ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಸಹಕಾರ ನಗರ ಪೋಸ್ಟ್, ಕೊಡಿಗೆಹಳ್ಳಿ, ಬೆಂಗಳೂರು-560 092. ಕರ್ನಾಟಕ - ಕೃಪೆ: ಸಾಯಿ ಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ಸಹಕಾರ ನಗರದಲ್ಲಿರುವ ಕೊಡಿಗೆಹಳ್ಳಿಯ ಕೊನೆಯ ಬಸ್ ನಿಲ್ದಾಣದ ಬಳಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ದೇವಾಲಯವು 3ನೇ ಮಾರ್ಚ್ 2004 ರಂದು ಉದ್ಘಾಟನೆಗೊಂಡಿತು.
- ದೇವಾಲಯದಲ್ಲಿ ಬೆಳ್ಳಿಯ ಸಿಂಹಾಸನದ ಮೇಲೆ ಕುಳಿತಿರುವ ಮತ್ತು ಹಿಂಭಾಗದಲ್ಲಿ ಬೆಳ್ಳಿಯ ಪ್ರಭಾವಳಿಯನ್ನು ಹೊಂದಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವನ್ನು ಸಾಯಿಭಕ್ತರು ನೋಡಬಹುದು.
- ದೇವಾಲಯದ ಗರ್ಭಗುಡಿಯ ಹೊರಗಡೆ ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ಇರುವಂತೆ ಸಾಯಿಬಾಬಾರವರ ಅಮೃತ ಶಿಲೆಯ ಪಾದುಕೆ ಮತ್ತು ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
- ಸಾಯಿಬಾಬಾರವರ ವಿಗ್ರಹ ಮತ್ತು ನಂದಿಯ ನಡುವೆ ಇರುವ ದೇವಾಲಯದ ಮದ್ಯಭಾಗದಲ್ಲಿ ಅಮೃತಶಿಲೆಯ ಕೂರ್ಮವನ್ನು ಸ್ಥಾಪಿಸಲಾಗಿದೆ.
- ದೇವಾಲಯದ ಹೊರಭಾಗದಲ್ಲಿ ಮಹಾದ್ವಾರದ ಬಳಿ ಕಪ್ಪು ಶಿಲೆಯ ಅಂಜನೇಯ, ದತ್ತಾತ್ರೇಯ, ಶಿವಲಿಂಗ ಮತ್ತು ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
- ದೇವಾಲಯದ ಹೊರಭಾಗದಲ್ಲಿರುವ ಪವಿತ್ರ ಅರಳಿ ಮರದ ಕೆಳಗಡೆ ಕಪ್ಪು ಶಿಲೆಯ ಗಣಪತಿ, ನಾಗದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ದೇವಾಲಯದ ಹೊರನೋಟ
ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ
ಅಮೃತ ಶಿಲೆಯ ನಂದಿ ಮತ್ತು ಪಾದುಕೆಗಳು
ಪವಿತ್ರ ಧುನಿ ಮಾ
ಆಂಜನೇಯ, ದತ್ತಾತ್ರೇಯ ಮತ್ತು ಈಶ್ವರ ಲಿಂಗ
ಗಣಪತಿಯ ವಿಗ್ರಹ
ನಾಗದೇವರುಗಳ ವಿಗ್ರಹ
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಆರತಿ | ಸಮಯ |
ಕಾಕಡಾ ಆರತಿ | 6:30 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:00 PM |
ಶೇಜಾರತಿ | 8:00 PM |
ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 40/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 30/- ರುಪಾಯಿಗಳು.
ವಿಶೇಷ ಉತ್ಸವದ ದಿನಗಳಂದು ಸಾಯಿ ಭಕ್ತರು ಪ್ರಸಾದ ಸೇವೆ, ವಸ್ತ್ರ ಸೇವೆ ಮತ್ತು ಹೂವಿನ ಅಲಂಕಾರಗಳಿಗೆ ಉದಾರವಾಗಿ ದೇಣಿಗೆಯನ್ನು ನೀಡಬಹುದು.
ಪ್ರತಿನಿತ್ಯ ಸಂಜೆ 6:30 ರಿಂದ 8:00 ಘಂಟೆಯವರೆಗೆ ವಿವಿಧ ಸಾಯಿ ಭಜನ ಮಂಡಳಿಯವರಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.
ವಿಶೇಷ ಉತ್ಸವದ ದಿನಗಳು:
- ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 3ನೇ ಮಾರ್ಚ್.
- ಸಂಕ್ರಾಂತಿ.
- ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
- ದತ್ತ ಜಯಂತಿ.
- ವೈಕುಂಠ ಏಕಾದಶಿ.
- ಗುರು ಪೂರ್ಣಿಮಾ.
- ಹನುಮಜ್ಜಯಂತಿ.
ಸ್ಥಳ:
ರಾಜ್ ಮುರಳಿ ಚಿತ್ರಮಂದಿರದ ಬಳಿ, ಕೊಡಿಗೆಹಳ್ಳಿ ಕಡೆ ಬಸ್ ನಿಲ್ದಾಣದ ಹತ್ತಿರ
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಸಹಕಾರ ನಗರ ಪೋಸ್ಟ್, ಕೊಡಿಗೆಹಳ್ಳಿ, ಬೆಂಗಳೂರು-560 092. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ನಂಜುಂಡಪ್ಪ - ಅಧ್ಯಕ್ಷರು / ಶ್ರೀ.ನಂಜಪ್ಪ - ಕಾರ್ಯದರ್ಶಿ / ಶ್ರೀಮತಿ.ಮೈಥಿಲಿ ರಾಘವನ್ - ಖಚಾಂಚಿ / ಶ್ರೀ.ಪ್ರಶಾಂತ್ ಆಚಾರ್ಯ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
95389 02041 / 99160 39193
ಮಾರ್ಗಸೂಚಿ:
ಕೊಡಿಗೆಹಳ್ಳಿ ಕಡೆಯ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆ. ದೇವಾಲಯವು ರಾಜ್ ಮುರಳಿ ಚಿತ್ರಮಂದಿರದ ಬಳಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment