Thursday, January 20, 2011

"ಸಾಯಿಬಾಬಾ" ಪಾತ್ರಧಾರಿ ನಟ,ಸಮಾಜ ಸೇವಾ ಧುರೀಣ ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ - ಕೃಪೆ: ಸಾಯಿಅಮೃತಧಾರಾ.ಕಾಂ

 ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್

 ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ "ಸಾಯಿಬಾಬಾ" ಪಾತ್ರದಲ್ಲಿ 

ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಇವರು 62ನೇ ವಯಸ್ಸಿನಲ್ಲೂ ಕೂಡ ಬಹಳ ಉತ್ಸಾಹಿ ತರುಣರಂತೆ ತಮ್ಮನ್ನು ಅನೇಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಎ ಪದವೀಧರರಾಗಿರುವ ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರು 1971 ರಿಂದ 2009 ರವರಗೆ ಎ.ಪಿ.ಪೇಪರ್ ಮಿಲ್ಲ್ಸ್, ರಾಜಮಂಡ್ರಿಯಲ್ಲಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ, ಇವರು ಎಸ್.ಬಿ.ಪೇಪರ್ ಬೋರ್ಡ್ ಪ್ರೈವೇಟ್ ಲಿಮಿಟೆಡ್, ಕಾನಾವರಂ, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರು "ಓಂ ಶ್ರೀ ಸಾಯಿರಾಮ್ ಆಧ್ಯಾತ್ಮಿಕ ಚೈತನ್ಯ ಕೇಂದ್ರ ಟ್ರಸ್ಟ್" ಎಂಬಲ್ಲಿ ಖಚಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1985 ರಿಂದ ಈ ಟ್ರಸ್ಟ್ "ಸಾಯಿ ನಾಮ ಜಪ" ಕಾರ್ಯಕ್ರಮಗಳನ್ನು ಅನೇಕ ಕಡೆ ಹಮ್ಮಿಕೊಂಡಿದೆ. ಅಲ್ಲದೇ, "ದ್ವಾರಕಾಮಾಯಿ ಬಾಬಾ" ರವರ ಒಂದು ಭವ್ಯವಾದ ಮಂದಿರವನ್ನು ಕೂಡ ನಿರ್ಮಾಣ ಮಾಡಿದೆ. ಅಲ್ಲದೇ, ಈ ಟ್ರಸ್ಟ್, ಎಲ್ಲಾ ಪ್ರಮುಖ ಉತ್ಸವದ ದಿನಗಳಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ "ಅನ್ನದಾನ" ಮತ್ತು "ವಸ್ತ್ರದಾನ" ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರು ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. 

ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರು ಒಳ್ಳೆಯ ರಂಗಭೂಮಿ ಕಲಾವಿದರು. ಇವರು ತಮ್ಮ ತಂಡದೊಂದಿಗೆ ಮತ್ತು ಬೇರೆಯಾಗಿ ಆಂಧ್ರಪ್ರದೇಶದ ಹಲವು ಕಡೆ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಇವರು "ಸಾಯಿಬಾಬಾ" ನ ಏಕಪಾತ್ರಭಿನಯದಲ್ಲಿ ಸಿದ್ದಹಸ್ತರು. ಇವರ "ಸಾಯಿಬಾಬಾ" ಏಕಪಾತ್ರಾಭಿನಯಕ್ಕೆ 2006 ನೇ ಇಸವಿಯಲ್ಲಿ ಜಿಲ್ಲಾ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಶ್ರೀ.ಶ್ರೀಸೈಲಪು ಲಕ್ಷ್ಮಣರಾವ್ ರವರು ಸಮಾಜ ಸೇವಾ ಧುರೀಣರು ಕೂಡ ಹೌದು. ಹೆಚ್.ಐ.ವಿ.- ಎಡ್ಸ್ ಸೋಂಕು ರೋಗದ ಬಗ್ಗೆ "ಕನುವಿಪ್ಪು" ಎಂಬ (ಅಂದರೆ ಕಣ್ಣು ತೆರೆದು ನೋಡು ಎಂಬ ಅರ್ಥ) ನಾಟಕವನ್ನು ಎಪಿ ಪೇಪರ್ ಮಿಲ್ಲ್ಸ್ ನ ಸಹಯೋಗದೊಂದಿಗೆ ಆಂಧ್ರಪ್ರದೇಶದಾದ್ಯಂತ ನೀಡಿ ಇದುವರೆಗೂ ಸುಮಾರು 45 ಪ್ರದರ್ಶನಗಳನ್ನು ನೀಡಿರುತ್ತಾರೆ.

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ.

ವಿಳಾಸ:
ಮನೆ ಸಂಖ್ಯೆ8-34/2,  ಪ್ಲಾಟ್ ಸಂಖ್ಯೆ.45, 
ರಾಮ ಸಾಯಿ ವಸತಿ ಸಮುಚ್ಚಯ, 
ಉಪ  ವಿದ್ಯುತ್ ಶಕ್ತಿ ಕೇಂದ್ರದ ಎದುರು, 
ಮಲ್ಲಯ್ಯಪೇಟೆ,ರಾಜಮಂಡ್ರಿ -533 105. ಆಂಧ್ರಪ್ರದೇಶ. 

ದೂರವಾಣಿ:
+91 98497 16072

ಈ ಮೇಲ್ ವಿಳಾಸ: 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment