ತುಮಕೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ) , ಟುಡಾ ಕಚೇರಿ ಎದುರು, ಶಿರಡಿ ಸಾಯಿಬಾಬಾ ನಗರ, ಬೆಳಗುಂಬ ರಸ್ತೆ, ತುಮಕೂರು-2, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವು ತುಮಕೂರಿನ ಬೆಳಗುಂಬ ಮುಖ್ಯರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ನಗರದ ಟುಡಾ ಕಚೇರಿ ಎದುರು ಇರುತ್ತದೆ.
ಈ ಮಂದಿರದ ಭೂಮಿಪೂಜೆಯನ್ನು ಜುಲೈ 2007 ರಂದು ಮಾಡಲಾಯಿತು.
ದೇವಾಲಯದ ಕೆಲ ಮಹಡಿಯಲ್ಲಿರುವ ದ್ವಾರಕಾಮಾಯಿಯನ್ನು 31ನೇ ಅಕ್ಟೋಬರ್ 2009 ರಂದು ಉದ್ಘಾಟಿಸಲಾಯಿತು.
ಮೊದಲನೇ ಮಹಡಿಯಲ್ಲಿ ಇರುವ ಶಿರಡಿ ಸಾಯಿಬಾಬಾ ಮಂದಿರದ ಉದ್ಘಾಟನೆಯನ್ನು 15ನೇ ಮೇ 2011 ರಂದು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶ್ರೀಗಳಾದ ಮತ್ತು "ನಡೆದಾಡುವ ದೇವರು" ಎಂದೇ ಪ್ರಖ್ಯಾತರಾದ ಡಾ. ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿ ನೆರವೇರಿಸಿದರು.
ದೇವಾಲಯವು ಬೆಳಿಗ್ಗೆ 6 ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8.30 ಘಂಟೆಗೆ ಶೇಜಾರತಿಯೊಂದಿಗೆ ಮುಚ್ಚಲ್ಪಡುತ್ತದೆ.
ದೇವಾಲಯದಲ್ಲಿ 5 ಅಡಿ 5 ಅಂಗುಲ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಬೆಳ್ಳಿಯ ಮತ್ತು ಪಂಚಲೋಹದ ಸಾಯಿಬಾಬಾರವರ ವಿಗ್ರಹಗಳು, ಶಿರಡಿಯಲ್ಲಿರುವಂತೆ ದೇವಾಲಯದ ಹೊರಗಡೆ ಸಾಯಿಬಾಬಾರವರ ಎದುರುಗಡೆ ಇರುವಂತೆ ನಂದಿಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. ಅಲ್ಲದೆ, ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಬಿತ್ತರಿಸುವ ಚಿತ್ರಗಳನ್ನು ದೇವಾಲಯದ ಗೋಡೆಗಳ ಮೇಲೆ ತೂಗುಹಾಕಲಾಗಿದೆ.
ಕೆಳ ಅಂತಸ್ತಿನಲ್ಲಿ ಇರುವ ದ್ವಾರಕಾಮಾಯಿಯಲ್ಲಿ 3 ಅಡಿ ಎತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಮಂದಿರದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ ಸೂರ್ಯಾಸ್ತ ಸಮಯಕ್ಕೆ.
ಶೇಜಾರತಿ: ರಾತ್ರಿ 8:30 ಕ್ಕೆ
ಪ್ರತಿನಿತ್ಯ ಕಾಕಡಾ ಆರತಿಯ ನಂತರ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸಲಾಗುತ್ತದೆ.
ವಿಶೇಷ ಉತ್ಸವದ ದಿನಗಳು:
1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 15ನೇ ಮೇ.
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ.
4. ವಿಜಯದಶಮಿ.
5.ದತ್ತ ಜಯಂತಿ.
6.ಹೊಸವರ್ಷದ ಆಚರಣೆ.
7.ಶಿವರಾತ್ರಿ.
8.ಗೋಕುಲಾಷ್ಟಮಿ.
8.ಗೋಕುಲಾಷ್ಟಮಿ.
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಟುಡಾ ಕಚೇರಿ ಎದುರು, ಶಿರಡಿ ಸಾಯಿಬಾಬಾ ನಗರ.ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ) ,
ಟುಡಾ ಕಚೇರಿ ಎದುರು, ಶಿರಡಿ ಸಾಯಿಬಾಬಾ ನಗರ,
ಬೆಳಗುಂಬ ರಸ್ತೆ, ತುಮಕೂರು-2, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿಗಳು:ಶ್ರೀ.ಶ್ರೀನಿವಾಸ / ಶ್ರೀ.ವೇಣುಗೋಪಾಲ್ / ಶ್ರೀ.ಸುಜಯ್ ಬಾಬು / ಶ್ರೀ.ಶಂಕರ್
ಸಂಪರ್ಕಿಸಬೇಕಾದ ವ್ಯಕ್ತಿಗಳು:
ದೂರವಾಣಿ ಸಂಖ್ಯೆಗಳು:
+ 91 98444 15855 /+91 99018 00527 /+91 99644 00498 /+91 98869 40545
ಮಾರ್ಗಸೂಚಿ:
ಸರ್ಕಾರಿ ಕಾಲೇಜು ಬಸ್ ನಿಲ್ದಾಣದಲ್ಲಿ ಇಳಿಯುವುದು. ಇಲ್ಲಿಂದ 10 ನಿಮಿಷದ ನಡಿಗೆ. ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ 2 ನಿಮಿಷದ ನಡಿಗೆ. ದೇವಾಲಯವು ಬೆಳಗುಂಬ ರಸ್ತೆಯ ಟುಡಾ ಕಚೇರಿಯ ಎದುರು ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment