ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, 28-416, ಆರ್.ಟನ್, ಕನ್ನಯ್ಯ ನಾಯ್ಡು ಕಾಲೋನಿ, ಗಂಗನಪಲ್ಲಿ, ಚಿತ್ತೂರು-517 001, ಆಂಧ್ರ ಪ್ರದೇಶ- ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಮುರುಗೇಶ್ ಎಂಬ ಅನನ್ಯ ಸಾಯಿಭಕ್ತರು ತಮ್ಮ ಮನೆಯ ಒಂದು ಭಾಗವನ್ನೇ ಸಾಯಿಬಾಬಾರವರ ಮಂದಿರವನ್ನಾಗಿ ಪರಿವರ್ತಿಸಿ ನಡೆಸುತ್ತಿದ್ದಾರೆ ಎಂಬುದು ಈ ಮಂದಿರದ ವಿಶೇಷ. ಈ ಮಂದಿರವು ಚಿತ್ತೂರಿನಿಂದ ಸ್ವಲ್ಪ ದೂರದಲ್ಲಿರುವ ಗಂಗನಪಲ್ಲಿ ಎಂಬ ಗ್ರಾಮದಲ್ಲಿರುತ್ತದೆ.
ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ಮಂದಿರವು 1997ನೇ ಇಸವಿಯ ವಿಜಯದಶಮಿಯ ಪವಿತ್ರ ದಿನದಂದು ಉದ್ಘಾಟನೆಗೊಂಡಿತು.
- ಈ ಮಂದಿರದಲ್ಲಿ ಒಂದು ದೊಡ್ದದಾದ ಮತ್ತು ಮತ್ತೊಂದು ಚಿಕ್ಕ ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು.
- ಸಾಯಿಬಾಬಾರವರ ವಿವಿಧ ಭಂಗಿಯ ಆಳೆತ್ತರದ ಚಿತ್ರಪಟವನ್ನು ಮಂದಿರದ ಒಳಗಡೆ ತೂಗುಹಾಕಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ | ಸಮಯ |
ಕಾಕಡ ಆರತಿ | 6:00 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:00 PM |
ಶೇಜಾರತಿ | 9:30 PM |
ಪ್ರತಿದಿನ ಬೆಳಗಿನ ಜಾವ 7 ಘಂಟೆಗೆ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ.
ವಿಶೇಷ ಉತ್ಸವದ ದಿನಗಳು:
- ಶ್ರೀರಾಮನವಮಿ.
- ಗುರುಪೂರ್ಣಿಮೆ.
- ವಿಜಯದಶಮಿ.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ
28-416, ಆರ್.ಟನ್, ಕನ್ನಯ್ಯ ನಾಯ್ಡು ಕಾಲೋನಿ
ಗಂಗನಪಲ್ಲಿ, ಚಿತ್ತೂರು-517 001, ಆಂಧ್ರ ಪ್ರದೇಶ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಮುರುಗೇಶ್
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
+91 93933 06224
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment