Monday, March 7, 2011

ಸಾಯಿ ಭಜನ ಗಾಯಕಿ - ಶ್ರೀಮತಿ.ಮೈತ್ರಿ ಶಾಂತೇಶ್ - ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀಮತಿ.ಮೈತ್ರಿ ಶಾಂತೇಶ್ ರವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ  20ನೇ ಜನವರಿ 1956 ರಂದು ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಅಣ್ಣಪ್ಪ ಗುಡಿಗಾರ್ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಕಮಲರವರು. ಇವರು ತಮ್ಮ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿರುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಇವರ ಮನಸ್ಸು ಸಾಯಿಬಾಬಾರವರ ಕಡೆಗೆ ಸೆಳೆಯಿತು. 

ಶ್ರೀಮತಿ.ಮೈತ್ರಿ ಶಾಂತೇಶ್ ರವರು 5ನೇ ನವೆಂಬರ್ 2006 ರಿಂದ ತಮ್ಮ ಮಗಳ ಜೊತೆಗೂಡಿ ಸಾಯಿಭಜನೆಯನ್ನು ಹಾಡಲು ಪ್ರಾರಂಭಿಸಿದರು. ಇವರು ಬೆಂಗಳೂರಿನ ಮೈಸೂರು ರಸ್ತೆಯ ಹುಣಸೆಮರದಪಾಳ್ಯದಲ್ಲಿರುವ ಶಿರಡಿ ಸಾಯಿ ಅನಂದಮಯಿ ಮಂದಿರ ಮತ್ತು ಬೆಂಗಳೂರಿನ ದೊಡ್ಡಬಸ್ತಿಯಲ್ಲಿರುವ ಶಿರಡಿ ಸಾಯಿ ಜ್ಯೋತಿಮಯಿ ಮಂದಿರದಲ್ಲಿ ಸಾಯಿಭಜನೆಯನ್ನು ನಿರಂತರವಾಗಿ ತಪ್ಪದೆ ಮಾಡುತ್ತಾ ಬಂದಿರುತ್ತಾರೆ. 

ಪ್ರಸ್ತುತ ಇವರು ತಮ್ಮ ಪತಿ, ಮಗ ಮತ್ತು ಮಗಳೊಡನೆ ಬೆಂಗಳೂರಿನ ಕೆಂಗೇರಿ ಉಪನಗರದ ನಿವಾಸದಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಾ ಇದ್ದಾರೆ. 

ಶ್ರೀಮತಿ.ಮೈತ್ರಿ ಶಾಂತೇಶ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ: 
ನಂ.672/1, 1ನೇ  ಮಹಡಿ, 
7ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, 
ಕೆಂಗೇರಿ ಉಪನಗರ, ಬೆಂಗಳೂರು-560 060. ಕರ್ನಾಟಕ.

ದೂರವಾಣಿ: 
+91 84533 36959 /+91 92417 75580

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment