ಸಾಯಿ ಭಜನ ಗಾಯಕ - ಶ್ರೀ.ಸಂಜೀವ್ ಅರೋರ (ಕೃಷ್ಣಾ ಜೀ) - ಕೃಪೆ: ಸಾಯಿಅಮೃತಧಾರಾ.ಕಾಂ
ಸಾಯಿ ಭಜನ ಗಾಯಕ ಶ್ರೀ.ಸಂಜೀವ್ ಅರೋರ
ಅನನ್ಯ ಸಾಯಿ ಭಕ್ತರಾದ ಶ್ರೀ.ಸಂಜೀವ್ ಅರೋರ ಅವರು 2004 ರಿಂದ ಭಾರತದ ನವದೆಹಲಿ ಮತ್ತು ಎನ್.ಸಿ.ಆರ್. ಪ್ರದೇಶಗಳಲ್ಲಿ ತಮ್ಮ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರು 9ನೇ ಸೆಪ್ಟೆಂಬರ್ 1972 ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಶ್ರೀ.ವಿನೋದ್ ಅರೋರ ಮತ್ತು ತಾಯಿ ಶ್ರೀಮತಿ.ಚಂದ್ರಪ್ರಭ. ಇವರು ಬಿ.ಎ.(ಆಂಗ್ಲ ಭಾಷೆ), ಬಿಎಡ್, ಎಂಬಿಎ ಹಾಗೂ ಮಕ್ಕಳ ಮನಶ್ಯಾಸ್ತ್ರದಲ್ಲಿ ಡಿಪ್ಲೋಮಾ ಪದವಿಯನ್ನು ಡೆಹರಾಡೂನ್ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ಇಲ್ಲಿಯವರೆವಿಗೂ ಇವರು ಸರಿ ಸುಮಾರು 100ಕ್ಕೂ ಹೆಚ್ಚು ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರು ತಮ್ಮ ಯಾವುದೇ ಕಾರ್ಯಕ್ರಮಗಳಿಗೆ ಹಣವನ್ನು ಪಡೆಯುವುದಿಲ್ಲ ಎಂಬುದು ಒಂದು ವಿಶೇಷ ಸಂಗತಿ. ಇವರು ಮಕ್ಕಳ ಮನಶ್ಯಾಸ್ತ್ರ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದು ಅನಂತ ಸಾಯಿ ಇನ್ಸ್ಟಿಟ್ಯೂಟ್ ಮತ್ತು ಕನ್ಸಲ್ಟೆಂಟ್ ಎಂಬ ತಮ್ಮದೇ ಆದ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರು ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದಿರುತ್ತಾರೆ.
ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ಸಂಪರ್ಕದ ವಿವರಗಳು:
ಗಾಯಕರ ಹೆಸರು :
ಶ್ರೀ.ಸಂಜೀವ್ ಅರೋರ (ಕೃಷ್ಣಾ ಜೀ)
ವಿಳಾಸ :
ಮನೆ: 1544, ದೀನಾನಾಥ್ ಬಿಲ್ಡಿಂಗ್, ಚಂದ್ರವಾಲ್ ರಸ್ತೆ, ಸಬ್ಜಿ ಮಂಡಿ, ನವದೆಹಲಿ-110 007.
ಕಚೇರಿ: ಅನಂತ ಸಾಯಿ ಇನ್ಸ್ಟಿಟ್ಯೂಟ್ ಮತ್ತು ಕನ್ಸಲ್ಟೆಂಟ್, ಫ್ಲಾಟ್ ನಂ.2, 1ನೇ ಮಹಡಿ, ರಾಮದುರ್ಗ ಬಿಲ್ಡಿಂಗ್, ಜವಾಹರ್ ನಗರ, ಮಲ್ಕಾಗಂಜ್ ವೃತ್ತ, ನಾರ್ತ್ ಕ್ಯಾಂಪಸ್, ದೆಹಲಿ ವಿಶ್ವವಿದ್ಯಾನಿಲಯ, ನವದೆಹಲಿ-110 007.
ದೂರವಾಣಿ ಸಂಖ್ಯೆಗಳು:
99900 01001 / 92119 96655 / 93508 07847 / 99909 01001
ಇಮೇಲ್ ವಿಳಾಸ:
asicindia@gmail.com
asicdelhi@gmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment