Monday, July 7, 2014

ಶ್ರೀ ಶಿರಡಿ ಸಾಯಿಬಾಬಾರವರ ಮೇಲೆ ರಚಿಸಲಾದ ಹೊಸ ಕನ್ನಡ ಪುಸ್ತಕ "ಶ್ರೀ ಶಿರಡಿ ಸಾಯಿಬಾಬಾರವರ ದಿವ್ಯ ಲೀಲೆಗಳು" (ಬಾಬಾ'ಸ್ ಡಿವೈನ್ ಸಿಂಫೋನಿ) ಪವಿತ್ರ ಗುರು ಪೂರ್ಣಿಮೆಯ ದಿನವಾದ 12ನೇ ಜುಲೈ 2014 ರಂದು ಶಿರಡಿಯ ದ್ವಾರಕಾಮಾಯಿಯಲ್ಲಿ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾರವರ ಮೇಲೆ ರಚಿಸಲಾದ "ಶ್ರೀ ಶಿರಡಿ ಸಾಯಿಬಾಬಾರವರ ದಿವ್ಯ ಲೀಲೆಗಳು" (ಬಾಬಾ'ಸ್  ಡಿವೈನ್ ಸಿಂಫೋನಿ) ಎಂಬ ಹೆಸರಿನ ಹೊಸ ಕನ್ನಡ ಪುಸ್ತಕವು  ಪವಿತ್ರ ಗುರು ಪೂರ್ಣಿಮೆಯ ದಿನವಾದ 12ನೇ ಜುಲೈ 2014, ಶನಿವಾರದಂದು ಶಿರಡಿಯ ದ್ವಾರಕಾಮಾಯಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕದ ಪ್ರಕಾಶಕರಾದ ಸ್ಟರ್ಲಿಂಗ್ ಪಬ್ಲಿಷರ್ಸ್ ನ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ. 


ಈ ಪುಸ್ತಕದ ರಚನೆಯನ್ನು ಮಾಡಿರುವ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ಸಾಯಿಬಾಬಾರವರ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಿದ್ದಾರೆ.  ಇವರು ಸಾಯಿಬಾಬಾರವರ ಬಗ್ಗೆ ಆಳವಾದ ಸಂಶೋಧನೆಯನ್ನು ಮಾಡಿ "ಬಾಬಾ'ಸ್ ವಾಣಿ" "ಬಾಬಾ'ಸ್ ಗುರುಕುಲ್", "ಬಾಬಾ'ಸ್ ಅನುರಾಗ್" "ಬಾಬಾ'ಸ್  ಋಣಾನುಬಂಧ್" ಮತ್ತು  ಬಾಬಾ'ಸ್ ಡಿವೈನ್ ಸಿಂಫೋನಿ" ಎಂಬ ಜನಪ್ರಿಯ ಪುಸ್ತಕಗಳನ್ನು ರಚಿಸಿದ್ದು ಅವುಗಳನ್ನು ನವದೆಹಲಿಯ ಪ್ರತಿಷ್ಥಿತ  ಸ್ಟರ್ಲಿಂಗ್ ಪಬ್ಲಿಷರ್ಸ್ ಸಂಸ್ಥೆಯು ಹೊರತಂದಿರುತ್ತದೆ. 

 "ಶ್ರೀ ಶಿರಡಿ ಸಾಯಿಬಾಬಾರವರ ದಿವ್ಯ ಲೀಲೆಗಳು" ಪುಸ್ತಕವು ಶ್ರೀಮತಿ. ವಿನ್ನಿ ಚಿಟ್ಲೂರಿಯವರು ರಚಿಸಿ  ನವದೆಹಲಿಯ ಪ್ರತಿಷ್ಥಿತ  ಸ್ಟರ್ಲಿಂಗ್ ಪಬ್ಲಿಷರ್ಸ್ ಸಂಸ್ಥೆಯು ಹೊರತರುತ್ತಿರುವ ಮೊದಲ ಕನ್ನಡ ಪುಸ್ತಕವಾಗಿರುತ್ತದೆ. 

ಈ ಪುಸ್ತಕದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಹಾಗೂ ತದನಂತರದಲ್ಲಿ ಮಾಡಿದ 366 ದಿವ್ಯ ಲೀಲೆಗಳನ್ನು ನೀಡಲಾಗಿದೆ. ಆದ ಕಾರಣ ಸಾಯಿ ಭಕ್ತರು ದಿನಕ್ಕೊಂದು ಲೇಲೆಯಂತೆ  ಲೀಪ್ ಇಯರ್ ಅನ್ನೂ ಸೇರಿಸಿ ಪ್ರತಿ ವರ್ಷವೂ ಪಾರಾಯಣ ಮಾಡಿಕೊಳ್ಳಬಹುದಾಗಿರುತ್ತದೆ. ಪುಸ್ತಕವು 464 ಪುಟಗಳನ್ನು ಹೊಂದಿದ್ದು ಇದರ ಬೆಲೆಯನ್ನು ಕೇವಲ 225 ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. 

ಪುಸ್ತಕದ ಪ್ರತಿಗಳಿಗಾಗಿ ಸಾಯಿ ಭಕ್ತರು ನವದೆಹಲಿಯ ಪ್ರತಿಷ್ಥಿತ  ಸ್ಟರ್ಲಿಂಗ್ ಪಬ್ಲಿಷರ್ಸ್ ಸಂಸ್ಥೆಯನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದಾಗಿದೆ: 

ಸ್ಟರ್ಲಿಂಗ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ 
ಎ-59, ಓಕ್ಲಾ ಇಂಡಸ್ಟ್ರಿಯಲ್ ಏರಿಯಾ, 
ಫೇಸ್-II, ನವದೆಹಲಿ-110 020
ದೂರವಾಣಿ: 011-2638 6165
ಇ-ಮೇಲ್: mail@sterlingpublishers.com 

12ನೇ ಜುಲೈ 2014 ರಂದು ಬಿಡುಗಡೆಯಾದ ನಂತರದಿಂದ ಪುಸ್ತಕವು  ಆನ್ ಲೈನ್, ಎಲ್ಲಾ ಪುಸ್ತಕ ವ್ಯಾಪಾರಿಗಳು ಹಾಗೂ ಸಾಯಿಬಾಬಾ ಮಂದಿರಗಳಲ್ಲಿ ದೊರಯುತ್ತದೆ. ಅಲ್ಲದೇ, ಪುಸ್ತಕದ ಪ್ರತಿಗಳಿಗಾಗಿ ಸಾಯಿ ಭಕ್ತರು ಶ್ರೀ.ನಾಗರಾಜ್ ಅನ್ವೇಕರ್ ರವರನ್ನು ದೂರವಾಣಿ ಸಂಖ್ಯೆ: +91 99023 88699 ರಲ್ಲಿ ಕೂಡ ಸಂಪರ್ಕಿಸಬಹುದಾಗಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment