Thursday, June 23, 2011

ಹಾಸನ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಶಿರಡಿ ಸಾಯಿನಾಥ ಮಂದಿರ, ಸಾಯಿನಾಥ ರಸ್ತೆ, ಅರಸೀಕೆರೆ-573 103, ಹಾಸನ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಹಾಸನ ಜಿಲ್ಲೆಯ ಅರಸೀಕೆರೆಯ ಸಾಯಿನಾಥ ರಸ್ತೆಯಲ್ಲಿರುತ್ತದೆ. ಈ ಮಂದಿರವು ಅರಸೀಕೆರೆ ಬಸ್ ನಿಲ್ದಾಣದಿಂದ ಕೇವಲ 10 ನಿಮಿಷಗಳ ನಡಿಗೆಯ ದೂರದಲ್ಲಿರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 1961 ನೇ ಇಸವಿಯಲ್ಲಿ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 14ನೇ ಡಿಸೆಂಬರ್ 1961 ರಂದು ಶ್ರೀಶೈಲದ ಜಗದ್ಗುರು ಸೂರ್ಯ ಸಿಂಹಾಸನಾದೀಶ್ವರ ಶ್ರೀ.ಶ್ರೀ.ಶ್ರೀ.ವಾಗೀಶ್ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನೆರವೇರಿಸಿದರು. 

ಈ ದೇವಾಲಯವನ್ನು ದಿವಂಗತ ಶ್ರೀ.ಬಿ.ಸಿ.ಶಿವಣ್ಣನವರು ನಿರ್ಮಿಸಿರುತ್ತಾರೆ. ಇವರ ಪುತ್ರರಾದ ಶ್ರೀ.ಬಿ.ಎಸ್.ಸಾಯಿಕೃಪ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
 
ದೇವಾಲಯದಲ್ಲಿ ಸುಮಾರು 5 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ಜೆರ್ಮನ್ ಬೆಳ್ಳಿಯ ವಿಗ್ರಹ ಮತ್ತು ಪುಟ್ಟ ಬೆಳ್ಳಿಯ ವಿಗ್ರಹವು ಸಾಯಿಬಾಬಾರವರ ವಿಗ್ರಹದ ಬಳಿ ಇರಿಸಲಾಗಿದ್ದು ಈ ವಿಗ್ರಹಗಳನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. 

ಸಾಯಿಬಾಬಾ ದೇವಾಲಯದ ಎಡಭಾಗದಲ್ಲಿ  ವಿಷಪರಿಹಾರೇಶ್ವರ ದೇವಾಲಯವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಕಪ್ಪು ಶಿಲೆಯ  ವಿಷಪರಿಹಾರೇಶ್ವರ ದೇವರನ್ನು ಪ್ರತಿಷ್ಟಾಪಿಸಲಾಗಿದೆ. ವಿಷಪರಿಹಾರೇಶ್ವರ ದೇವರ ಎದುರುಗಡೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ಮಂದಿರದ ಎದುರುಗಡೆಯಲ್ಲಿರುವಂತೆ ರಂಗಮಂದಿರವನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ವಿಶೇಷ ಉತ್ಸವದ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.














ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಪ್ರತಿದಿನ ಬೆಳಿಗ್ಗೆ 11 ಘಂಟೆಗೆ ಮತ್ತು ಗುರುವಾರ ಮಧ್ಯಾನ್ಹ 12:30 ಕ್ಕೆ. 
ಪ್ರತಿದಿನ ರಾತ್ರಿ 7:45 ಕ್ಕೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ 

ಪ್ರತಿನಿತ್ಯ ಬೆಳಿಗ್ಗೆ 9:45 ಕ್ಕೆ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಮತ್ತು ಪ್ರತಿ ಗುರುವಾರ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ  ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 50/- ರುಪಾಯಿಗಳು. 

ಪ್ರತಿದಿನ ಸಂಜೆ 7 ಘಂಟೆಯಿಂದ 7 ಘಂಟೆ 45 ನಿಮಿಷದವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಮಾರ್ಗಶಿರ ಶುದ್ಧ ಸಪ್ತಮಿಯಂದು. 
2. ಶಿವರಾತ್ರಿ -ವಿಷಪರಿಹಾರೇಶ್ವರ ಮತ್ತು ಸಾಯಿಬಾಬಾ ವಿಗ್ರಹಕ್ಕೆ 4 ಯಾಮಗಳ ವಿಶೇಷ ಅಭಿಷೇಕ ಪೂಜೆ.
3. ಶ್ರೀರಾಮನವಮಿ. 
4. ಗುರು ಪೂರ್ಣಿಮೆ.
5 .ವಿಜಯದಶಮಿ.

ವಾರ್ಷಿಕೋತ್ಸವದ ದಿನ ಪಲ್ಲಕ್ಕಿ ಉತ್ಸವ ಮತ್ತು ಮಂದಿರಕ್ಕೆ ಬರುವ ಎಲ್ಲ ಭಕ್ತರಿಗೆ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ. ಆ ದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. 

ಕಾರ್ತೀಕ ದೀಪೋತ್ಸವ ಕಾರ್ಯಕ್ರಮವನ್ನು ಕೂಡ ಸಾಯಿ ಮಂದಿರದಲ್ಲಿ ಪ್ರತಿ ವರ್ಷ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕೆ.ವಿ.ಪೆಟ್ರೋಲ್ ಬಂಕ್ ವೃತ್ತದ ಎದುರುಗಡೆ ರಸ್ತೆ, ಸಾಯಿನಾಥ ರಸ್ತೆ, ಅರಸೀಕೆರೆ. 
 
ವಿಳಾಸ:
ಶ್ರೀ ಶಿರಡಿ ಸಾಯಿನಾಥ ಮಂದಿರ, 
ಸಾಯಿನಾಥ ರಸ್ತೆ, ಅರಸೀಕೆರೆ-573 103, 
ಹಾಸನ ಜಿಲ್ಲೆ, ಕರ್ನಾಟಕ                                                                      
 
ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ಬಿ.ಎಸ್.ಸಾಯಿಕೃಪ / ಶ್ರೀ.ಎಂ.ವಿ.ಸಾಯಿರಾಂ                                                             

ದೂರವಾಣಿ ಸಂಖ್ಯೆಗಳು:                                                                                                                                 + 91 90359 03394 / +91 99643 20985

ಈ ಮೇಲ್ ವಿಳಾಸ:                                                                                                               savithakrupa@gmail.com
 
ಮಾರ್ಗಸೂಚಿ: 
ಅರಸೀಕೆರೆ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಪಿ.ಪಿ.ವೃತ್ತದ ಬಳಿಗೆ ತೆರಳಿ ಅಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ನಡೆದರೆ ಕೆ.ವಿ.ಪೆಟ್ರೋಲ್ ಬಂಕ್ ವೃತ್ತ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಸಾಯಿನಾಥ ರಸ್ತೆಯಲ್ಲಿ 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಅಯೋಧ್ಯ ಹೋಟೆಲ್ ಪಕ್ಕದಲ್ಲಿರುತ್ತದೆ. ಅರಸೀಕೆರೆ ಬಸ್ ನಿಲ್ದಾಣದಿಂದ 10 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment