Sunday, June 26, 2011

ಮೈಸೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಾಂಗಣ, ಈ ಮತ್ತು ಎಫ್ ಬ್ಲಾಕ್, ವಿಶ್ವಮಾನವ ಶಾಲೆಯ ಎದುರು, ರಾಮಕೃಷ್ಣ ನಗರ, ಮೈಸೂರು-570 022, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಮೈಸೂರಿನ ರಾಮಕೃಷ್ಣ ನಗರದ ವಿಶ್ವಮಾನವ ಶಾಲೆಯ ಎದುರುಗಡೆ ಇರುತ್ತದೆ.

ಈ ಮಂದಿರದ ಭೂಮಿಪೂಜೆಯನ್ನು 28ನೇ ಸೆಪ್ಟೆಂಬರ್ 2009 ರಂದು ಪವಿತ್ರ ವಿಜಯದಶಮಿಯ ದಿನ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 18ನೇ ನವೆಂಬರ್ 2010 ರಂದು ಪವಿತ್ರ ತುಳಸಿ ಹಬ್ಬದ ದಿನವಾದ ಉತ್ಥಾನ ದ್ವಾದಶಿಯಂದು  ಶಿರಡಿಯ ಶ್ರೀ.ಸುಲೇಖ ಶಾಸ್ತ್ರೀಜಿ ಮಹಾರಾಜ್ ರವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ ಪ್ರಸನ್ನ ಗಣಪತಿ ದೇವಾಲಯ ಟ್ರಸ್ಟ್ (ನೋಂದಣಿ) ಯ ಆಡಳಿತ ಮಂಡಳಿಯವರು  ನಿರ್ಮಿಸಿರುತ್ತಾರೆ. ಡಾ.ಆರ್.ಸೀತಾಲಕ್ಷ್ಮಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ರಾಜಗೋಪುರದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಸಾಯಿಬಾಬಾರವರ ವಿಗ್ರಹಗಳನ್ನು ಸ್ಥಾಪಿಸಿರುತ್ತಾರೆ.

ದೇವಾಲಯದ ಆವರಣದ ಹೊರಭಾಗದ ಎಡ ಭಾಗದಲ್ಲಿ ಕೃತಕ ಕಾರಂಜಿಯ ಮಧ್ಯಭಾಗದಲ್ಲಿ ಸುಂದರ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ಅಷ್ಟ ಧಾತುವಿನ ವಿಗ್ರಹ ಮತ್ತು ಪುಟ್ಟ ಅಮೃತ ಶಿಲೆಯ ಗಣಪತಿಯ  ವಿಗ್ರಹವನ್ನು  ಸಾಯಿಬಾಬಾರವರ ವಿಗ್ರಹದ ಬಳಿ ಇರಿಸಲಾಗಿದೆ.  ಅಷ್ಟಧಾತುವಿನ ಸಾಯಿಬಾಬಾರವರ ವಿಗ್ರಹವನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಮತ್ತು ಕೂರ್ಮವನ್ನು ಸ್ಥಾಪಿಸಲಾಗಿದೆ.

ಸಾಯಿಬಾಬಾ ವಿಗ್ರಹದ ಎರಡೂ ಬದಿಯಲ್ಲಿ ಅಮೃತ ಶಿಲೆಯ ದತ್ತಾತ್ರೇಯ ಮತ್ತು ಕೃಷ್ಣ ದೇವರುಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ಮಂದಿರದ ಹೊರಭಾಗದಲ್ಲಿ ತುಳಸಿ ಬೃಂದಾವನ, ಪವಿತ್ರ ಧುನಿ, ಪವಿತ್ರ ಬೇವಿನ ಮರ ಮತ್ತು ಔದುಂಬರ ವೃಕ್ಷಗಳನ್ನೂ ಸಾಯಿಭಕ್ತರು ಕಾಣಬಹುದು.





























ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಪ್ರತಿದಿನ ಬೆಳಿಗ್ಗೆ 7:30 ಘಂಟೆಗೆ, 10 ಘಂಟೆಗೆ ಮತ್ತು ರಾತ್ರಿ 8:30 ಘಂಟೆಗೆ ಛೋಟಾ ಆರತಿ. 
ಪ್ರತಿದಿನ ಮಧ್ಯಾನ್ಹ 12 ಘಂಟೆಗೆ ಮಧ್ಯಾನ್ಹ ಆರತಿ 
ಪ್ರತಿದಿನ ಸಂಜೆ  6:40 ಕ್ಕೆ ಧೂಪಾರತಿ. 
ಪ್ರತಿದಿನ ರಾತ್ರಿ 9 ಘಂಟೆಗೆ ಶೇಜಾರತಿ. 

ಪ್ರತಿದಿನ ಬೆಳಿಗ್ಗೆ 8:30 ಕ್ಕೆ ಸಾಯಿಬಾಬಾರವರ ಅಷ್ಟಧಾತುವಿನ ವಿಗ್ರಹಕ್ಕೆ ಜಲಾಭಿಷೇಕವನ್ನು ಮಾಡಲಾಗುತ್ತದೆ. 

ಪ್ರತಿದಿನ ಸಾಯಿಬಾಬಾರವರಿಗೆ ಅಷ್ಟೋತ್ತರವನ್ನು ಮಾಡಲಾಗುತ್ತದೆ. ಸೇವಾಶುಲ್ಕ 10/- ರುಪಾಯಿಗಳು. 

ಪ್ರತಿ ಗುರುವಾರ, ಭಾನುವಾರ ಮತ್ತು ವಿಶೇಷ ಹಬ್ಬ ಹರಿದಿನಗಳಲ್ಲಿ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ - ಕ್ಷೀರಾಭಿಷೇಕಕ್ಕೆ  51/- ರುಪಾಯಿಗಳು ಮತ್ತು ಪಂಚಾಮೃತ ಅಭಿಷೇಕಕ್ಕೆ 101/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು. 
2. ಶ್ರೀರಾಮನವಮಿ. 
3. ಗುರು ಪೂರ್ಣಿಮೆ.
4 .ವಿಜಯದಶಮಿ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಮೈಸೂರು ಜಿಲ್ಲೆಯಲ್ಲಿರುವ ಅನೇಕ ಅನಾಥಾಶ್ರಮ ಮತ್ತು ವೃದ್ದಾಶ್ರಮಗಳಲ್ಲಿ ನಿಯಮಿತವಾಗಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. 

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ಇರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿಯನ್ನು ದೇವಾಲಯ ವಹಿಸಿಕೊಂಡಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ವಿಶ್ವಮಾನವ ಶಾಲೆಯ ಎದುರು, ರಾಮಕೃಷ್ಣ ನಗರ, ಮೈಸೂರು. 

ವಿಳಾಸ:
ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ, 
ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಾಂಗಣ, 
ಈ ಮತ್ತು ಎಫ್ ಬ್ಲಾಕ್, 
ವಿಶ್ವಮಾನವ ಶಾಲೆಯ ಎದುರು, 
ರಾಮಕೃಷ್ಣ ನಗರ, ಮೈಸೂರು-570 022, ಕರ್ನಾಟಕ.                                                   



ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಡಾ.ಆರ್.ಸೀತಾಲಕ್ಷ್ಮಿ / ಶ್ರೀ.ಪಿ.ಟಿ.ಗಂಗಾಧರಯ್ಯ/ಡಾ.ಆರ್.ಪಿ.ಸಾಯಿನಾಥ್/ಶ್ರೀ.ಹೆಚ್.ಎಸ್.ಶ್ರೀಧರ ರಾವ್/ಶ್ರೀ.ಚನ್ನಬಸವೇ ಗೌಡ/ಶ್ರೀ.ಶ್ಯಾಮ ಪ್ರಸಾದ್ 

ದೂರವಾಣಿ ಸಂಖ್ಯೆಗಳು:                                                                                                                                
+91 96205 67111 / +91 94480 64808 / +91 94486 00456 / +91 98801 00744 / +91 94482 00295 / +91 98453 95953

ಈ ಮೇಲ್ ವಿಳಾಸ:                                                                                                              

ಮಾರ್ಗಸೂಚಿ: 
ಈ ಮತ್ತು ಎಫ್ ಬ್ಲಾಕ್, ರಾಮಕೃಷ್ಣ ನಗರ ಬಸ್ ನಿಲ್ದಾಣದಲ್ಲಿ ಅಥವಾ ರಾಮಕೃಷ್ಣ ವಿದ್ಯಾಶಾಲಾ, ಕುವೆಂಪುನಗರ ಪೋಲಿಸ್ ಠಾಣೆ  ಬಸ್ ನಿಲ್ದಾಣದಲ್ಲಿ ಇಳಿಯುವುದು.ದೇವಾಲಯವು ರಾಮಕೃಷ್ಣ ನಗರದ ವಿಶ್ವಮಾನವ ಶಾಲೆಯ ಎದುರುಗಡೆ ಇರುತ್ತದೆ. ಮೈಸೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 62, 71, 61, 135, 95ಎ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment