ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 27ನೇ ಜುಲೈ 2014 ರಿಂದ 4ನೇ ಆಗಸ್ಟ್ 2014 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣವನ್ನು ಆಯೋಜಿಸಿದೆ. ಅದರ ಅಂಗವಾಗಿ 27ನೇ ಜುಲೈ 2014 ರಂದು ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣ ಸಮಾರಂಭವು ಅತ್ಯಂತ ಶುಭಪ್ರದವಾಗಿ ಆರಂಭಗೊಂಡಿತು. ಸುಮಾರು 5000 ಕ್ಕೂ ಹೆಚ್ಚು ಸಾಯಿ ಭಕ್ತರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸುವುದರೊಂದಿಗೆ ಏಳು ದಿನಗಳ ಕಾರ್ಯಕ್ರಮವು ಆರಂಭವಾಯಿತು.
ಇಂದು ಬೆಳಗಿನ ಜಾವ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಮಾಧಿ ಮಂದಿರದಿಂದ ಗುರುಸ್ಥಾನ ಹಾಗೂ ದ್ವಾರಕಾಮಾಯಿ ಮುಖಾಂತರವಾಗಿ ದಕ್ಷಿಣಮುಖಿ ಹನುಮಾನ್ ಮಂದಿರದ ಎದುರುಗಡೆ ವಿಶೇಷವಾಗಿ ನಿರ್ಮಿಸಲಾಗಿರುವ ಮಹಾಪಾರಾಯಣ ಮಂಟಪಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಾವುಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮರಾವ್ ಗೊಂಡ್ಕರ್, ಶ್ರೀ.ದಿಲೀಪ್ ಉಗಳೆ, ಸಾಯಿಬಾಬಾ ಸಂಸ್ಥಾನದ ಪುರೋಹಿತರು, ಸ್ಥಳೀಯರು ಹಾಗೂ ಹಲವಾರು ಸಾಯಿಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯು ಮಹಾಪಾರಾಯಣ ಮಂಟಪವನ್ನು ತಲುಪಿದ ನಂತರ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಕಳಶ ಪೂಜೆಯನ್ನು ನೆರವೇರಿಸಿ ಮಹಾಪಾರಾಯಣವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದರು. ಬೆಳಿಗ್ಗೆ 7:00 ಗಂಟೆಯಿಂದ 11.30 ರವರೆಗೆ ಪುರುಷ ಸಾಯಿಭಕ್ತರು ಹಾಗೂ ಮಧ್ಯಾನ್ಹ 1:00 ಗಂಟೆಯಿಂದ ಸಂಜೆ 5:30 ರವರೆಗೆ ಮಹಿಳಾ ಸಾಯಿಭಕ್ತರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಎಂಟು ಅಧ್ಯಾಯಗಳನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸಿದರು. ಸಂಸ್ಥಾನವು ಪುರುಷ ಹಾಗೂ ಮಹಿಳಾ ಸಾಯಿಭಕ್ತರಿಗಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಿದ್ದು ಅವರುಗಳು ಪ್ರತಿನಿತ್ಯ ಎಂಟು ಅಧ್ಯಾಯಗಳನ್ನು ಪಾರಾಯಣ ಮಾಡಲಿದ್ದಾರೆ.
ಅದೇ ದಿನ ಸಾಯಂಕಾಲ 5:30 ರಿಂದ 6:45 ರವರೆಗೆ ಶಿರಡಿಯ ಶ್ರೀಮತಿ.ಆಶಾಬಾಯಿ ಭಾನುದಾಸ್ ಗೊಂಡ್ಕರ್ ರವರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 7:30 ರಿಂದ 9:30 ರವರೆಗೆ ಬೀಡ್ ನ ಕಲಾವಿದರಾದ ಶ್ರೀ.ಸಾಯಿ ಗೋಪಾಲ್ ದೇಶಮುಖ್ ರವರಿಂದ “ದರ್ಬಾರ್ ಮೇರೇ ಸಾಯಿ ಕಾ” ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ 9:30 ರಿಂದ 10:15 ರವರೆಗೆ ಶ್ರೀ.ಶ್ರಾವಾಣ್ ಮಾಧವ ಚೌಧರಿಯವರಿಂದ ಪ್ರವಚನ ಏರ್ಪಡಿಸಲಾಗಿತ್ತು.
ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಮತ್ತು ಶಿರಡಿಯ ಸ್ಥಳೀಯರು 27ನೇ ಜುಲೈ 2014 ರಂದು ಪ್ರಾರಂಭಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣವು 3ನೇ ಆಗಸ್ಟ್ 2014 ರಂದು ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರೊಂದಿಗೆ ಸುಸಂಪನ್ನಗೊಂಡಿತು.
ಈ ಮಹಾಪಾರಯಣದಲ್ಲಿ ಸುಮಾರು 5000 ಕ್ಕೂ ಹೆಚ್ಚು ಸಾಯಿ ಭಕ್ತರು ಶಿರಡಿ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಬಂದು ಭಾಗವಹಿಸಿದ್ದರು.
ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ ಹಾಗೂ ಅವರ ಧರ್ಮಪತ್ನಿಯವರಾದ ಶ್ರೀಮತಿ.ಸುಷ್ಮಾ ಕುಲಕರ್ಣಿಯವರು ಶ್ರೀ ಸಾಯಿ ಸಚ್ಚರಿತ್ರೆಯ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ಬಾವುಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮರಾವ್ ಗೋಂಡ್ಕರ್, ಹಾಗೂ ಶ್ರೀ.ದಿಲೀಪ್ ಉಗಳೆ ಆದಿಸಿಂಹ ಮತ್ತು ಶಿರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಾರಾಯಣಕ್ಕೆಂದು ಆಗಮಿಸಿದ್ದ ಸಹಸ್ರಾರು ಸಾಯಿ ಭಕ್ತರು ಭಾಗವಹಿಸಿದ್ದರು.
ಮಹಾಪಾರಾಯಣಕ್ಕೆ ಆಗಮಿಸಿದ್ದ ಎಲ್ಲಾ ಸಾಯಿ ಭಕ್ತರಿಗೂ ವಿಶೇಷವಾಗಿ ಸ್ನೇಹಭೋಜನವನ್ನು ಏರ್ಪಡಿಸಲಾಗಿತ್ತು. ಮಧ್ಯಾನ್ಹ 3:30 ರಿಂದ ಶಿರಡಿ ಗ್ರಾಮದ ಸುತ್ತಲೂ ಡೋಲು, ತಾಳ ಹಾಗೂ ಚಿಪಳಿಗಳ ನಾದದೊಂದಿಗೆ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಪಾರಾಯಣದಲ್ಲಿ ಭಾಗವಹಿಸಿದ್ದ ಸಾಯಿ ಭಕ್ತರು ಹಾಗೂ ಶಿರಡಿ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆ ಆಧಾರಿತ ನಾಟಕವನ್ನು ಸಹ ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರುಗಳು ನಡೆಸಿಕೊಟ್ಟರು. ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣದ ಅಂಗವಾಗಿ ಮುಂಬೈನ ಶ್ರೀ.ಮನೀಷ್ ಭತೀಜಾರವರು ನೀಡಿದ ದೇಣಿಗೆಯ ಸಹಾಯದಿಂದ ಸುಂದರವಾದ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.
ಮಹಾಪಾರಾಯಣದ ಅಂಗವಾಗಿ ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಕೀರ್ತನೆ ಕಾರ್ಯಕ್ರಮಗಳನ್ನು ಈ 8 ದಿನಗಳೂ ಹಮ್ಮಿಕೊಳ್ಳಲಾಗಿತ್ತು. ಮಹಾಪಾರಯಣವು 4ನೇ ಆಗಸ್ಟ್ 2014 ರಂದು ದೋಭಿವಿಲಿಯ ಹರಿಭಕ್ತ ಪರಾಯಣ ಶ್ರೀ.ವೈಭವ್ ಬುವಾ ಓಕ್ ರವರ ಕಲ್ಯಾಚಿ ಕೀರ್ತನೆಯೊಂದಿಗೆ ಕೊನೆಗೊಂಡಿತು. ಗೋಪಾಲಕಾಲ ಕಾರ್ಯಕ್ರಮದ ನಂತರ ಎಲ್ಲಾ ಸಾಯಿಭಕ್ತರಿಗೂ "ಮಹಾಪ್ರಸಾದ ಭೋಜನ" ಏರ್ಪಡಿಸಲಾಗಿತ್ತು.
ಈ ವರ್ಷದ ಮಹಾಪಾರಾಯಣವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ಜಿಲ್ಲ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗೀಯ ಮುಖ್ಯಸ್ಥರೂ ಹಾಗೂ ಸಿಬ್ಬಂದಿ ವರ್ಗದವರು ಬಹಳ ಶ್ರಮವಹಿಸಿದ್ದಾರೆ.
ಜಪಾನ್ ದೇಶದಿಂದ 3ನೇ ಆಗಸ್ಟ್ 2014 ರಂದು ಶಿರಡಿಗೆ ಆಗಮಿಸಿದ್ದ ಸಾಯಿ ಭಕ್ತರು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರುಗಳನ್ನು ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಸ್ವಾಗತಿಸಿದರು.(ಮರಾಠಿಯಿಂದ ಆಂಗ್ಲ ಭಾಷೆಗೆ ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು).
ಈ ಮಹಾಪಾರಯಣದಲ್ಲಿ ಸುಮಾರು 5000 ಕ್ಕೂ ಹೆಚ್ಚು ಸಾಯಿ ಭಕ್ತರು ಶಿರಡಿ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಬಂದು ಭಾಗವಹಿಸಿದ್ದರು.
ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ ಹಾಗೂ ಅವರ ಧರ್ಮಪತ್ನಿಯವರಾದ ಶ್ರೀಮತಿ.ಸುಷ್ಮಾ ಕುಲಕರ್ಣಿಯವರು ಶ್ರೀ ಸಾಯಿ ಸಚ್ಚರಿತ್ರೆಯ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ಬಾವುಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮರಾವ್ ಗೋಂಡ್ಕರ್, ಹಾಗೂ ಶ್ರೀ.ದಿಲೀಪ್ ಉಗಳೆ ಆದಿಸಿಂಹ ಮತ್ತು ಶಿರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಾರಾಯಣಕ್ಕೆಂದು ಆಗಮಿಸಿದ್ದ ಸಹಸ್ರಾರು ಸಾಯಿ ಭಕ್ತರು ಭಾಗವಹಿಸಿದ್ದರು.
ಮಹಾಪಾರಾಯಣಕ್ಕೆ ಆಗಮಿಸಿದ್ದ ಎಲ್ಲಾ ಸಾಯಿ ಭಕ್ತರಿಗೂ ವಿಶೇಷವಾಗಿ ಸ್ನೇಹಭೋಜನವನ್ನು ಏರ್ಪಡಿಸಲಾಗಿತ್ತು. ಮಧ್ಯಾನ್ಹ 3:30 ರಿಂದ ಶಿರಡಿ ಗ್ರಾಮದ ಸುತ್ತಲೂ ಡೋಲು, ತಾಳ ಹಾಗೂ ಚಿಪಳಿಗಳ ನಾದದೊಂದಿಗೆ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಪಾರಾಯಣದಲ್ಲಿ ಭಾಗವಹಿಸಿದ್ದ ಸಾಯಿ ಭಕ್ತರು ಹಾಗೂ ಶಿರಡಿ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆ ಆಧಾರಿತ ನಾಟಕವನ್ನು ಸಹ ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರುಗಳು ನಡೆಸಿಕೊಟ್ಟರು. ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣದ ಅಂಗವಾಗಿ ಮುಂಬೈನ ಶ್ರೀ.ಮನೀಷ್ ಭತೀಜಾರವರು ನೀಡಿದ ದೇಣಿಗೆಯ ಸಹಾಯದಿಂದ ಸುಂದರವಾದ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.
ಮಹಾಪಾರಾಯಣದ ಅಂಗವಾಗಿ ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಕೀರ್ತನೆ ಕಾರ್ಯಕ್ರಮಗಳನ್ನು ಈ 8 ದಿನಗಳೂ ಹಮ್ಮಿಕೊಳ್ಳಲಾಗಿತ್ತು. ಮಹಾಪಾರಯಣವು 4ನೇ ಆಗಸ್ಟ್ 2014 ರಂದು ದೋಭಿವಿಲಿಯ ಹರಿಭಕ್ತ ಪರಾಯಣ ಶ್ರೀ.ವೈಭವ್ ಬುವಾ ಓಕ್ ರವರ ಕಲ್ಯಾಚಿ ಕೀರ್ತನೆಯೊಂದಿಗೆ ಕೊನೆಗೊಂಡಿತು. ಗೋಪಾಲಕಾಲ ಕಾರ್ಯಕ್ರಮದ ನಂತರ ಎಲ್ಲಾ ಸಾಯಿಭಕ್ತರಿಗೂ "ಮಹಾಪ್ರಸಾದ ಭೋಜನ" ಏರ್ಪಡಿಸಲಾಗಿತ್ತು.
ಈ ವರ್ಷದ ಮಹಾಪಾರಾಯಣವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ಜಿಲ್ಲ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗೀಯ ಮುಖ್ಯಸ್ಥರೂ ಹಾಗೂ ಸಿಬ್ಬಂದಿ ವರ್ಗದವರು ಬಹಳ ಶ್ರಮವಹಿಸಿದ್ದಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment