Thursday, July 10, 2014

"ಮಹಾರಾಷ್ಟ್ರದ ಪ್ರತಿಭಾ ಶೋಧ" ಪರೀಕ್ಷೆಯಲ್ಲಿ 27ನೇ ಸ್ಥಾನ ಗಳಿಸಿದ ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ  ಶಿಕ್ಷಣ ಅಭಿಯಾನ  ಯೋಜನೆಯ ಅಡಿಯಲ್ಲಿ ನಡೆಸಲಾಗುತ್ತಿರುವ  ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮಿಕ  ಶಾಲೆಯ ವಿದ್ಯಾರ್ಥಿಯಾದ ಶ್ರೀ.ಅನಿರುದ್ಧ ಮೋಹನ ಉಪಾಸಿನಿ ಕಳೆದ  ಏಪ್ರಿಲ್ 2014 ರಲ್ಲಿ ನಡೆಸಲಾದ "ಮಹಾರಾಷ್ಟ್ರದ ಪ್ರತಿಭಾ ಶೋಧ" ಪರೀಕ್ಷೆಯಲ್ಲಿ 27ನೇ ಸ್ಥಾನ ಗಳಿಸಿದ್ದಷ್ಟೇ ಅಲ್ಲದೇ ಮಹಾರಾಷ್ಟ್ರ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನವನ್ನು ಸಹ ಪಡೆದುಕೊಂಡಿದ್ದಾನೆ. 



ಶ್ರೀ ಅನಿರುದ್ಧ ಮೋಹನ್ ಉಪಾಸಿನಿ 200 ಅಂಕಗಳಿಗೆ 140 ಅಂಕಗಳನ್ನು ಪಡೆಯುವ ಮುಖಾಂತರ 27ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.  ಅಲ್ಲದೇ ತಾನು ಪಟ್ಟ ಪರಿಶ್ರಮದ ಫಲವಾಗಿ ರಾಜ್ಯ ಸರ್ಕಾರದ ವತಿಯಿಂದ ನೀಡುವ ವಿದ್ಯಾರ್ಥಿ ವೇತನವನ್ನು ಸಹ ತನ್ನದಾಗಿಸಿಕೊಂಡಿದ್ದಾನೆ. ಇವನ ಯಶಸ್ಸಿಗೆ ಇವನ ಗುರುಗಳಾದ ಶ್ರೀ.ತಂಬೋಳಿ, ಶ್ರೀ.ನಗರೆ ಮತ್ತು ಕುಮಾರಿ ಜಗತಪ್ ಮದಾಂರವರುಗಳು ಅತ್ಯುತ್ತಮವಾಗಿ ಮಾರ್ಗದರ್ಶನ ಮಾಡಿರುತ್ತಾರೆ.  

ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳು ಮತ್ತು ಪ್ರಾಂಶುಪಾಲರಾದ ಶ್ರೀ.ಇನಾಮದಾರ್ ರವರುಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದ ವಿದ್ಯಾರ್ಥಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ  

No comments:

Post a Comment