ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) 27ನೇ ಜುಲೈ 2014 ರಿಂದ 4ನೇ ಆಗಸ್ಟ್ 2014 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣವನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಮಹಾಪಾರಾಯಣದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 7:00 ರಿಂದ 11:30 ರವರೆಗೆ (ಪುರುಷ ಸಾಯಿಭಕ್ತರು) ಹಾಗೂ ಮಧ್ಯಾನ್ಹ 1:00 ರಿಂದ 5:30 ರವರೆಗೆ (ಮಹಿಳಾ ಸಾಯಿಭಕ್ತರು) ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡಲಿದ್ದಾರೆ.
ಪಾರಾಯಣದ ಮೊದಲನೇ ದಿನವಾದ 27ನೇ ಜುಲೈ 2014 ರಂದು ಸಂಜೆ 5:30 ರಿಂದ 6:45 ರವರೆಗೆ ಶಿರಡಿಯ ಶ್ರೀಮತಿ.ಆಶಾಭಾಯಿ ಭಾನುದಾಸ್ ಗೋಂಡ್ಕರ್ ರವರಿಂದ ಪ್ರವಚನ, 7:30 ರಿಂದ 9:30 ರವರೆಗೆ ಬೀಡ್ ನ ಶ್ರೀ.ಸಾಯಿ ಗೋಪಾಲ್ ದೇಶಮುಖ್ ರವರಿಂದ “ದರ್ಬಾರ್ ಮೇರೇ ಸಾಯಿ ಕಾ” ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ರಾತ್ರಿ 9:30 ರಿಂದ 10:15 ರವರೆಗೆ ಶ್ರೀ.ಶ್ರಾವಣ್ ಮಾಧವ ಚೌಧರಿಯವರಿಂದ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಎರಡನೇ ದಿನವಾದ 28ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ನಾಗಪುರದ ಶ್ರೀ.ಅಭಿಷೇಕ್ ನಾನೋಟಿಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ, ಹಾಗೂ ರಾತ್ರಿ 9:00 ರಿಂದ 10:15 ರವರೆಗೆ ಅಹಮದ್ ನಗರದ ಶ್ರೀ.ಪ್ರಕಾಶ್ ಲಗಡ್ ರವರಿಂದ ಭಕ್ತಿ ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಮೂರನೇ ದಿನವಾದ 29ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಶಿರೂರಿನ ಹರಿ ಭಕ್ತಪರಾಯಣ ಶ್ರೀ.ಕಿರಣ್ ಮಹಾರಾಜ್ ಭಾಗವತ್ ರವರಿಂದ ಕೀರ್ತನೆ, 7:30 ರಿಂದ 8:30 ರವರೆಗೆ ಶ್ರೀ. ಜ್ಞಾನದೇವ ನಿವೃತ್ತಿ ಗೋಂಡ್ಕರ್ ರವರಿಂದ ಪ್ರವಚನ ಹಾಗೂ ರಾತ್ರಿ 8:30 ರಿಂದ 10:15 ರವರೆಗೆ ಆದರ್ಶ ಪ್ರೌಢಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ನಾಲ್ಕನೇ ದಿನವಾದ 30ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಹರಿಭಕ್ತ ಪಾರಾಯಣ ಶ್ರೀ.ಚಂದ್ರಕಾಂತ್ ಮಹಾರಾಜ್ ಖಂಡಗಾಲೆಯವರಿಂದ ರವರಿಂದ ಹೆಣ್ಣು ಭ್ರೂಣಗಳ ಹತ್ಯೆಯ ಬಗ್ಗೆ ಪ್ರವಚನ ಹಾಗೂ 7:30 ರಿಂದ 10:15 ರವರೆಗೆ ಶಿರಡಿಯ ಶ್ರೀ.ಪಾರಸ್ ಜೈನ್, ಶ್ರೀ.ಕಿಶೋರ್ ಗಗರೆ ಮತ್ತು ರಾಹುಲ್ ಬಿಗಾಡಿಯವರುಗಳಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಐದನೇ ದಿನವಾದ 1ನೇ ಆಗಸ್ಟ್ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ಹಾಗೂ 7:30 ರಿಂದ 10:15 ರವರೆಗೆ ಮುಂಬೈನ ಶ್ರೀಮತಿ. ಪದ್ಮಾ ರಾಮಸ್ವಾಮಿಯವರ ಬಾಲಗೋಪಾಲ ಭಜನ ಮಂಡಲಿಯಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಆರನೇ ದಿನವಾದ 2ನೇ ಆಗಸ್ಟ್ 2014 ರಂದು ಸಂಜೆ 5:30 ರಿಂದ 6:45 ರವರೆಗೆ ಸಾಯಿ ಕೃಪಾ ಮಹಿಳಾ ಮಂಡಳಿ ಹಾಗೂ ನಾದಬ್ರಹ್ಮ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 7:30 ರಿಂದ 10:15 ರವರೆಗೆ ಮನಹರ್ ಉದಾಸ್ ರವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಏಳನೇ ದಿನವಾದ 3ನೇ ಆಗಸ್ಟ್ 2014 ರಂದು ಬೆಳಿಗ್ಗೆ 7:00 ರಿಂದ 8:30 ರವರೆಗೆ ಪುರುಷ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡುತ್ತಾರೆ ಹಾಗೂ 8:30 ರಿಂದ 9:00 ರ ಒಳಗೆ ಮಹಾಪಾರಾಯಣವನ್ನು ಸುಸಂಪನ್ನಗೊಳಿಸುತ್ತಾರೆ. ಅಂತೆಯೇ ಬೆಳಿಗ್ಗೆ 9:30 ಕ್ಕೆ ಮಹಿಳಾ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡುತ್ತಾರೆ ಹಾಗೂ ಮಹಾಪಾರಾಯಣವನ್ನು ಸುಸಂಪನ್ನಗೊಳಿಸುತ್ತಾರೆ. ಮಧ್ಯಾನ್ಹ 3:30 ರಿಂದ 6:00 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು ಮೆರವಣಿಗೆಯಲ್ಲಿ ಶಿರಡಿ ಗ್ರಾಮದ ಸುತ್ತಲೂ ತೆಗೆದುಕೊಂಡು ಹೋಗಲಾಗುತ್ತದೆ. ರಾತ್ರಿ 8:30 ರಿಂದ 10:15 ರವರೆಗೆ ಶಿರಡಿಯ ಶ್ರೀ ಗಣಪತ್ ಅಣ್ಣಾಸಾಹೇಬ್ ಗೋಂಡ್ಕರ್ ರವರಿಂದ ಹಳದಿಯ ಮಹತ್ವದ ಬಗ್ಗೆ ಹಾಗೂ ಮದುವೆಯ ಬಗ್ಗೆ ಸಾಂಪ್ರದಾಯಿಕ ಗೀತೆಗಳನ್ನು ಆಯೋಜಿಸಲಾಗಿದೆ.
ಪಾರಾಯಣದ ಕೊನೆಯ ದಿನವಾದ 4ನೇ ಆಗಸ್ಟ್ 2014 ರಂದು ಬೆಳಿಗ್ಗೆ 9:30 ರಿಂದ 12:00 ರವರೆಗೆ ದೋಬಿವಾಲಿಯ ಹರಿಭಕ್ತ ಪರಾಯಣ ಶ್ರೀ.ವೈಭವ ಬುವಾ ಓಕ್ ರವರಿಂದ "ಕಲ್ಯಾಚೆ ಕೀರ್ತನೆ", ಮಧ್ಯಾನ್ಹ 12:30 ರಿಂದ 4:00 ರವರೆಗೆ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದ ಭೋಜನವನ್ನು ಆಯೋಜಿಸಲಾಗಿದೆ. ಅಂತೆಯೇ ಸಂಜೆ 7:00 ರಿಂದ 9:00 ರವರೆಗೆ ಕೊರಾಳೆಯ ಶ್ರೀ.ಕೃಷ್ಣ ಕೊಳಗೆಯವರಿಂದ ಭಕ್ತಿ ಗೀತೆಯ ಕಾರ್ಯಕ್ರಮ ಹಾಗೂ ರಾತ್ರಿ 9:00 ರಿಂದ 10:15 ರವರೆಗೆ ಶ್ರೀ ಗೋವಿಂದ ಸಂಭಾಜಿ ಕಂಡಾರೆಯವರಿಂದ "ಏಕತಾರಿ ಭಜನೆ" ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀ ಸಾಯಿಬಾಬಾ ಸಂಸ್ಥಾನವು ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ದಕ್ಷಿಣ ಮುಖಿ ಹನುಮಾನ್ ಮಂದಿರದ ಎದುರುಗಡೆ ಹಾಕಲಾಗುವ ವಿಶೇಷ ಮಹಾಪಾರಾಯಣ ಮಂಟಪದಲ್ಲಿ ಆಯೋಜಿಸುತ್ತಿದೆ. ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕೆಂದು ಹಾಗೂ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥಾನದ ಆಡಳಿತ ಮಂಡಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ ನಾಗಾರಾಜ್ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment