Thursday, January 20, 2011

ಪ್ರಪಂಚದ ಅತ್ತ್ಯುತ್ತಮ ನಟರಲ್ಲಿ ಒಬ್ಬರಾದ "ಶಿರಡಿ ಸಾಯಿಬಾಬಾ ಪಾತ್ರಧಾರಿ" ನಟ ಶ್ರೀ.ಮುಕುಲ್ ನಾಗ್ - ಕೃಪೆ: ಸಾಯಿ ಅಮೃತಧಾರಾ.ಕಾಂ

ಶ್ರೀ.ಮುಕುಲ್ ನಾಗ್ "ಸಾಯಿಬಾಬಾ" ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ!!!
 
ಖ್ಯಾತ ನಿರ್ದೇಶಕ ರಮಾನಂದ ಸಾಗರ್ ನಿರ್ದೇಶಿಸಿ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರಗೊಂಡ "ಸಾಯಿಬಾಬಾ" ಧಾರಾವಾಹಿಯಲ್ಲಿ "ಶಿರಡಿ ಸಾಯಿಬಾಬಾ" ಪಾತ್ರದಲ್ಲಿ ಅಭಿನಯಿಸಿದ ಶ್ರೀ.ಮುಕುಲ್ ನಾಗ್ ರವರು ಪ್ರಪಂಚದಾದ್ಯಂತ ಎಲ್ಲಾ ಸಾಯಿಭಕ್ತರ ಮನೆಮಾತಾಗಿದ್ದಾರೆ. ಇವರು 25ನೇ ಅಕ್ಟೋಬರ್ 1961 ರಂದು ಉತ್ತರಪ್ರದೇಶದ ಮೀರತ್ ನಲ್ಲಿ ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಸುಕುಮಾರ್ ನಾಗ್ ಮತ್ತು ಇವರ ತಾಯಿ ಶ್ರೀಮತಿ.ಅಮಿತಾ ನಾಗ್. ಇವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಲ್ಲಿ 1987 ರಿಂದ 1990 ರ ತನಕ "ನಟನೆ" ಯಲ್ಲಿ ಅಮುಲಾಗ್ರ ತರಬೇತಿಯನ್ನು ಪಡೆದು ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಇವರು ಶ್ರೀಮತಿ.ಇಂದಿರಾ ನಾಗ್ ರವರನ್ನು ವಿವಾಹವಾಗಿ 2 ಮಕ್ಕಳ ತಂದೆಯಾಗಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ಮುಕುಲ್ ನಾಗ್ ರವರು ರಂಗಭೂಮಿಯ ಹೆಸರಾಂತ ನಿರ್ದೇಶಕರುಗಳಾದ ಶ್ರೀ.ಬಿ.ಎಂ.ಷಾ, ಶ್ರೀ.ಸತ್ಯದೇವ್ ದುಬೆ, ಶ್ರೀ.ಬಿ.ವಿ.ಕಾರಂತ್, ಶ್ರೀ.ಬಾದಲ್ ಸರ್ಕಾರ್, ಶ್ರೀ.ರೋಶನ್ ಸೇಥ್, ಶ್ರೀ.ರಾಜೇಂದ್ರ ಪ್ರಸನ್ನ, ಶ್ರೀ.ಬ್ಯಾರಿ ಜಾನ್, ಶ್ರೀ.ಎಂ.ಕೆ.ರೈನಾ, ಶ್ರೀ.ರಾಜೇಂದ್ರನಾಥ್, ಶ್ರೀ.ಫ್ರಿಟ್ಜ್  ಬೆನೆವಿಟ್ (ಜರ್ಮನಿ), ಶ್ರೀ.ದೇವೇಂದ್ರ ರಾಜ್ ಅಂಕುರ್, ಕುಮಾರಿ.ಕ್ರಿಸ್ಟೋನ್ ಲಂಡನ್ ಸ್ಮಿತ್ (ಬ್ರಿಟನ್), ಶ್ರೀ.ರಿಚರ್ಡ್ ಫೌಲರ್ (ಡೆನ್ಮಾರ್ಕ್), ಶ್ರೀ.ರಾಡ್ನಿ ಮ್ಯಾರಿಯಟ್ (ಅಮೇರಿಕಾ) ಮತ್ತು ಇನ್ನಿತರ ದಿಗ್ಗಜರೊಡನೆ ಕೆಲಸ ಮಾಡಿರುತ್ತಾರೆ.


ಇವರ ಕೆಲವು ಸಾಧನೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ವೃತ್ತಿ ಸಾರಾಂಶ:
  1. ಅನೇಕ ಸಿನಿಮಾಗಳಲ್ಲಿ ನಟರಾಗಿ ಮತ್ತು ಖಾಸಗಿ ವಾಹಿನಿಗಳ ಅನೇಕ ಧಾರಾವಾಹಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಅಭಿನಯಿಸಿ ದಿನದಿಂದ ದಿನಕ್ಕೆ ತಮ್ಮ ನಟನಾ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ. 
  2. ಸಿನಿಮಾ ಮತ್ತು ಧಾರಾವಾಹಿ ನಟನೆಯಲ್ಲಿ ಮಾತ್ರವಲ್ಲದೇ ಅವುಗಳ ತಯಾರಿಕಾ ಕ್ಷೇತ್ರದಲ್ಲೂ ಕೂಡ ಪರಿಣತಿಯನ್ನು ಹೊಂದಿದ್ದಾರೆ. 
  3. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. 
  4. ತಾವು ನಟಿಸುವ ಪಾತ್ರಗಳ ಒಳಹೊಕ್ಕು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅತ್ತ್ಯುತ್ತಮ ಅಭಿನಯ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. 
  5. ತಮಗೆ ತಿಳಿಯದ ಯಾವುದೇ ವಿಷಯವನ್ನಾಗಲೀ ಬಹಳ ಬೇಗನೆ ಅರ್ಥ ಮಾಡಿಕೊಂಡು ಅದನ್ನು ನಿಗದಿತ ಸಮಯಕ್ಕೆ ಮುಂಚೆಯೇ ಮಾಡಿ ಮುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. 
ಇವರ ಸಾಧನೆಯ ಹೆಜ್ಜೆ ಗುರುತುಗಳು:

ಚಲನಚಿತ್ರಗಳಲ್ಲಿ ನಟರಾಗಿ ಅಭಿನಯಿಸಿದ ಚಿತ್ರಗಳು:

  1. ನಿರ್ದೇಶಕ ಪಾರ್ಥೋ ಗೋಷ್ ರವರ "ರಹಮತ್ ಆಲಿ".
  2. ನಿರ್ದೇಶಕ ಪ್ರಕಾಶ್ ಜಾ ರವರ "ಅಪಹರಣ್" ಮತ್ತು "ಗಂಗಾಜಲ್".
  3. ನಿರ್ದೇಶಕ ಶ್ಯಾಮ್ ಬೆನಗಲ್ ರವರ "ನೇತಾಜಿ ದಿ ಫರ್ಗಾಟನ್ ಹೀರೋ".
  4. ನಿರ್ದೇಶಕ ಚಂದನ್ ಅರೋರ ರವರ "ಮೈ ಮಾಧುರಿ ದೀಕ್ಷಿತ್ ಬನ್ನಾಚಾಹತಿ ಹೂ".
  5. ನಿರ್ದೇಶಕ ರಾಮ್ ಗೋಪಾಲ್ ವರ್ಮ ರವರ "ಕಂಪೆನಿ".
  6. ನಿರ್ದೇಶಕ ರೋಹಿತ್ ಜುಗರಾಜ್ ರವರ "ಜೇಮ್ಸ್".
  7. ನಿರ್ದೇಶಕ ಗೋವಿಂದ್ ನಿಹಲಾನಿ ರವರ "ಹಜಾರ್ ಚೌರಾಸಿ ಕೀ ಮಾ".
  8. ನಿರ್ದೇಶಕ ಮಧುರ್ ಬಂಡಾರ್ಕರ್ ರವರ "ಸತ್ತಾ" ಮತ್ತು "ಆನ್".
  9. ನಿರ್ದೇಶಕ ಬಿಮಲ್ ದತ್ತ ರವರ "ಪ್ರತಿಮುರ್ತಿ".
  10. ನಿರ್ದೇಶಕ ಕಿಟು ಘೋಷ್ ರವರ "ಚೌಕಿ"

ವಾಹಿನಿಗಳಲ್ಲಿ ನಟರಾಗಿ ಅಭಿನಯಿಸಿದ ಧಾರಾವಾಹಿಗಳು:
  1. ರಮಾನಂದ್ ಸಾಗರ್ ರವರ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ "ಸಾಯಿಬಾಬಾ".
  2. ಜೀ ವಾಹಿನಿಯಲ್ಲಿ ಪ್ರಸಾರವಾದ ಫಿಲಂ ಫಾರಂ ರವರ "ತುಮ್ಹಾರಿ ದಿಶಾ".
  3. ಶಕ್ತಿ ಸಾಮಂತರವರ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ ಚಿತ್ರ "ಕಾಲಚಕ್ರ".
  4. ಬಸು ಚಟರ್ಜಿ ಯವರ ದೂರದರ್ಶನದಲ್ಲಿ ಪ್ರಸಾರವಾದ "ಗಂಗಾಪುರ್ ಕೀ ಗಂಗಾರಾಮ್".
  5. ಬಿಬಿಸಿ ವಾಹಿನಿ ನಿರ್ಮಿಸಿ ಪ್ರಪಂಚಾದಾದ್ಯಂತ ವಿವಿಧ ವಾಹಿನಿಗಳಲ್ಲಿ ಪ್ರಸಾರವಾದ "ಜಾಸೂಸ್ ವಿಜಯ್".
  6. ವಿನೋದ್ ಪಾಂಡೆ ಯವರ ದೂರದರ್ಶನದಲ್ಲಿ ಪ್ರಸಾರವಾದ "ಮೇರೆ ಹಂಸಫರ್".
  7. ಬಸು ಚಟರ್ಜಿಯವರ ದೂರದರ್ಶನದಲ್ಲಿ ಪ್ರಸಾರವಾದ "ವ್ಯೋಮಕೇಶ್ ಭಕ್ಷಿ".
  8. ಅನುರಾಗ್ ಬಸು ರವರ ಜೀ ವಾಹಿನಿಯಲ್ಲಿ ಪ್ರಸಾರವಾದ "ಸ್ಯಾಟರ್ಡೇ ಸಸ್ಪೆನ್ಸ್".
  9. ಉಮೇಶ್ ಪಡಲ್ಕರ್ ರವರ ಸಹಾರಾ ಒನ್ ನಲ್ಲಿ ಪ್ರಸಾರವಾದ "ಕಗರ್".
 ಸಂಪರ್ಕದ ವಿವರಗಳು 

ಕಲಾವಿದರ ಹೆಸರು  ಶ್ರೀ.ಮುಕುಲ್ ನಾಗ್ 
ವಿಳಾಸ
ಎ-301+302, ನಿರ್ಮಲ್ ಟವರ್,  ಹೈನೆಸ್ ಪಾರ್ಕ್, ಮೀರಾ ರಸ್ತೆ (ಪೂರ್ವ), ಥಾಣೆ - 401 107. ಮಹಾರಾಷ್ಟ್ರ.
ದೂರವಾಣಿ +91 99200 65658, +91 99308 88544
ಈ ಮೇಲ್ mukulnag@gmail.com, nagmukul@rediffmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment