ಸಾಯಿ ಸಂಗೀತ ನಿರ್ದೇಶಕ - ಶ್ರೀ.ಸುಧಾಂಶು ಪರಶುರಾಮ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕೃತ ಸಂಗೀತ ನಿರ್ದೇಶಕ ಶ್ರೀ.ಸುಧಾಂಶು ಪರಶುರಾಮ್
ಶ್ರೀ.ಸುಧಾಂಶು ಪರಶುರಾಮ್ ರವರು ಅನನ್ಯ ಸಾಯಿ ಭಕ್ತರು. ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕೃತ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 2 ನೇ ಜೂನ್ 1967 ರಂದು ಮುಂಬೈನಲ್ಲಿ ಜನಿಸಿದರು.ಇವರ ತಂದೆ ಶ್ರೀ.ಪರಶುರಾಮ್ ಮತ್ತು ತಾಯಿ ಶ್ರೀಮತಿ.ವಸುಧಾ. ಇವರು ಎಂ.ಎ.(ಸಾಮಾಜಿಕ ಶಾಸ್ತ್ರ) ಪದವಿಯನ್ನು ಮುಂಬೈ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ಇವರು ತಮ್ಮ 12ನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣವನ್ನು ಪ್ರಾರಂಭಿಸಿದರು. ಇವರು ಪಿಟೀಲು ವಾದನವನ್ನು ಪಂಡಿತ್ ಪುತ್ತೂರು ದೇವದಾಸ ಜೋಷಿ, ಶ್ರೀ.ಡಿ.ಬಾಬಾನಂದ್ ಮತ್ತು ಪಂಡಿತ್ ಮಾಧವ ಡೊಂಗ್ರೆಯವರ ಬಳಿ ಕಲಿತಿರುತ್ತಾರೆ. 1989 ರಿಂದ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ಇವರು ಪ್ರಪ್ರಥಮವಾಗಿ ಅಲ್ಟ್ರಾ ವೀಡಿಯೋ ಸಂಸ್ಥೆಯವರು ಶ್ರೀ.ಗಜಾನನ ಮಹಾರಾಜರವರ ಮೇಲೆ ಹೊರತಂದ ಧ್ವನಿಸುರಳಿಗೆ ಸಂಗೀತ ನಿರ್ದೇಶನ ನೀಡಿರುತ್ತಾರೆ. ಇವರು ಸಂಗೀತ ಸಂಸ್ಥೆಗಳಾದ ಅಲ್ಟ್ರಾ ವೀಡಿಯೋ, ಕಷಿನ್ ಕ್ಯಾಸೆಟ್ ಕಂಪನಿ, ರಿದಂ ಆಡಿಯೋ, ಹೆಚ್.ಎಂ.ವಿ., ಟಿ-ಸೀರಿಸ್, ವೀನಸ್ ಆಡಿಯೋ ಮತ್ತು ಇನ್ನು ಹಲವಾರು ಪ್ರತಿಷ್ಟಿತ ಸಂಗೀತ ಸಂಸ್ಥೆಗಳಿಗೆ ಸಂಗೀತ ನಿರ್ದೇಶಕರಾಗಿ ದುಡಿದಿದ್ದಾರೆ. ಖ್ಯಾತ ಗಾಯಕರುಗಳಾದ ಶ್ರೀ.ಕುಮಾರ್ ಸಾನು, ಕವಿತಾ ಕೃಷ್ಣಮುರ್ತಿ, ವಿನೋದ್ ರಾತೋಡ್, ರವಿಂದ್ರ ಬಿಜೂರ್, ಸಾಧನಾ ಸರ್ಗಮ್ ಮತ್ತು ಇನ್ನು ಹಲವಾರು ಗಾಯಕರುಗಳು ಇವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ನಾನಿಜ್ ಕ್ಷೇತ್ರದ ಜಗದ್ಗುರುಗಳಾದ ಶ್ರೀ.ನರೇಂದ್ರ ಮಹಾರಾಜ್ ರವರ ಆಶ್ರಮದ ಅಧಿಕೃತ ಸಂಗೀತ ನಿರ್ದೇಶಕರು ಎಂಬುದು ಒಂದು ವಿಶೇಷ.
ಇವರು ಸಹ್ಯಾದ್ರಿ ವಾಹಿನಿಯಲ್ಲಿ ಪ್ರಸಾರವಾದ "ಸಂತ ತುಕಾರಾಮ" ಮರಾಠಿ ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಆದಿತ್ಯ ಪಾಂಚಾಲಿ ನಟಿಸಿದ್ದ ಹಿಂದಿ ಚಲನಚಿತ್ರ "ಜಂಜೀರ್ ದ ಚೈನ್" ಎಂಬ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜ್ಯೂನಿಯರ್ ಮಹಮುದ್ ನಿರ್ದೇಶನದ 3 ಮರಾಠಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುತ್ತಾರೆ.
ಇವರು ಸಂಗೀತ ನಿರ್ದೇಶನ ಮಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ "ಆರತಿ" ಆಡಿಯೋ ಮತ್ತು ವೀಡಿಯೊ ಮತ್ತು ತೋಡ ಧ್ಯಾನ್ ಲಗಾ ಧ್ವನಿಸುರಳಿಗಳು ದಾಖಲೆ ಮಾರಾಟವಾಗಿ ಇವರಿಗೆ ಬಹಳ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ತಂದುಕೊಟ್ಟಿವೆ.
ಪ್ರಸ್ತುತ ಇವರು ಖ್ಯಾತ ಗಾಯಕ ಶ್ರೀ.ಹರಿಹರನ್ ರವರ ಜೊತೆಗೂಡಿ ಶಿರಡಿ ಸಾಯಿಬಾಬಾರವರ ಮೇಲೆ ಹೊಸ ಧ್ವನಿಸುರಳಿ ತರುವ ಪ್ರಯತ್ನದಲ್ಲಿದ್ದಾರೆ.
ಇವರು ತಮ್ಮ ಮುಂದಿನ ದಿನಗಳಲ್ಲಿ ಸಂಪೂರ್ಣ ಸಾಯಿ ಸಚ್ಚರಿತೆಯ ವೀಡಿಯೋವನ್ನು ಆಂಗ್ಲ, ಜರ್ಮನ್, ಸ್ಪಾನಿಶ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ತರುವ ಇಚ್ಚೆಯನ್ನು ಹೊಂದಿದ್ದಾರೆ.
ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ಸಂಪರ್ಕದ ವಿವರಗಳು:
ಹೆಸರು:
ಶ್ರೀ.ಸುಧಾಂಶು ಪರಶುರಾಮ್
ವಿಳಾಸ:
ಫ್ಲಾಟ್ - ಐ-234, ಅರ್ಥ್ ರೆಸಿಡೆನ್ಸಿ, ಡಿ.ಎನ್.ದುಬೆ ರಸ್ತೆ, ದಹಿಸಾರ್ ಪೂರ್ವ, ಮುಂಬೈ-400 068.
ದೂರವಾಣಿ ಸಂಖ್ಯೆ:
92243 27105
ಇಮೇಲ್ ವಿಳಾಸ:
Sudhaunshu.mudi@gmail.com
ಅಲ್ಬಮ್ ಗಳು:
ಶಿರಡಿ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ ಆರತಿ ಆಡಿಯೋ ಮತ್ತು ವಿಡಿಯೋ, ತೋಡಾ ಧ್ಯಾನ್ ಲಗಾ, ಸಾಯಿ ಕೆ ಚರಣೋ ಮೇ, ಸಾಯಿ ತೇರೇ ಕೃಪಾ ಸೇ, ಗ್ಲಿಮ್ಸಸ್ ಆಫ್ ಸಾಯಿಬಾಬಾ ಡಿವಿಡಿ, ಸಾಯಿ ಸದ್ಗುರು ಮೇರೆ ಸಾಯಿ, ಸಚ್ಚಿದಾನಂದ ಸಾಯಿನಾಥ ಮತ್ತು ಇನ್ನು ಹಲವಾರು ಧ್ವನಿಸುರಳಿಗಳು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment