ಬಳ್ಳಾರಿಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ಎಂ.ಜಿ.ಆಟೋಮೊಬೈಲ್ಸ್ ಹಿಂಭಾಗ, ವಿಶಾಲನಗರ, ಅನಂತಪುರ ರಸ್ತೆ, ಬಳ್ಳಾರಿ-583 101, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವು ಬಳ್ಳಾರಿಯ ಅನಂತಪುರ ಮುಖ್ಯರಸ್ತೆಯಲ್ಲಿರುವ ಎಂ.ಜಿ.ಆಟೋಮೊಬೈಲ್ಸ್ ಹಿಂಭಾಗದಲ್ಲಿರುವ ವಿಶಾಲನಗರ ಬಡಾವಣೆಯಲ್ಲಿರುತ್ತದೆ.
ಈ ಮಂದಿರದ ಉದ್ಘಾಟನೆಯನ್ನು 17ನೇ ಜೂನ್ 2010 ರಂದು "ನಡೆದಾಡುವ ದೇವರು" ಎಂದೇ ಪ್ರಖ್ಯಾತರಾದ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರು ನೆರವೇರಿಸಿದರು.
ದೇವಾಲಯದ ಒಳ ಗೋಡೆಗಳ ಮೇಲೆ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುವ ಚಿತ್ರಪಟಗಳನ್ನು ತೂಗುಹಾಕಲಾಗಿದೆ.
ದೇವಾಲಯವು ಬೆಳಗಿನ ಜಾವ 5:15 ಕ್ಕೆ ಕಾಕಡಾ ಆರತಿಯೊಂದಿಗೆ ಪ್ರಾರಂಭವಾಗಿ ರಾತ್ರಿ 9 ಘಂಟೆಯ ಶೇಜಾರತಿಯೊಂದಿಗೆ ಮುಚ್ಚುತ್ತದೆ.
ದೇವಾಲಯದಲ್ಲಿ ಸುಮಾರು 5 ಅಡಿ 4 ಅಂಗುಲ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬಳಸುವ ಪಲ್ಲಕ್ಕಿಯನ್ನು ಸಾಯಿಭಕ್ತರು ನೋಡಬಹುದು.
ದೇವಾಲಯದ ಒಳಗಡೆ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
ಮಂದಿರದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 5:15 ಘಂಟೆಗೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12.00 ಘಂಟೆಗೆ
ಧೂಪಾರತಿ: ಸಂಜೆ 6:15 ಘಂಟೆಗೆ
ಶೇಜಾರತಿ: ರಾತ್ರಿ 9:00 ಘಂಟೆಗೆ
ಪ್ರತಿನಿತ್ಯ ಬೆಳಿಗ್ಗೆ 7 ಘಂಟೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಹಾಗೂ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ.
ಪ್ರತಿ ಗುರುವಾರ ಮಧ್ಯಾನ್ಹ ಆರತಿಯ ನಂತರ ಮಂದಿರಕ್ಕೆ ಬರುವ ಎಲ್ಲ ಸಾಯಿ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ಪ್ರತಿ ಗುರುವಾರ ಸಂಜೆ 7.15 ಕ್ಕೆ ಪಲ್ಲಕ್ಕಿಯ ಉತ್ಸವದ ಜೊತೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ಪ್ರತಿ ತಿಂಗಳ ಹುಣ್ಣಿಮೆಯ ದಿನ ಬೆಳಿಗ್ಗೆ 9:30 ಕ್ಕೆ ಸಾಯಿ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
ದಿನ ನಿತ್ಯದ ಪೂಜಾ ವಿವರಗಳು:
ಪೂಜಾ ವಿವರ | ಸೇವಾ ಶುಲ್ಕ |
ಅರ್ಚನ ಪೂಜಾ | 21.00 |
ಪಂಚಾಮೃತ ಅಭಿಷೇಕ | 101.00 |
ಪಲ್ಲಕ್ಕಿ ಸೇವಾ | 116.00 |
ಪಲ್ಲಕ್ಕಿ ಸೇವಾ (ಅಜೀವ ಸದಸ್ಯತ್ವ) | 1116.00 |
ಸಾಯಿ ಸತ್ಯನಾರಾಯಣ ವ್ರತ (ಹುಣ್ಣಿಮೆಯ ದಿನ) | 111.00 |
ಒಂದು ದಿನದ ನಿತ್ಯ ಪ್ರಸಾದ ಸೇವಾ | 1116.00 |
ಒಂದು ದಿನದ ನಿತ್ಯ ಪೂಜಾ | 516.00 |
ನಿತ್ಯ ಪೂಜಾ ಪ್ರಸಾದ (ಅಜೀವ ಸದಸ್ಯತ್ವ) | 5116.00 |
ಧುನಿ ಪೂಜಾ | 516.00 |
ಧುನಿ ಪೂಜಾ (ಅಜೀವ ಸದಸ್ಯತ್ವ) | 2516.00 |
ಒಂದು ಗುರುವಾರದ ಅನ್ನದಾನ | 5116.00 |
ಗುರುವಾರ ಅನ್ನದಾನ (ಅಜೀವ ಸದಸ್ಯತ್ವ) | 25116.00 |
1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 17ನೇ ಜೂನ್.
2. ಶಿವರಾತ್ರಿ.
3. ಶ್ರೀರಾಮನವಮಿ.
4. ಗುರುಪೂರ್ಣಿಮೆ.
5. ವಿಜಯದಶಮಿ.
6. ದತ್ತ ಜಯಂತಿ.
ದೇಣಿಗೆಗೆ ಮನವಿ:
ದೇವಾಲಯವು ನೋಂದಣಿ ಸಂಖ್ಯೆ:198/2005-2006 ಕ್ಕೆ ಅನ್ವಯವಾಗುವಂತೆ ವಿಶ್ವಸ್ಥ ಸಂಸ್ಥೆಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ದೇವಾಲಯದ ಅಭಿವೃದ್ದಿ ಕಾರ್ಯಗಳಿಗೆ ಧನ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ದೇಣಿಗೆಯನ್ನು ಸಂದಾಯ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಖಾತೆ ಸಂಖ್ಯೆ: 30352012648
ಬ್ಯಾಂಕ್ ಆಫ್ ಬರೋಡ - ಖಾತೆ ಸಂಖ್ಯೆ: 29950200000216
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ - ಖಾತೆ ಸಂಖ್ಯೆ: 395401010036087
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಎಂ.ಜಿ.ಆಟೋಮೊಬೈಲ್ಸ್ ಹಿಂಭಾಗ, ವಿಶಾಲನಗರ, ಬಳ್ಳಾರಿ.ವಿಳಾಸ:
ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ನೋಂದಣಿ), ಎಂ.ಜಿ.ಆಟೋಮೊಬೈಲ್ಸ್ ಹಿಂಭಾಗ,
ವಿಶಾಲನಗರ, ಅನಂತಪುರ ರಸ್ತೆ,
ಬಳ್ಳಾರಿ-583 101, ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿಗಳು:ಶ್ರೀ.ಎನ್.ಕುಮಾರಸ್ವಾಮಿ - ಅಧ್ಯಕ್ಷರು / ಶ್ರೀ.ಆರ್.ದತ್ತಾತ್ರೇಯ - ಸಲಹೆಗಾರರು / ಶ್ರೀ. ನಟರಾಜ್ - ಅರ್ಚಕರು.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ದೂರವಾಣಿ ಸಂಖ್ಯೆಗಳು:
+ 91 8392 260004 / +91 94484 75427 / +91 98442 64235 / +91 93433 40017
ಮಾರ್ಗಸೂಚಿ:
ಎಂ.ಜಿ.ಆಟೋಮೊಬೈಲ್ಸ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಅನಂತಪುರ ರಸ್ತೆಯಲ್ಲಿರುವ ಎಂ.ಜಿ.ಆಟೋಮೊಬೈಲ್ಸ್ ಹಿಂಭಾಗದಲ್ಲಿರುವ ವಿಶಾಲನಗರ ಬಡಾವಣೆಯಲ್ಲಿ ಇರುತ್ತದೆ. ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment