.
- ಗುರುಪೂರ್ಣಿಮೆ.
- ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಶಿವಾಜಿ ರಸ್ತೆ, ಎಲ್ಜಿನ್ ಚಿತ್ರಮಂದಿರದ ಹಿಂಭಾಗ
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ (ನೋಂದಣಿ),
ಈಶ್ವರ ಮನೋಹರಿ ಸಂಘ, ನಂ.37, ಶಿವಾಜಿ ರಸ್ತೆ,
ಎಲ್ಜಿನ್ ಚಿತ್ರಮಂದಿರದ ಹಿಂಭಾಗ, ಶಿವಾಜಿನಗರ,
ಬೆಂಗಳೂರು-560 052. ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಸ್.ಓ.ನಾಮದೇವ ರಾವ್ / ಶ್ರೀ.ಪಿ.ಎಸ್.ಚಂದ್ರಶೇಖರ್ / ಶ್ರೀ.ಎಂ.ಬಿ.ವೇಣುಗೋಪಾಲ್ / ಶ್ರೀ.ಆರ್.ಸಾಯಿಕುಮಾರ್ / ಶ್ರೀ.ದೇವಾನಂದ್
ದೂರವಾಣಿ:
+91 98868 16607 / +91 98440 69619 / +91 97402 57744 / +91 98867 51330 / +91 98440 58558
ಮಾರ್ಗಸೂಚಿ:
ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಇಳಿಯುವುದು. 5 ನಿಮಿಷ ನಡೆದರೆ ಸಾಯಿಮಂದಿರ ಸಿಗುತ್ತದೆ. ದೇವಾಲಯವು ಎಲ್ಜಿನ್ ಚಿತ್ರಮಂದಿರದ ಹಿಂಭಾಗದಲ್ಲಿ ಶಿವಾಜಿ ರಸ್ತೆಯಲ್ಲಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment