Wednesday, June 15, 2011

ನಂಜನಗೂಡಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿಬಾಬಾ ಮಂದಿರ ಸೇವಾ ಸಮಿತಿ (ನೋಂದಣಿ), ಕನ್ನಿಕಾಪರಮೇಶ್ವರಿ ಬಡಾವಣೆ, ಜೆ.ಎಸ್.ಎಸ್.ಕಾಲೇಜ್ ಎದುರುಗಡೆ, ಊಟಿ ಮುಖ್ಯರಸ್ತೆ, ದೇವಿರಮ್ಮನಹಳ್ಳಿ,ನಂಜನಗೂಡು-571 301, ಮೈಸೂರು ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ಮಂದಿರವು ನಂಜನಗೂಡಿನ ಊಟಿ ಮುಖ್ಯರಸ್ತೆಯಲ್ಲಿರುವ ಜೆ.ಎಸ್.ಎಸ್.ಕಾಲೇಜಿನ ಎದುರುಗಡೆಯಿರುವ ದೇವಿರಮ್ಮನಹಳ್ಳಿಯ ಕನ್ನಿಕಾಪರಮೇಶ್ವರಿ ಬಡಾವಣೆಯಲ್ಲಿರುತ್ತದೆ. ಮಂದಿರವು ದೇವಿರಮ್ಮನಹಳ್ಳಿಯ ಬಸ್ ನಿಲ್ದಾಣದಿಂದ ಕೇವಲ ಎರಡು ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ.

ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಹೆಚ್.ವಿ.ಸತೀಶ್ ರವರು ತಮ್ಮ ತಾಯಿ ತಂದೆಯವರ ನೆನಪಿನಲ್ಲಿ ದಾನವಾಗಿ ನೀಡಿರುತ್ತಾರೆ. 

ಈ ಮಂದಿರದ ಭೂಮಿಪೂಜೆಯನ್ನು ಪವಿತ್ರ ಅಕ್ಷಯ ತೃತೀಯ ದಿನವಾದ 8ನೇ ಮೇ 2008 ರಂದು ಬೆಂಗಳೂರಿನ ಶ್ರೀ ಸಾಯಿಪಾದಾನಂದ ಸತ್ಸಂಗದ ಶ್ರೀ.ಪುಟ್ಟಣ್ಣ ನೆರವೇರಿಸಿದರು.

ಈ ಮಂದಿರದ ಉದ್ಘಾಟನೆಯನ್ನು 1ನೇ ಜುಲೈ 2010 ರಂದು ಬೆಂಗಳೂರಿನ ಶ್ರೀ ಸಾಯಿಪಾದಾನಂದ ಸತ್ಸಂಗದ ಶ್ರೀ.ಪುಟ್ಟಣ್ಣ ನೆರವೇರಿಸಿದರು. 

ಶ್ರೀ.ಹೆಚ್.ವಿ.ಸತೀಶ್ ರವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ದೇವಾಲಯದ ಅಭಿವೃದ್ದಿ ಕಾರ್ಯಗಳನ್ನು ಅವರೇ ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ದೇವಾಲಯದ ಮ್ಯಾನೇಜರ್ ಶ್ರೀ.ರಾಘವೇಂದ್ರ ಕಾರಂತ್  ರವರು ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯದ ಮೊದಲನೇ ಮಹಡಿಯಲ್ಲಿ ಸುಮಾರು 5 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹ, ಜರ್ಮನ್ ಬೆಳ್ಳಿಯ ಮಹಾಲಕ್ಷ್ಮಿಯ ವಿಗ್ರಹ,  ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬಳಸುವ ಪಲ್ಲಕ್ಕಿಯನ್ನು ಸಾಯಿಭಕ್ತರು ನೋಡಬಹುದು.ದೇವಾಲಯದ ಮೊದಲನೇ ಮಹಡಿಯ ಪ್ರವೇಶ ದ್ವಾರದಲ್ಲಿ ಗಣಪತಿಯ ಕಪ್ಪು ಶಿಲೆಯ ವಿಗ್ರಹವನ್ನು ನೋಡಬಹುದು. 

ದೇವಾಲಯದ ಕೆಲ ಅಂತಸ್ತಿನಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಈ ಸ್ಥಳದಲ್ಲಿ ದ್ವಾರಕಾಮಾಯಿ  ಸಾಯಿಬಾಬಾರವರ ಚಿತ್ರಪಟವನ್ನು ಮತ್ತು ಚಿತ್ರಪಟದ ಎದುರುಗಡೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳವನ್ನು ಧ್ಯಾನಮಂದಿರವನ್ನಾಗಿ ಬಳಸಲಾಗುತ್ತಿದೆ.

ದ್ವಾರಕಾಮಾಯಿಯ ಹೊರಗಡೆಯ ಪ್ರವೇಶ ದ್ವಾರದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.









ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 7:30 ಘಂಟೆಗೆ 
ಛೋಟಾ ಆರತಿ : ಬೆಳಿಗ್ಗೆ 8:30 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12.00 ಘಂಟೆಗೆ 
ಧೂಪಾರತಿ: ಸಂಜೆ 5:30 ಘಂಟೆಗೆ 
ಶೇಜಾರತಿ: ರಾತ್ರಿ 8:00 ಘಂಟೆಗೆ 

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಹಾಗೂ  ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. 

ಪ್ರತಿದಿನ ಸಂಜೆ 7 ಘಂಟೆಯಿಂದ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯ ದಿನ ಬೆಳಿಗ್ಗೆ 10 ಘಂಟೆಯಿಂದ 12 ಘಂಟೆಯವರೆಗೆ ಸಾಯಿ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು. 

ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಕಷ್ಟ ಚತುರ್ಥಿಯನ್ನು ಸಂಜೆ 7:30 ರಿಂದ ಆಚರಿಸಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 1ನೇ ಜುಲೈ.
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ. 

ದೇಣಿಗೆಗೆ ಮನವಿ: 
ದೇವಾಲಯದ ಅಭಿವೃದ್ದಿ ಕಾರ್ಯಗಳಿಗೆ ಧನ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು ಸೇವಿಂಗ್ಸ್ ಬ್ಯಾಂಕ್ ಖಾತೆ ಸಂಖ್ಯೆ :62056058251,  ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ನಂಜನಗೂಡು ಶಾಖೆಗೆ ಸಂದಾಯ ಮಾಡಬಹುದು.
 
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ದೇವಿರಮ್ಮನಹಳ್ಳಿ ಬಸ್ ನಿಲ್ದಾಣ, ಊಟಿ ಮುಖ್ಯ ರಸ್ತೆ.

ವಿಳಾಸ:
ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿಬಾಬಾ ಮಂದಿರ ಸೇವಾ ಸಮಿತಿ (ನೋಂದಣಿ), 
ಕನ್ನಿಕಾಪರಮೇಶ್ವರಿ ಬಡಾವಣೆ, 
ಜೆ.ಎಸ್.ಎಸ್.ಕಾಲೇಜ್ ಎದುರುಗಡೆ, ಊಟಿ ಮುಖ್ಯರಸ್ತೆ, 
ದೇವಿರಮ್ಮನಹಳ್ಳಿ,ನಂಜನಗೂಡು-571 301, ಮೈಸೂರು ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಹೆಚ್.ವಿ.ಸತೀಶ್ - ಅಧ್ಯಕ್ಷರು / ಶ್ರೀ.ವಿ.ರಮೇಶ್ - ಕಾರ್ಯದರ್ಶಿ / ಶ್ರೀ.ಹೆಚ್.ಆರ್.ಕನಕರಾಜು-ಖಚಾಂಚಿ / ಶ್ರೀ.ರಾಘವೇಂದ್ರ ಕಾರಂತ್ - ದೇವಾಲಯದ ಮ್ಯಾನೇಜರ್ / ಶ್ರೀ.ಗಣಪತಿ ಭಟ್ - ಅರ್ಚಕರು.

ದೂರವಾಣಿ ಸಂಖ್ಯೆಗಳು:  
+ 91 98458 28769 / +91 94488 71721 / +91 8221 226422 / +91 80957 29086 / +91 77955 35957

ಮಾರ್ಗಸೂಚಿ: 
ಊಟಿ ಮುಖ್ಯರಸ್ತೆಯಲ್ಲಿರುವ ದೇವಿರಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ 2 ನಿಮಿಷದ ನಡಿಗೆ. ಊಟಿ ಮುಖ್ಯರಸ್ತೆಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್ ಗಳಿಗೆ ಈ ಬಸ್ ನಿಲ್ದಾಣದಲ್ಲಿ ನಿಲುಗಡೆ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment