Saturday, June 18, 2011

ಸಾಯಿ ಬರಹಗಾರ ಮತ್ತು  ಪ್ರವಚನಕಾರ ಶ್ರೀ.ವೋರುಗಂಟಿ ರಾಮಕೃಷ್ಣ  ಪ್ರಸಾದ್ - ಕೃಪೆ: ಸಾಯಿ ಅಮೃತಧಾರಾ.ಕಾಂ 


ಶ್ರೀ.ವೋರುಗಂಟಿ ರಾಮಕೃಷ್ಣ  ಪ್ರಸಾದ್ ರವರು ಖ್ಯಾತ ಬರಹಗಾರರು ಮತ್ತು ಪ್ರವಚನಕಾರರು. ಇವರು 24ನೇ ಸೆಪ್ಟೆಂಬರ್ 1942 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯೆನುಗುಲಮಹಲ್ ಗ್ರಾಮದಲ್ಲಿ ಜನಿಸಿದರು. ಇವರು ಭಾರತೀಯ ರೈಲ್ವೇ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ವಿವಿಧ ಪ್ರತಿಷ್ಟಿತ ಹುದ್ದೆಗಳನ್ನು ಅಲಂಕರಿಸಿ 1993 ರಲ್ಲಿ ನಿವೃತ್ತಿ ಹೊಂದಿದರು. ಇವರು 1970ನೇ ಇಸವಿಯಿಂದ ಸಾಯಿಬಾಬಾರವರ ಭಕ್ತರಾಗಿದ್ದು ಇದುವರೆಗೂ ವಿವಿಧ ವಿಷಯಗಳ ಮೇಲೆ ತೆಲುಗು ಭಾಷೆಯಲ್ಲಿ ಸರಿ ಸುಮಾರು 100 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುತ್ತಾರೆ. ಅಲ್ಲದೇ, ಶಿರಡಿ ಸಾಯಿಬಾಬಾರವರ ಮೇಲೆ ಸುಮಾರು 13 ಪುಸ್ತಕಗಳನ್ನೂ ಕೂಡ ಬರೆದಿರುತ್ತಾರೆ. ಇವರು ಆಂಧ್ರಪ್ರದೇಶದ ಬಹುತೇಕ ಸಾಯಿಬಾಬಾ ಮಂದಿರಗಳಲ್ಲಿ ತಮ್ಮ ಪ್ರವಚನವನ್ನು ನೀಡಿದ್ದಾರೆ. ಅಲ್ಲದೇ, ಶಿರಡಿಯ ಸಾಯಿಬಾಬಾ ಸಂಸ್ಥಾನ, ಕರ್ನಾಟಕದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ, ಮಹಾರಾಷ್ಟ್ರದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಸಂಸ್ಥಾನಗಳಲ್ಲಿ ಕೂಡ ತಮ್ಮ ಪ್ರವಚನವನ್ನು ನೀಡಿದ್ದಾರೆ. ಶಿರಡಿಯಲ್ಲಿ ಸತತವಾಗಿ 120 ದಿನಗಳ ಕಾಲ ಸಾಯಿ ಸತ್ಯನಾರಾಯಣ ವ್ರತವನ್ನು ಆಚರಿಸಿದ ಹೆಗ್ಗಳಿಕೆ ಇವರದು. ಇವರು ನೀಡಿದ ಪ್ರವಚನಗಳಿಗಾಗಿ ಆಂಧ್ರಪ್ರದೇಶದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಇವರು ಸನ್ಮಾನವನ್ನು ಪಡೆದಿರುತ್ತಾರೆ. 

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರು ವಿಜಯವಾಡದ "ವಿಶ್ವ ಮಾನವತಾ ಗುರುಪೀಠಮ್" ನ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ ಮತ್ತು ಈ ಸಂಸ್ಥೆಯ ಅಡಿಯಲ್ಲಿ "ಸೌಭಾಗ್ಯ ಸಾಯಿ ಮಂದಿರ" ವನ್ನು ಕೂಡ ನಿರ್ಮಾಣ ಮಾಡಿರುತ್ತಾರೆ. 

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರು ಶ್ರೀಮತಿ.ಸೂರ್ಯಕುಮಾರಿಯವರನ್ನು ವಿವಾಹವಾಗಿರುತ್ತಾರೆ. ಇವರಿಗೆ  ಒಬ್ಬಳು ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ಪ್ರಸ್ತುತ, ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಸೂರ್ಯಕುಮಾರಿಯವರೊಂದಿಗೆ ತಮ್ಮ ವಿಜಯವಾಡ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ. 

ಇವರ ಸಾಧನೆಯ ಮೈಲಿಗಲ್ಲುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಇವರು ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಿದ 13 ಪುಸ್ತಕಗಳ ವಿವರ ಈ ಕೆಳಕಂಡಂತೆ ಇದೆ: 

1. ಅಡಗಂಡಿ ಚಬುತಾನು ಸಾಯಿಬಾಬಾ.
2. ಶ್ರೀ ಸದ್ಗುರು ಸಾಯಿ ಲೀಲಾಮೃಥಮು. 
3. ಸದ್ಗುರು ಸಾಯಿ - ಶ್ರೀ.ಗುರು ಚರಣಾಲು.
4. ಶ್ರೀ ಸದ್ಗುರು ಸಾಯಿ ಭಕ್ತ ಲೀಲಾಮೃಥಮು.
5. ಶ್ರೀ ಸಾಯಿನಾಥ ಚಾಲೀಸ ಮರಿಯು ನಿತ್ಯ ಪಾರಾಯಣ ಸ್ತೋತ್ರಮುಲು.
6 . ನೀನುಂಡೆ ಭಯಮೆಲ? ಶಿರಡಿ ಸಾಯಿಬಾಬಾ ಆಶಿಸ್ಸುಲು. 
7. ಸದ್ಗುರು ಸಾಯಿ ನಿತ್ಯ ಪ್ರಾರ್ಥನಾ ಸ್ತೋತ್ರಮುಲು. 
8. ಶ್ರೀ ಸಾಯಿ ಚರಣಂ ಮಾಕಿಕ ಶರಣಂ. 
9. ನಾನಾ ಸಾಹೇಬ್ ಚಾನ್ದೋರ್ಕರ್ ಕು ಸಾಯಿಬಾಬಾ ಚಪ್ಪಿನ ಶ್ರೀ ಶಿರಡಿ ಸಾಯಿನಾಥ ಭಗವದ್ಗೀತಾ. 
10.ಸರ್ವಕಾರ್ಯ ಸಿದ್ದಿಕಿ ಶ್ರೀ ಸದ್ಗುರು ಸಾಯಿ ಚರಿತ್ರ. 
11.ಶ್ರೀ ಸಾಯಿ ಸತ್ಯವ್ರತಂ. 
12.ಶ್ರೀ.ಗುರು ಚರಿತ್ರ - ನಿತ್ಯ ಪಾರಾಯಣ ಗ್ರಂಥಮು. 
13.ಶ್ರೀ ಸದ್ಗುರು ಸಾಯಿಬಾಬಾ ನಿತ್ಯ ಪಾರಾಯಣ ಗ್ರಂಥಮು.

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರ ಪುಸ್ತಕಗಳಿಗಾಗಿ ಮತ್ತು ಪ್ರವಚನಗಳಿಗಾಗಿ ಈ ಕೆಳಕಂಡ ವಿಳಾಸದಲ್ಲಿ ಸಾಯಿಭಕ್ತರು ಸಂಪರ್ಕಿಸಬಹುದು: 

ವಿಳಾಸ: 
ಶ್ರೀ.ಸಾಯಿ ಸುವರ್ಚಲ ಸದನ, ರಾಮಲಿಂಗೇಶ್ವರ ಪೇಟೆ, 
6ನೇ ಬಲ ತಿರುವು, ವಿಜಯವಾಡ-520 003, ಆಂಧ್ರಪ್ರದೇಶ. 

ದೂರವಾಣಿ ಸಂಖ್ಯೆಗಳು:
+91 866 2532139 / +91 93930 07648  

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ:   


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment