Friday, December 10, 2010

ಬೆಂಗಳೂರಿನ ಸಾಯಿ ಮಂದಿರ - ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ನಂ.69, 2ನೇ ಮುಖ್ಯರಸ್ತೆ, ಮಾತೃ ಬಡಾವಣೆ, ಯಲಹಂಕ ನ್ಯೂ ಟೌನ್, ಜಿ.ಕೆ.ವಿ.ಕೆ.ಪೋಸ್ಟ್, ಬೆಂಗಳೂರು-560 065. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ಈ ದೇವಾಲಯವನ್ನು ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿರುವ ಪ್ರತಿಷ್ಟಿತ "ಮದರ್ ಡೈರಿ" ಯ ಪಕ್ಕದಲ್ಲಿರುವ ಮಾತೃ ಬಡಾವಣೆಯಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಭೂಮಿ ಪೂಜೆಯನ್ನು ಡಿಸೆಂಬರ್ 2003 ರಲ್ಲಿ ಮಾಡಲಾಯಿತು. 
  • ಈ ದೇವಾಲಯವನ್ನು 23ನೇ ಡಿಸೆಂಬರ್ 2003 ರಂದು ಹೇಮಾಡಪಂತರ ಸಾಯಿ ಸಚ್ಚರಿತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವ ಶ್ರೀ.ಎನ್.ಎಸ್.ಅನಂತರಾಮು ರವರು ಉದ್ಘಾಟಿಸಿದರು. 
  • ಈ ದೇವಾಲಯದಲ್ಲಿ ಸುಮಾರು 83 ಕೆಜಿ ತೂಕದ ಮತ್ತು ಸುಮಾರು 3 ಅಡಿ ಎತ್ತರದ ಸುಂದರ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಅಮೃತಶಿಲೆಯ ಚಿಕ್ಕ ವಿಗ್ರಹವು ಕೂಡ ದೇವಾಲಯದಲ್ಲಿದ್ದು ಅದನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತದೆ. ಪಂಚಲೋಹದ ಸಾಯಿಬಾಬಾರವರ ವಿಗ್ರಹದ ಮುಂದೆ ಅಮೃತಶಿಲೆಯ ಸುಂದರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
 ದೇವಾಲಯದ ಹೊರನೋಟ

 ಸಾಯಿಬಾಬಾರವರ ಪಂಚಲೋಹದ ವಿಗ್ರಹ 

ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ

ಅಮೃತ ಶಿಲೆಯ ಪಾದುಕೆಗಳು

ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6:30 ಕ್ಕೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6:30 ಕ್ಕೆ
ಶೇಜಾರತಿ: ರಾತ್ರಿ 8:30 ಕ್ಕೆ


ಪ್ರತಿನಿತ್ಯ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು.

ಪ್ರತಿನಿತ್ಯ ಸಾಯಿಬಾಬಾರವರ ವಿಗ್ರಹಕ್ಕೆ ಬೆಳಿಗ್ಗೆ 8:30 ಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 51/- ರುಪಾಯಿಗಳು.ವಿಶೇಷ ಉತ್ಸವದ ದಿನಗಳಲ್ಲಿ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಸಾಯಿಭಕ್ತರೆ ಸ್ವತಃ ಅಭಿಷೇಕವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾಶುಲ್ಕ 101/- ರುಪಾಯಿಗಳು.

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:00 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ.  ಸೇವಾಶುಲ್ಕ 25/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳಲ್ಲಿ ವಿಶೇಷ ಹೋಮಗಳನ್ನು ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.

ವಿಶೇಷ ಉತ್ಸವದ ದಿನಗಳು:

  1. ಶ್ರೀರಾಮನವಮಿ 
  2. ಗುರುಪೂರ್ಣಿಮೆ 
  3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
  4. ದತ್ತ ಜಯಂತಿ
  5. ಪ್ರತಿ ವರ್ಷದ 31ನೇ ಡಿಸೆಂಬರ್ ಹೊಸ ವರ್ಷದ ಅಂಗವಾಗಿ ರಾತ್ರಿ 9 ಘಂಟೆಯಿಂದ ವಿಶೇಷ ಗಾಯತ್ರಿ ಹೋಮವನ್ನು   ಆಚರಿಸಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ: 
ಮದರ್ ಡೈರಿ ವೃತ್ತದ ಹತ್ತಿರ, ಯಲಹಂಕ ನ್ಯೂ ಟೌನ್.

ವಿಳಾಸ:  
ಸಾಯಿ ಮಂದಿರ 
ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ)
ನಂ.69, 2ನೇ  ಮುಖ್ಯರಸ್ತೆ, ಮಾತೃ ಬಡಾವಣೆ, 
ಯಲಹಂಕ ನ್ಯೂ ಟೌನ್, ಜಿ.ಕೆ.ವಿ.ಕೆ.ಪೋಸ್ಟ್, ಬೆಂಗಳೂರು-560 065. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ ಡಿ.ಲಕ್ಷ್ಮಯ್ಯ / ಶ್ರೀ.ಪುಟ್ಟಸ್ವಾಮಿ ಗೌಡ / ಶ್ರೀ.ರಾಮಪ್ಪ.

ದೂರವಾಣಿ ಸಂಖ್ಯೆಗಳು: 
080-2846 3790 / +91 94483 13097 / +91 76763 88175  

ಈ ಮೇಲ್ ವಿಳಾಸ: 
aravind0pinky@gmail.com

ಮಾರ್ಗಸೂಚಿ: 
ಮದರ್ ಡೈರಿ ವೃತ್ತ,ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದಲ್ಲಿ ಇಳಿಯುವುದು. 2 ನಿಮಿಷದ ನಡೆದರೆ ದೇವಾಲಯ ಸಿಗುತ್ತದೆ. ಮೆಜಿಸ್ಟಿಕ್ ನಿಂದ ಬಸ್ ಗಳು: 284-A,D,401D; ಮಾರುಕಟ್ಟೆ:284-A,401-D; ಶಿವಾಜಿನಗರ: 284-B; ಯಶವಂತಪುರದಿಂದ: 401-A,B,H.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment