ಹೊಸ ವರ್ಷದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಾಯಿ ಭಜನಸಂಧ್ಯಾ ಕಾರ್ಯಕ್ರಮ - 1ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ
ಹೊಸ ವರ್ಷದ ಅಂಗವಾಗಿ ಬೆಂಗಳೂರಿನ ಜಯನಗರ ೯ ನೇ ಬಡಾವಣೆಯ ಶ್ರೀ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್, ಶ್ರೀ.ಶಿವಚರಣ್ ಮತ್ತು ತಂಡದವರಿಂದ ಸಾಯಿ ಭಜನಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆಯ ಆರತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಸುಶ್ರಾವ್ಯವಾಗಿ ಸಾಯಿ ಭಜನೆಗಳನ್ನು ಹಾಡಿ ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್ ಮತ್ತು ಶ್ರೀ.ಶಿವಚರಣ್ ರವರು ನೆರೆದಿದ್ದ ಸಾಯಿಭಕ್ತರನ್ನು ರಂಜಿಸಿದರು. ಕಾರ್ಯಕ್ರಮವು ರಾತ್ರಿಯ ಶೇಜಾರತಿಯೊಂದಿಗೆ ಸುಸಂಪನ್ನವಾಯಿತು.
ಶ್ರೀ.ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿರುವ ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಸುಂದರ ಭಾವಚಿತ್ರ
ಎಡದಿಂದ ಬಲಕ್ಕೆ: ಶ್ರೀ.ಗಂಗಾಧರ ತಿಲಕ್, ಶ್ರೀ.ಶಿವಚರಣ್ ಮತ್ತು ಶ್ರೀ.ಕಾರ್ತಿಕ್ ಸಾಯಿ ಭಜನೆಯಲ್ಲಿ ತಲ್ಲೀನರಾಗಿರುವ ದೃಶ್ಯ
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment