ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಸಾಯಿಮಂದಿರ ಟ್ರಸ್ಟ್ (ನೋಂದಣಿ), ನಂ.1839, ಶ್ರೀ.ಸಾಯಿ ಮಂದಿರ ರಸ್ತೆ, 3ನೇ ಅಡ್ಡರಸ್ತೆ, ಡಿ-ಬ್ಲಾಕ್, 2ನೇ ಘಟ್ಟ, ರಾಜಾಜಿನಗರ, ಬೆಂಗಳೂರು-560 010. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾದ ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಇರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ದೇವಾಲಯದ ಭೂಮಿಪೂಜೆಯನ್ನು 1984-85 ನೇ ಇಸವಿಯಲ್ಲಿ ಮಾಡಲಾಯಿತು.
- ಈ ದೇವಾಲಯವನ್ನು 12ನೇ ಮೇ 1986 ರಂದು ಶ್ರೀ.ವೈ.ರಾಮಚಂದ್ರ ಉದ್ಘಾಟಿಸಿದರು.
- ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವನ್ನು ಸಾಯಿಮಂದಿರದಲ್ಲಿ ನೋಡಬಹುದು.
ದೇವಾಲಯದ ಹೊರನೋಟ
ಪುಷ್ಪಾಭಿಷೇಕದಿಂದ ಅಲಂಕೃತಗೊಂಡ ಸಾಯಿಬಾಬಾ
ಭಜನೆಯಲ್ಲಿ ನಿರತರಾಗಿರುವ ಸಾಯಿ ವಿದ್ಯಾಲಯದ ಮಕ್ಕಳು
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ | ಸಮಯ |
ಬೆಳಿಗ್ಗೆ | 6:00 AM |
ಮಧ್ಯಾನ್ಹ | 12:00 PM |
ಸಾಯಂಕಾಲ | 6:00 PM |
- ಪ್ರತಿ ಗುರುವಾರ ಬೆಳಿಗ್ಗೆ 10:30 ರಿಂದ 11:30 ರವರೆಗೆ ಮಂದಿರದ ವತಿಯಿಂದ ನಡೆಸುವ ಸಾಯಿ ವಿದ್ಯಾಲಯ ಮತ್ತು ಸಾಯಿ ಮಹಿಳೆಯರ ಕಾಲೇಜ್ ನ ವಿದ್ಯಾರ್ಥಿಗಳಿಂದ ಭಜನೆಯ ಕಾರ್ಯಕ್ರಮವಿರುತ್ತದೆ.
- ಎಲ್ಲಾ ವಿಶೇಷ ಉತ್ಸವದ ದಿನಗಳಲ್ಲಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವಿರುತ್ತದೆ.
- ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
- ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
- ಪ್ರತಿ ತಿಂಗಳ ತ್ರಯೋದಶಿಯಂದು ಪ್ರದೋಷ ಪೂಜೆಯನ್ನು ಆಚರಿಸಲಾಗುತ್ತದೆ.
- ಪ್ರತಿ ತಿಂಗಳೂ ಮಂದಿರದಲ್ಲಿ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.
- ಕಾರ್ತೀಕ ಮಾಸದ ಎಲ್ಲಾ ಸೋಮವಾರಗಳಂದು ವಿಶೇಷ ಪೂಜಾ ಕಾರ್ಯಕ್ರಮವಿರುತ್ತದೆ.
- ಧನುರ್ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
- ಪ್ರತಿ ಗುರುವಾರ ಬೆಳಿಗ್ಗೆ 7:30 ರಿಂದ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ವಿಶೇಷ ಅಭಿಷೇಕ ಕಾರ್ಯಕ್ರಮವಿರುತ್ತದೆ. ಅಲ್ಲದೇ, ಸಂಜೆ 6 ರಿಂದ 8 ಘಂಟೆಯವರೆಗೆ ವಿಶೇಷ ಭಜನೆಯ ಕಾರ್ಯಕ್ರಮವಿರುತ್ತದೆ.
ವಿಶೇಷ ಉತ್ಸವದ ದಿನಗಳು:
- ಪ್ರತಿ ವರ್ಷದ 12ನೇ ಮೇ ದೇವಾಲಯದ ವಾರ್ಷಿಕೋತ್ಸವ.
- ಗುರುಪೂರ್ಣಿಮೆ.
- ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
- ಪ್ರತಿ ವರ್ಷದ 31ನೇ ಡಿಸೆಂಬರ್ .
- ಪ್ರತಿ ವರ್ಷದ 1ನೇ ಜನವರಿ.
- ಪ್ರತಿ ವರ್ಷದ ಜನವರಿಯ ಮೊದಲನೇ ಭಾನುವಾರ.
ಸಾಮಾಜಿಕ ಕಾರ್ಯಚಟುವಟಿಕೆಗಳು:
- ಪ್ರತಿ ಗುರುವಾರದಂದು ಪ್ರಸಾದ ವಿತರಣೆ.
- ಉಚಿತ ಆರೋಗ್ಯ ತಪಾಸಣಾ ಶಿಬಿರಗಳು.
- ಆಧ್ಯಾತ್ಮಿಕ ಪ್ರವಚನಗಳು, ಧ್ಯಾನ ಮತ್ತು ಯೋಗ ಶಿಬಿರಗಳು.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ಸ್ಥಳ | ನವರಂಗ್ ಚಿತ್ರಮಂದಿರದ ಹತ್ತಿರ. |
ವಿಳಾಸ | ಶ್ರೀ.ಸಾಯಿಮಂದಿರ ಟ್ರಸ್ಟ್ (ನೋಂದಣಿ), ನಂ.1839, ಶ್ರೀ.ಸಾಯಿ ಮಂದಿರ ರಸ್ತೆ, 3ನೇ ಅಡ್ಡರಸ್ತೆ, ಡಿ-ಬ್ಲಾಕ್, 2ನೇ ಘಟ್ಟ, ರಾಜಾಜಿನಗರ, ಬೆಂಗಳೂರು-560 010. ಕರ್ನಾಟಕ |
ಸಂಪರ್ಕಿಸಬೇಕಾದ ವ್ಯಕ್ತಿಗಳು | ಶ್ರೀ.ಆರ್.ಆನಂದ್ |
ದೂರವಾಣಿ | +91 80 2332 4716 |
ಇಮೇಲ್ | |
ಅಂತರ್ಜಾಲ | |
ಮಾರ್ಗಸೂಚಿ | ಈ ದೇವಾಲಯವು ನವರಂಗ್ ಚಿತ್ರಮಂದಿರದ ಬಳಿ ಇರುತ್ತದೆ. ಮರಿಯಪ್ಪನ ಪಾಳ್ಯ ಬಸ್ ನಿಲ್ದಾಣದ ಬಳಿ ಇಳಿಯುವುದು. ಬಸ್ ಸಂಖ್ಯೆಗಳು: ಮೆಜಿಸ್ಟಿಕ್ ನಿಂದ- 96,96A,96D, ಮಾರುಕಟ್ಟೆ - 95,77,91D, ಮಲ್ಲೇಶ್ವರಂ - 75,75A, ಶಿವಾಜಿನಗರ - 74,63 |
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment