ಸಾಯಿ ಭಜನ ಗಾಯಕಿ - ಶ್ರೀಮತಿ.ವಸುಧಾ ಗಿರಿಧರ್ - ಕೃಪೆ:ಸಾಯಿ ಅಮೃತಧಾರಾ.ಕಾಂ
ಶ್ರೀಮತಿ.ವಸುಧಾ ಗಿರಿಧರ್
ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾದ ಶ್ರೀಮತಿ.ವಸುಧಾ ಗಿರಿಧರ್ ರವರು 3ನೇ ಜುಲೈ 1973 ರಂದು ಜನಿಸಿದರು. ಇವರ ತಂದೆ ಶ್ರೀ. ಉಡುಪಿ ವಾಸುದೇವ ಭಟ್ ಮತ್ತು ಇವರ ತಾಯಿ ಶ್ರೀಮತಿ.ಸುನಂದಾ ಭಟ್. ಇವರು ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನು ಪಡೆದಿದ್ದಾರೆ.
ಇವರ ತಂದೆಯವರು ಪ್ರಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ್ದರಿಂದ ಇವರ ಪ್ರಾಥಮಿಕ ಸಂಗೀತ ಶಿಕ್ಷಣ ಚಿಕ್ಕ ವಯಸ್ಸಿನಿಂದಲೇ ತಂದೆಯವರ ಬಳಿ ಶುರುವಾಯಿತು. ಬಳಿಕ ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನು ಗಳಿಸಿದರು.
ಸಾಧನೆಯ ಹೆಜ್ಜೆ ಗುರುತು:
- ಆಕಾಶವಾಣಿಯ ಭಕ್ತಿಗೀತೆಗಳು ಮತ್ತು ಕನ್ನಡ ಪದ್ಯಗಳ ವಿಭಾಗದಲ್ಲಿ "ಬಿ ಹೈ" ಶ್ರೇಣಿಯ ಗಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
- ಇವರು ತಿರುಮಲ ತಿರುಪತಿ ದೇವಾಲಯದಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
- ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರಾದ ಶ್ರೀ.ಬಿ.ಕೆ.ಚಂದ್ರಶೇಖರ್, ಶ್ರೀ.ಹಂಸಲೇಖ, ಶ್ರೀ.ಗುರುಕಿರಣ್, ಶ್ರೀ.ವಿ.ಮನೋಹರ್, ಶ್ರೀ.ಎಂ.ಎಸ್.ಗಿರಿಧರ್, ಶ್ರೀ.ಹರಿಕೃಷ್ಣ, ಶ್ರೀ.ಮಣಿಕಂಠ ರವರ ಚಿತ್ರಗಳಲ್ಲಿ ಹಾಡಿದ್ದಾರೆ.
- ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರ ಆಡಿಯೋ ಅಲ್ಬಮ್ ಗಳಿಗೆ ಹಾಡಿದ್ದಾರೆ.
- ರಾಷ್ಟ್ರೀಯ ದೂರದರ್ಶನ, ಡಿಡಿ ಚಂದನ, ಉದಯ ಟಿವಿ, ಶಂಕರ ಟಿವಿ, ಸುವರ್ಣ ಟಿವಿ, ಈ-ಟಿವಿ ಕನ್ನಡ ವಾಹಿನಿಗಳಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಿದ್ದಾರೆ.
- ಕರ್ನಾಟಕದಾದ್ಯಂತ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
- ಭಜನೆಗಳನ್ನು ಹಾಡುವುದರಲ್ಲಿ ಇವರು ಸಿದ್ಧಹಸ್ತರು.
- 2009ನೇ ಸಾಲಿನ ಮಯುರ ವರ್ಷದ ಶ್ರೇಷ್ಠ ಗಾಯಕಿ ಪ್ರಶಸ್ತಿ.
- ಉಡುಪಿ ಮಠದ ಶ್ರೀ.ವಿಶ್ವೇಶ್ವರ ತೀರ್ಥ ಸ್ವಾಮಿಗಳವರಿಂದ ಕೃಷ್ಣಾನುಗ್ರಹ ಪ್ರಶಸ್ತಿ.
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:
ಗಾಯಕಿಯ ಹೆಸರು | ವಸುಧಾ ಗಿರಿಧರ್ |
ವಿಳಾಸ | 271, “ಶ್ರೀ ಸುಮೇರು", 4ನೇ ಅಡ್ಡರಸ್ತೆ, ೫ ನೇ ಮುಖ್ಯರಸ್ತೆ, ವಯ್ಯಾಲಿಕಾವಲ್ ಬಡಾವಣೆ, ವಿಜಯನಗರ, ಬೆಂಗಳೂರು-560 040. |
ದೂರವಾಣಿ | 98806 60502 |
ಈ ಮೇಲ್ | vasugiriaithal@gmail.com |
ವೆಬ್ ಸೈಟ್ | ಇಲ್ಲ |
ಅಲ್ಬಮ್ ಗಳು | ರಾಜಾಧಿರಾಜ, ಸಾಯಿ ಸ್ಮರಣ್ (ಸಾಯಿ ಭಕ್ತಿ ಗೀತೆಗಳು) |
ಭಜನೆಗಳು | ಸುಮಾರು 2000ಕ್ಕೂ ಹೆಚ್ಚು ಭಜನೆಗಳನ್ನು ಹಾಡಿದ್ದಾರೆ. |
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment