ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯು ಇದೇ ತಿಂಗಳ 11ನೇ ಜುಲೈ 2014, ಶುಕ್ರವಾರ ದಿಂದ 13ನೇ ಜುಲೈ 2014, ಭಾನುವಾರದವರೆಗೆ ಗುರುಪೂರ್ಣಿಮೆ ಉತ್ಸವವನ್ನು ಆಯೋಜಿಸಿದೆ. ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಿ ಉತ್ಸವವು ಯಶಸ್ವಿಯಾಗಿ ನೆರವೇರುವಂತೆ ಮಾಡಬೇಕೆಂದು ಎಲ್ಲಾ ಸಾಯಿ ಭಕ್ತರಿಗೆ ಈ ಮುಖಾಂತರ ಮನವಿ ಮಾಡಿಕೊಂಡರು.
ಶ್ರೀ.ಸೋನಾವಾನೆಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅನಾದಿ ಕಾಲದಿಂದಲೂ ಈ ಗುರು-ಶಿಷ್ಯರ ನಡುವೆ ಅವಿನಾಭಾವ ಬಾಂಧವ್ಯ ಹೊಂದಿರುವುದನ್ನು ಪ್ರಪಂಚದಾದ್ಯಂತ ನಾವುಗಳು ನೋಡುತ್ತಾ ಬಂದಿದ್ದೇವೆ. ಅಲ್ಲದೇ ತಮ್ಮ ತಮ್ಮ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಎಲ್ಲರೂ ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆ ಉತ್ಸವವನ್ನು ಆಚರಿಸುತ್ತಾ ಬಂದಿರುತ್ತಾರೆ.
ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ಗುರುಪೂರ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಹಾಗೆಯೇ ಇಂದಿಗೂ ಕೂಡ ಶ್ರೀ ಸಾಯಿಬಾಬಾ ಸಂಸ್ಥಾನವು ಈ ಉತ್ಸವಕ್ಕೆ ಅಷ್ಟೇ ಪ್ರಾಮುಖ್ಯತೆಯನ್ನು ಕೊಟ್ಟು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಈ ಉತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಸಾಯಿ ಭಕ್ತರು ಪ್ರಪಂಚದ ಎಲ್ಲಾ ಕಡೆಗಳಿಂದ ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅಂತೆಯೇ ಈ ವರ್ಷದ ಗುರುಪೂರ್ಣಿಮೆ ಉತ್ಸವದ ವಿವರಗಳು ಈ ಕೆಳಕಂಡಂತೆ ಇದೆ:
ಮೊದಲನೇ ದಿನ – ಶುಕ್ರವಾರ, 11ನೇ ಜುಲೈ 2014
4:30 am - ಶ್ರೀ ಸಾಯಿಬಾಬಾರವರ ಕಾಕಡಾ ಆರತಿ
5:00 am - ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿಸಚ್ಚರಿತ್ರೆಯ ಮೆರವಣಿಗೆ
5:15 am - ದ್ವಾರಕಾಮಾಯಿಯಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣದ ಪ್ರಾರಂಭ
5:20 am - ಶ್ರೀ ಸಾಯಿಬಾಬಾರವರಿಗೆ ಮಂಗಳ ಸ್ನಾನ ಹಾಗೂ ದರ್ಶನ ಪ್ರಾರಂಭ
6:00 am - ಶ್ರೀ ಸಾಯಿಬಾಬಾರವರ ಪಾದುಕೆಗಳ ಪೂಜೆ
12:30 am - ಮಧ್ಯಾನ್ಹ ಆರತಿ
4:00 pm to 6:00 pm - ಕೀರ್ತನೆ
7:00 pm - ಶ್ರೀ ಸಾಯಿಬಾಬಾರವರಿಗೆ ಧೂಪಾರತಿ
9:15 pm - ಶಿರಡಿ ಗ್ರಾಮದ ಸುತ್ತಾ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವದ ಮೆರವಣಿಗೆ
10:30 pm - ಪಲ್ಲಕ್ಕಿ ಉತ್ಸವದ ನಂತರ ಮೆರವಣಿಗೆ ಸಮಾಧಿ ಮಂದಿರಕ್ಕೆ ಬಂದ ನಂತರ ಶೇಜಾರತಿ
ಪವಿತ್ರ ಶ್ರೀ ಸಾಯಿಸಚ್ಚರಿತ್ರೆಯ ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ಇಡೀ ರಾತ್ರಿ ತೆರೆದಿಡಲಾಗುತ್ತದೆ.
ಎರಡನೇ ದಿನ – ಮುಖ್ಯ ದಿನ – ಶನಿವಾರ, 12ನೇ ಜುಲೈ 2014
4:30 am -ಶ್ರೀ ಸಾಯಿಬಾಬಾರವರ ಕಾಕಡಾ ಆರತಿ
5:00 am -ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಸಮಾಪ್ತಿ. ದ್ವಾರಕಾಮಾಯಿಯಿಂದ ಸಮಾಧಿ
ಮಂದಿರದವರೆಗೆ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಹಾಗೂ ಸಾಯಿಬಾಬಾರವರ ಭಾವಚಿತ್ರದ
ಮೆರವಣಿಗೆ.
5:20 am -ಶ್ರೀ ಸಾಯಿಬಾಬಾರವರಿಗೆ ಮಂಗಳ ಸ್ನಾನ ಹಾಗೂ ದರ್ಶನ ಪ್ರಾರಂಭ
12:30 am -ಮಧ್ಯಾನ್ಹ ಆರತಿ
4:00 pm to 6:00 pm - ಕೀರ್ತನೆ
7:00 pm - ಶ್ರೀ ಸಾಯಿಬಾಬಾರವರ ಧೂಪಾರತಿ
9:15 pm - ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವ.
ಈ ದಿನವು ಉತ್ಸವದ ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ದರ್ಶನಕ್ಕೆಂದು ತೆರೆದಿಡಲಾಗಿರುತ್ತದೆ. ಹಾಗಾಗಿ ಆ ರಾತ್ರಿಯ ಶೇಜಾರತಿ ಹಾಗೂ ಮಾರನೇ ದಿನ ಬೆಳಗಿನ ಜಾವದ ಕಾಕಡಾ ಆರತಿ ಇರುವುದಿಲ್ಲ. ಅಂದು ರಾತ್ರಿ 11:00 ರಿಂದ ಮಾರನೇ ದಿನ ಬೆಳಗಿನ ಜಾವ 5:00 ಗಂಟೆಯವರೆಗೆ ಸಮಾಧಿ ಮಂದಿರದ ಪ್ರಾಂಗಣದ ಹಿಂಭಾಗದಲ್ಲಿರುವ ವೇದಿಕೆಯಲ್ಲಿ ಆಹ್ವಾನಿತ ಸಾಯಿ ಭಕ್ತ ಗಾಯಕರಿಂದ ಸಾಯಿ ಭಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
3ನೇ ದಿನ – ಕೊನೆಯ ದಿನ – ಭಾನುವಾರ, 13ನೇ ಜುಲೈ 2014
5:05 am -ಶ್ರೀ ಸಾಯಿಬಾಬಾರವರಿಗೆ ಮಂಗಳ ಸ್ನಾನ ಹಾಗೂ ದರ್ಶನ ಪ್ರಾರಂಭ
6:15 am -ಗುರುಸ್ಥಾನದಲ್ಲಿ ರುದ್ರಾಭಿಷೇಕ.
10:30 am -ಸಮಾಧಿ ಮಂದಿರದ ಆವರಣದಲ್ಲಿ ಗೋಪಾಲಕಾಲ ಹಾಗೂ ದಹಿಹಂಡಿ ಕಾರ್ಯಕ್ರಮ
12:00 noon - ಮಧ್ಯಾನ್ಹ ಆರತಿ
7:00 pm - ಧೂಪಾರತಿ
10:30 pm - ಶೇಜಾರತಿ
ಉತ್ಸವದ ಮೊದಲ ದಿನದಂದು ದ್ವಾರಕಾಮಾಯಿಯಲ್ಲಿ ನಡೆಯುವ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣದಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿ ಭಕ್ತರು 10ನೇ ಜುಲೈ 2014 ರಂದು ಮಧ್ಯಾನ್ಹ 3 ರಿಂದ 6 ಗಂಟೆಯ ಒಳಗಾಗಿ ತಮ್ಮ ಹೆಸರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಛೇರಿಯಲ್ಲಿ ನೋಂದಾಯಿಸತಕ್ಕದ್ದು ಅದೇ ದಿನದ ಸಂಜೆ 7 ಗಂಟೆಗೆ ಲಕ್ಕಿ ಡ್ರಾ ಮುಖಾಂತರ ಭಕ್ತರನ್ನು ಆಯ್ಕೆ ಮಾಡಲಾಗುತ್ತದೆ. ಉತ್ಸವದ ಎಲ್ಲಾ ದಿನಗಳಲ್ಲೂ ಸಾರ್ವಜನಿಕ ಸಂಪರ್ಕ ಕಾರ್ಯಾಲಯದಿಂದ ಆರತಿ/ದರ್ಶನದ ಪಾಸ್ ಗಳನ್ನು ವಿತರಿಸಲಾಗುವುದಿಲ್ಲ. ಅಲ್ಲದೇ ಶ್ರೀ ಸಾಯಿ ಸತ್ಯನಾರಾಯಣ ವ್ರತ ಪೂಜೆ, ಅಭಿಷೇಕ ಪೂಜೆ ಹಾಗೂ ವಾಹನ ಪೂಜೆಗಳು ಆ ದಿನಗಳಂದು ಇರುವುದಿಲ್ಲ. ಆ ದಿನಗಳಂದು ಶ್ರೀ ಸಾಯಿಬಾಬಾರವರಿಗೆ ಹೊದಿಸಲಾದ ಶೇಷ ವಸ್ತ್ರಗಳು ಹಾಗೂ ಮತ್ತಿತರ ವಸ್ತುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಗುತ್ತದೆ. ಉತ್ಸವದ ಎಲ್ಲಾ ದಿನಗಳಲ್ಲೂ ಸಮಾಧಿ ಮಂದಿರದ ಉತ್ತರ ದಿಕ್ಕಿನಲ್ಲ್ಲಿ ವಿಶೇಷವಾಗಿ ನಿರ್ಮಿಸುವ ವೇದಿಕೆಯ ಮೇಲೆ ಪ್ರತಿಷ್ಟಿತ ಆಹ್ವಾನಿತ ಕಲಾವಿದರಿಂದ ಸಂಜೆ 7:30 ರಿಂದ ರಾತ್ರಿ 10:00 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ. ಶಶಿಕಾಂತ ಕುಲಕರ್ಣಿ, ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಹಾಗೂ ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಉದ್ಯೋಗಿಗಳೂ ಈ ಉತ್ಸವವು ಯಶಸ್ವಿಯಾಗಲೆಂದು ಹಗಲಿರುಳೂ ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment