ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಸಾಯಿರಾಮ ದೇವಸ್ಥಾನ, ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ( ನೋಂದಣಿ), 7ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಗುರುರಾಜ ಬಡಾವಣೆ, ಬನಶಂಕರಿ 3ನೇ ಹಂತ, ತ್ಯಾಗರಾಜನಗರ, ಬೆಂಗಳೂರು-560 028. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ದಕ್ಷಿಣ ಭಾಗದ ಪ್ರತಿಷ್ಟಿತ ಬಡಾವಣೆಯಾದ ಬನಶಂಕರಿ 3ನೇ ಹಂತದಲ್ಲಿದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
ಓಂ ಶಕ್ತಿ ದೇವಾಲಯದ ಭೂಮಿಪೂಜೆಯು 12ನೇ ಮಾರ್ಚ್ 1991 ರಲ್ಲಿ ಹಾಗೂ ಶಿರಡಿ ಸಾಯಿಬಾಬಾ ದೇವಾಲಯದ ಭೂಮಿ ಪೂಜೆಯು 12ನೇ ಮಾರ್ಚ್ 2009 ರಲ್ಲಿ ನಡೆಯಿತು.
ಓಂ ಶಕ್ತಿ ದೇವಾಲಯವನ್ನು 12ನೇ ಮಾರ್ಚ್ 1992 ರಂದು ಆದಿಚುಂಚನಗಿರಿ ಮಠದ ಸ್ವಾಮೀಜಿಯವರು ಉದ್ಘಾಟಿಸಿದರು. ಶಿರಡಿ ಸಾಯಿಬಾಬಾ ದೇವಾಲಯವನ್ನು 17ನೇ ಅಕ್ಟೋಬರ್ 2010 ರ ವಿಜಯದಶಮಿಯಂದು ಶ್ರೀಮತಿ.ಶ್ರೀದೇವಿ ಮತ್ತು ಶ್ರೀ.ಮಾರುತಿಯವರು ಉದ್ಘಾಟಿಸಿದರು.
ಈ ದೇವಾಲಯದ ಪ್ರಾಂಗಣದಲ್ಲಿ ಓಂ ಶಕ್ತಿಯ ಎರಡು ದೇವಾಲಯಗಳು (ಒಂದು ಸಣ್ಣ ವಿಗ್ರಹ ಮತ್ತೊಂದು ದೊಡ್ಡ ವಿಗ್ರಹ), ಪಂಚಮುಖಿ ಅಂಜನೇಯನ ದೇವಾಲಯ, ಶಿವನ ದೇವಾಲಯ, ಗಣಪತಿ ದೇವಾಲಯ, ಕಾಳಿಕಾ ದೇವಿಯ ಭವ್ಯವಾದ ವಿಗ್ರಹ, ನವಗ್ರಹಗಳು ಎಡಭಾಗದಲ್ಲಿದ್ದು, ಶಿರಡಿ ಸಾಯಿಬಾಬಾರವರ ದೇವಾಲಯವು ಬಲಭಾಗದಲ್ಲಿದೆ. ಇಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವಿದೆ.
ದೇವಾಲಯದ ಹೊರನೋಟ
ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ
ಅಮೃತ ಶಿಲೆಯ ಪಾದುಕೆಗಳು
ಓಂ ಶಕ್ತಿ ಅಮ್ಮನವರ ವಿಗ್ರಹ
ಕಾಳಿಕಾ ದೇವಿಯ ವಿಗ್ರಹ
ಗಣಪತಿಯ ವಿಗ್ರಹ ಮತ್ತು ನಾಗರ ಹುತ್ತ
ಕರುಣಾಮಯ ಶಿವನ ವಿಗ್ರಹ
ಪಂಚಮುಖಿ ಅಂಜನೇಯನ ವಿಗ್ರಹ
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ: ಬೆಳಿಗ್ಗೆ 6 ಘಂಟೆಗೆಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6 ಘಂಟೆಗೆ
ಶೇಜಾರತಿ: ರಾತ್ರಿ 9 ಘಂಟೆಗೆ
ಪ್ರತಿ ಗುರುವಾರದಂದು ಶೇಜಾರತಿಯು ರಾತ್ರಿ 9:30 ಕ್ಕೆ ನಡೆಯುತ್ತದೆ. ಉಳಿದ ಎಲ್ಲಾ ಆರತಿಗಳು ಬೇರೆ ದಿನಗಳಂತೆಯೇ ನಿಗದಿತ ಸಮಯದಲ್ಲಿ ನಡೆಯುತ್ತದೆ.
ಪ್ರತಿನಿತ್ಯ ಬೆಳಗಿನ ಜಾವ 7 ಘಂಟೆಗೆ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 51/- ರುಪಾಯಿಗಳು. ಪ್ರತಿನಿತ್ಯ 6 ಘಂಟೆಗೆ ಓಂ ಶಕ್ತಿ ಅಮ್ಮನವರಿಗೆ ಅಭಿಷೇಕ ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 11:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು. ಪ್ರತಿ ಹುಣ್ಣಿಮೆಯ ದಿನ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನ ಕಾರ್ಯಕ್ರಮವಿರುತ್ತದೆ.
ಪ್ರತಿ ತಿಂಗಳ ಅಮಾವಾಸ್ಯೆಯಂದು ಮಧ್ಯಾನ್ಹ 3:30ಕ್ಕೆ ಓಂ ಶಕ್ತಿ ಅಮ್ಮನವರಿಗೆ ಸಾಮುಹಿಕ ಅಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು. ಅದೇ ದಿನ ಬೆಳಿಗ್ಗೆ 6 ಘಂಟೆಯಿಂದ 7:30 ರವರೆಗೆ ಕಾಳಿಕಾ ಹೋಮ ಮತ್ತು ನವಗ್ರಹ ಹೋಮ ನಡೆಯುತ್ತದೆ. ಅದೇ ದಿನ ರಾತ್ರಿ 12 ಘಂಟೆಗೆ ಕಾಳರಾತ್ರಿ ಕಾಳಿಕಾ ಪೂಜೆ ನಡೆಯುತ್ತದೆ. ಅಮಾವಾಸ್ಯೆಯ ದಿನ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನ ಕಾರ್ಯಕ್ರಮವಿರುತ್ತದೆ.
ಪ್ರತಿ ಶುಕ್ರವಾರ ಮಧ್ಯಾನ್ಹ 12:30 ಕ್ಕೆ ಓಂ ಶಕ್ತಿಯ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಆಷಾಢ ಮಾಸದ 3ನೇ ಶುಕ್ರವಾರದಂದು ಬೆಳಿಗ್ಗೆ 7 ರಿಂದ 10:30 ರವರೆಗೆ ಓಂ ಶಕ್ತಿ ಅಮ್ಮನವರಿಗೆ ಸಾಮುಹಿಕ ಹಾಲಿನ ಅಭಿಷೇಕ ಮತ್ತು ಬೆಂಕಿ ಮಡಿಕೆ ಸೇವಾ ಇರುತ್ತದೆ. ಸೇವಾಶುಲ್ಕ 101/- ರುಪಾಯಿಗಳು.
ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:
- ಪ್ರತಿ ವರ್ಷದ ಮಾರ್ಚ್ ತಿಂಗಳ 12, 13, 14 ರಂದು ದೇವಾಲಯದ ವಾರ್ಷಿಕೋತ್ಸವ - 13 ಮಾರ್ಚ್ ರಂದು ಹೂವಿನ ಕರಗ ಮತ್ತು 14 ಮಾರ್ಚ್ ರಂದು ಸಾಮುಹಿಕ ಕಲಶಾಭಿಷೇಕ ನಡೆಯುತ್ತದೆ.
- ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ದಿವಸ).
- ಶ್ರೀ ರಾಮನವಮಿ.
- ಹನುಮಜ್ಜಯಂತಿ.
- ಶಿವರಾತ್ರಿ - ಬೆಳಿಗ್ಗೆ ಮತ್ತು ಸಂಜೆ ರುದ್ರಾಭಿಷೇಕ ಮತ್ತು ಸಂಜೆ ರುದ್ರಹೋಮ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ವಿದ್ಯಾಪೀಠ ವೃತ್ತದ ಬಳಿ, ಬನಶಂಕರಿ 3ನೇ ಹಂತ.
ವಿಳಾಸ:
ಶ್ರೀ.ಸಾಯಿರಾಮ ದೇವಸ್ಥಾನ,
ಓಂ ಶಕ್ತಿ ದೇವಸ್ಥಾನ ಟ್ರಸ್ಟ್ ( ನೋಂದಣಿ),
7ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ,
ಗುರುರಾಜ ಬಡಾವಣೆ, ಬನಶಂಕರಿ 3ನೇ ಹಂತ,
ತ್ಯಾಗರಾಜನಗರ, ಬೆಂಗಳೂರು-560 028. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಜಯಪ್ರಕಾಶ್
ದೂರವಾಣಿ ಸಂಖ್ಯೆ:
+9196200 99999
ಈ ಮೇಲ್ ವಿಳಾಸ:
jpbosslion@yahoo.co.in
ಮಾರ್ಗಸೂಚಿ:
ವಿದ್ಯಾಪೀಠ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ