ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ನಾಗಲಿಂಗೇಶ್ವರ ಸ್ವಾಮಿ ಮತ್ತು ಶಿವ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ, ಆನಂದ ರಾವ್ ವೃತ್ತ, ಬೆಂಗಳೂರು-560 009. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ಹೃದಯ ಭಾಗವಾದ ಮಜೆಸ್ಟಿಕ್ ಬಳಿಯ ಆನಂದ ರಾವ್ ವೃತ್ತದ ಬಳಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ದೇವಾಲಯದ ಭೂಮಿ ಪೂಜೆಯನ್ನು 26ನೇ ಫೆಬ್ರವರಿ 1985 ರಂದು ನೆರವೇರಿಸಲಾಯಿತು.
- ಈ ದೇವಾಲಯದ ಉದ್ಘಾಟನೆಯನ್ನು 26ನೇ ಏಪ್ರಿಲ್ 2001 ರಂದು ಶ್ರೀ.ಶ್ರೀ.ಶ್ರೀ.ಶಿವರಾತ್ರೀಶ್ವರ ಸ್ವಾಮೀಜಿ, ಶ್ರೀ.ಶ್ರೀ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ.ಶ್ರೀ.ಶ್ರೀ.ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮತ್ತು ಬೇಲಿ ಮಠದ ಶ್ರೀ.ಶ್ರೀ.ಶ್ರೀ.ಶಿವರುದ್ರ ಸ್ವಾಮೀಜಿ ಯವರುಗಳು ನೆರವೇರಿಸಿದರು.
- ದೇವಾಲಯದಲ್ಲಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವಿದೆ. ಅಲ್ಲದೇ, ಕಪ್ಪು ಶಿಲೆಯ ನಾಗಲಿಂಗೇಶ್ವರ, ಪಾರ್ವತಿ ದೇವಿ, ಗಣಪತಿ, ನವಗ್ರಹ, ನಾಗ ದೇವರುಗಳು ಮತ್ತು ಶನೀಶ್ವರ ಸ್ವಾಮಿಯ ವಿಗ್ರಹಗಳಿವೆ.
- ದೇವಾಲಯದಲ್ಲಿ ಪವಿತ್ರ ಧುನಿ ಮಾ ಮತ್ತು ನಂದಾ ದೀಪ ಇರುತ್ತದೆ.
ದೇವಾಲಯದ ಹೊರನೋಟ
ದೇವಾಲಯದ ರಾಜಗೋಪುರ
ಗಣಪತಿಯ ವಿಗ್ರಹ
ಪಾರ್ವತಿ ದೇವಿಯ ವಿಗ್ರಹ
ನಾಗ ಲಿಂಗೇಶ್ವರ ಸ್ವಾಮಿಯ ವಿಗ್ರಹ
ಶಿರಡಿ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳು
ಪವಿತ್ರ ಧುನಿ ಮಾ
ನವಗ್ರಹ ದೇವರುಗಳು
ನಾಗದೇವರುಗಳ ವಿಗ್ರಹ
ಶನೇಶ್ವರ ಸ್ವಾಮಿಯ ವಿಗ್ರಹ
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಮತ್ತು ಗುರುವಾರ ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಪ್ರತಿದಿನ ಸಂಜೆ 6 ಘಂಟೆಗೆ
ಶೇಜಾರತಿ: ಪ್ರತಿದಿನ ರಾತ್ರಿ 8 ಘಂಟೆಗೆ ಮತ್ತು ಗುರುವಾರ ರಾತ್ರಿ 10 ಘಂಟೆಗೆ
ಪ್ರತಿನಿತ್ಯ ಅಭಿಷೇಕ ಕಾರ್ಯಕ್ರಮವಿರುತ್ತದೆ.
ಪ್ರತಿ ತಿಂಗಳ ಚತುರ್ಥಿಯಂದು ಸಾಯಂಕಾಲ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
ಪ್ರತಿ ಶನಿವಾರ ಬೆಳಿಗ್ಗೆ ಶನೇಶ್ವರ ದೇವರಿಗೆ ವಿಶೇಷ ತೈಲಾಭಿಷೇಕ ನಡೆಯುತ್ತದೆ.
ಪ್ರತಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಹೋಮವನ್ನು ಮಾಡಲಾಗುತ್ತದೆ.
ವಿಶೇಷ ಉತ್ಸವದ ದಿನಗಳು:
- ಶಿವರಾತ್ರಿ - ದೇವಾಲಯದ ವಾರ್ಷಿಕೋತ್ಸವ.
- ಶ್ರೀರಾಮನವಮಿ.
- ಗುರುಪೂರ್ಣಿಮ.
- ವಿಜಯದಶಮಿ - ಸಾಯಿಬಾಬಾ ಸಮಾಧಿ ದಿವಸ - ಸಾಯಿಬಾಬಾರವರ ವಿಗ್ರಹದ ಮೆರವಣಿಗೆ ಕಾರ್ಯಕ್ರಮ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ, ಆನಂದ ರಾವ್ ವೃತ್ತ.
ವಿಳಾಸ:
ಶ್ರೀ ನಾಗಲಿಂಗೇಶ್ವರ ಸ್ವಾಮಿ ಮತ್ತು ಶಿವ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ),
ಪಿಡಬ್ಲ್ಯೂಡಿ ಕಚೇರಿ ಆವರಣ, ಎಸ್.ಸಿ.ರಸ್ತೆ,
ಆನಂದ ರಾವ್ ವೃತ್ತ, ಬೆಂಗಳೂರು-560 009. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಎಲ್.ಮಹದೇವಪ್ಪ.
ದೂರವಾಣಿ ಸಂಖ್ಯೆ:
080-2337 6948 / 98458 33138
ಮಾರ್ಗಸೂಚಿ:
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆ. ದೇವಾಲಯವು ಆನಂದ ರಾವ್ ವೃತ್ತದ ಬಳಿಯಿರುವ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment