ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಸಂಕಷ್ಟ ಗಣಪತಿ ಮತ್ತು ಶ್ರೀ.ಸಾಯಿಬಾಬಾ ದೇವಸ್ಥಾನ ಟ್ರಸ್ಟ್ (ನೋಂದಣಿ), 3ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮರಿಯಪ್ಪನ ಪಾಳ್ಯ, ಪ್ರಕಾಶನಗರ, ಬೆಂಗಳೂರು-560 021, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ಮಲ್ಲೇಶ್ವರಂ ವೃತ್ತದಿಂದ ನವರಂಗ್ ಚಿತ್ರಮಂದಿರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ಮರಿಯಪ್ಪನ ಪಾಳ್ಯದಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ದೇವಾಲಯವನ್ನು 31ನೇ ಆಗಸ್ಟ್ 2009 ರಂದು ಬ್ರಹ್ಮ ಶ್ರೀ ಹೋಮ ಕುಂಡ ಶ್ರೀ. ಶ್ರೀ.ನಾರಾಯಣ ಸ್ವಾಮಿಗಳ್ ಮತ್ತು ಶ್ರೀ.ಕಂದಸ್ವಾಮಿ ಶಿವಾಚಾರ್ಯ ವೃಂದ, ರಾಶಿಪುರಂ, ಸೇಲಂ, ತಮಿಳುನಾಡು ಇವರುಗಳು ಉದ್ಘಾಟಿಸಿದರು.
- ಈ ದೇವಾಲಯದಲ್ಲಿ ಗಣಪತಿಯ ಸುಂದರ ಕಪ್ಪು ಶಿಲೆಯ ವಿಗ್ರಹ ಮತ್ತು ಅಮೃತಶಿಲೆಯ ಸಾಯಿಬಾಬಾರವರ ಸುಂದರ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು.
ದೇವಾಲಯದ ಹೊರನೋಟ
ಗಣಪತಿಯ ವಿಗ್ರಹ
ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 7:45 ಕ್ಕೆ.
ಮಧ್ಯಾನ್ಹ ಆರತಿ: ಪ್ರತಿದಿನ 10:30 ಕ್ಕೆ.
ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ.
ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ.
ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 7:45 ಕ್ಕೆ.
ಮಧ್ಯಾನ್ಹ ಆರತಿ: ಪ್ರತಿದಿನ 10:30 ಕ್ಕೆ.
ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ.
ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ.
ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಸಾಯಿಬಾಬಾರವರಿಗೆ ಮತ್ತು ಗಣಪತಿಯ ವಿಗ್ರಹಗಳಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.
ಪ್ರತಿ ತಿಂಗಳೂ ಸಂಕಷ್ಟ ಚತುರ್ಥಿಯನ್ನು ಸಂಜೆ 6:30 ರಿಂದ 8:00 ಘಂಟೆಯವರೆಗೆ ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.
ಪ್ರತಿ ಗುರುವಾರ ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ವಿಶೇಷ ಉತ್ಸವದ ದಿನಗಳು:
- ಪ್ರತಿ ವರ್ಷದ 31ನೇ ಆಗಸ್ಟ್ ದೇವಾಲಯದ ವಾರ್ಷಿಕೋತ್ಸವ.
- ಶಿವರಾತ್ರಿ.
- ಗುರು ಪೂರ್ಣಿಮಾ.
- ವೈಕುಂಠ ಏಕಾದಶಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಮರಿಯಪ್ಪನ ಪಾಳ್ಯ ಬಸ್ ನಿಲ್ದಾಣದ ಹತ್ತಿರ.
ವಿಳಾಸ:
ಶ್ರೀ.ಸಂಕಷ್ಟ ಗಣಪತಿ ಮತ್ತು ಶ್ರೀ.ಸಾಯಿಬಾಬಾ ದೇವಸ್ಥಾನ ಟ್ರಸ್ಟ್ (ನೋಂದಣಿ),
3ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಮರಿಯಪ್ಪನ ಪಾಳ್ಯ,
ಪ್ರಕಾಶನಗರ, ಬೆಂಗಳೂರು-560 021, ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಮಂಜುನಾಥ್/ ಶ್ರೀ.ಶಿವಕುಮಾರ್/ಶ್ರೀ.ಮೋಹನ್ ಕುಮಾರ್/ ಶ್ರೀ.ರವಿಚಾರ್- ಅರ್ಚಕರು.
ದೂರವಾಣಿ ಸಂಖ್ಯೆಗಳು:
+91 99025 46834 / +91 99459 38326 / +91 97311 64945 / +91 93412 30361
ಮಾರ್ಗಸೂಚಿ:
ಮರಿಯಪ್ಪನ ಪಾಳ್ಯ ಬಸ್ ನಿಲ್ದಾಣ ಅಥವಾ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಎರಡು ಬಸ್ ನಿಲ್ದಾಣದಿಂದ ಸಮ ದೂರದಲ್ಲಿ ಇರುತ್ತದೆ. ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.
ಕನ್ನಡ ಅನುವಾದ:ಶ್ರೀಕಂಠ ಶರ್ಮ
No comments:
Post a Comment