ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ (ನೋಂದಣಿ), ನಂ.4 ಮತ್ತು 5, ಎಸ್.ಎಲ್.ಹೆಚ್.ನಿಲಯ, ಸಾಯಿ ಮಂದಿರ ರಸ್ತೆ, ಕಾವೇರಿ ಬಡಾವಣೆ, ಕಾಫಿ ಬೋರ್ಡ್ ಲೇಔಟ್ ಹತ್ತಿರ, ಹೆಚ್.ಎ.ಫಾರಂ ಅಂಚೆ, ಬೆಂಗಳೂರು-560 024. ಕರ್ನಾಟಕ- ಕೃಪೆ: ಸಾಯಿಅಮೃತಧಾರಾ.ಕಾಂ
ಈ ಸಾಯಿ ಮಂದಿರವು ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿರುವ ಕಾವೇರಿ ಬಡಾವಣೆಯಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು
- ಈ ಮಂದಿರದ ಭೂಮಿಪೂಜೆಯನ್ನು ಮೇ 2001 ರಲ್ಲಿ ಮಾಡಲಾಯಿತು.
- ಈ ಮಂದಿರದ ಪ್ರತಿಷ್ಟಾಪನೆಯನ್ನು ಸಾಯಿಭಕ್ತರು ಮತ್ತು ಟ್ರಸ್ಟ್ ನ ಸದಸ್ಯರ ಸಹಯೋಗದೊಂದಿಗೆ 9 ಮತ್ತು 10ನೇ ಮಾರ್ಚ್ 2002 ರಂದು ನೆರವೇರಿಸಲಾಯಿತು.
- ಮಂದಿರದ ಹೊರ ಆವರಣದಲ್ಲಿರುವ ತುಳಸಿ ಬೃಂದಾವನವನ್ನು 8ನೇ ಮಾರ್ಚ್ 2002 ರಂದು ಸ್ಥಾಪಿಸಲಾಯಿತು.
- ಗುರುಸ್ಥಾನವನ್ನು ಜುಲೈ 2002 ರಲ್ಲಿ ಪ್ರಾರಂಭಿಸಲಾಯಿತು. ಸರ್ವಧರ್ಮ ಸಮನ್ವಯವನ್ನು ಸೂಚಿಸುವ ಎಲ್ಲಾ ಧರ್ಮಗಳ ಚಿನ್ಹೆಗಳನ್ನು ಒಳಗೊಂಡಿರುವ ಅಮೃತ ಶಿಲೆಯ ಪವಿತ್ರ ಪಾದುಕೆಗಳನ್ನು,ದತ್ತಾತ್ರೇಯ ಮತ್ತು ಸಾಯಿಬಾಬಾರವರ ಪುಟ್ಟ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಪವಿತ್ರ ಬೇವಿನ ಮರವನ್ನು ಕೂಡ ಇಲ್ಲಿ ಸಾಯಿಭಕ್ತರು ನೋಡಬಹುದು.
- ಅಮೃತ ಶಿಲೆಯಲ್ಲಿ ಮಾಡಿರುವ ಕಮಲದ ಎಲೆಯ ಮೇಲೆ ನಿಂತಿರುವ ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿಬಾಬಾರವರ ಸುಂದರ ವಿಗ್ರಹವನ್ನು 14ನೇ ಜೂನ್ 2007 ರಂದು ಪ್ರತಿಷ್ಟಾಪಿಸಲಾಯಿತು.
- ಗಣೇಶ ಮತ್ತು ಸುಬ್ರಮಣ್ಯ ದೇವರುಗಳು ಪರಸ್ಪರ ಆಲಿಂಗನ ಮಾಡಿಕೊಂಡಿರುವಂತೆ ಕಾಣುವ ಸುಂದರ ಕಪ್ಪು ಶಿಲೆಯ ವಿಗ್ರಹವನ್ನು 15ನೇ ಸೆಪ್ಟೆಂಬರ್ 2010 ರಂದು ಪ್ರತಿಷ್ಟಾಪಿಸಲಾಯಿತು.
ಮಂದಿರದ ಕಾರ್ಯಚಟುವಟಿಕೆಗಳು:
ಮಂದಿರದ ಪೂಜಾ ಸಮಯ:
ಗುರುವಾರ: ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿ. ರಾತ್ರಿ 7:30 ಕ್ಕೆ ಪೂಜೆ ಮತ್ತು ಶೇಜಾರತಿ.
ಭಾನುವಾರ : ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿ. ರಾತ್ರಿ 8:00 ಕ್ಕೆ ಪೂಜೆ ಮತ್ತು ಭಜನೆ ಕಾರ್ಯಕ್ರಮ.
ವಿಶೇಷ ಉತ್ಸವದ ದಿನಗಳು:
- ಮಕರ ಸಂಕ್ರಾಂತಿ
- ಆದಿಶೇಷ ದರ್ಶನ 3ನೇ ಫೆಬ್ರವರಿಯಂದು.
- ಮಹಾಶಿವರಾತ್ರಿ.
- ಮಂದಿರ ಪ್ರತಿಷ್ಠಾಪನಾ ದಿವಸ ಪ್ರತಿ ವರ್ಷ 9 ಮತ್ತು 10ನೇ ಮಾರ್ಚ್.
- ಯುಗಾದಿ.
- ಶ್ರೀರಾಮನವಮಿ.
- ನರಸಿಂಹ ಜಯಂತಿ.
- ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷ 12, 13 ಮತ್ತು 14ನೇ ಜೂನ್.
- ಗುರುಪೂರ್ಣಿಮೆ.
- ಗೋಕುಲಾಷ್ಟಮಿ.
- ಗಣೇಶ ಚತುರ್ಥಿ.
- ವಿಜಯದಶಮಿ.
- ದೀಪಾವಳಿ.
- ಸುಬ್ರಮಣ್ಯ ಷಷ್ಠಿ.
- ಹನುಮಾನ್ ಜಯಂತಿ.
- ದತ್ತಾತ್ರೇಯ ಜಯಂತಿ.
- ವೈಕುಂಠ ಏಕಾದಶಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಕಾವೇರಿ ಬಡಾವಣೆ, ಕಾಫಿ ಬೋರ್ಡ್ ಲೇಔಟ್ ಹತ್ತಿರ.
ವಿಳಾಸ:
ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ (ನೋಂದಣಿ),
ನಂ.4 ಮತ್ತು 5, ಎಸ್.ಎಲ್.ಹೆಚ್.ನಿಲಯ, ಸಾಯಿ ಮಂದಿರ ರಸ್ತೆ, ಕಾವೇರಿ ಬಡಾವಣೆ,
ಕಾಫಿ ಬೋರ್ಡ್ ಲೇಔಟ್ ಹತ್ತಿರ, ಹೆಚ್.ಎ.ಫಾರಂ ಅಂಚೆ,
ಬೆಂಗಳೂರು-560 024. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಹೆಚ್.ಪಿ.ರಾಮದಾಸ್.
ದೂರವಾಣಿ ಸಂಖ್ಯೆ:
+91 80 2233 0963 / +91 99001 72963
ಈ ಮೇಲ್ ವಿಳಾಸ:
ಮಾರ್ಗಸೂಚಿ:
ಮೆಜಿಸ್ಟಿಕ್ ನಿಂದ – ಯಲಹಂಕ, ಜಕ್ಕುರ್ ಗೆ ತೆರಳುವ ಎಲ್ಲಾ ಬಸ್ ಗಳು - ಹೆಬ್ಬಾಳ್ ಡೈರಿ ಗೇಟ್ ಬಸ್ ನಿಲ್ದಾಣದ ಬಳಿ ಇಳಿಯುವುದು, ಎಸ್ಟೀಮ್ ಮಾಲ್ ಎದುರು ಸುಮಾರು ಎರಡು ಕಿಲೋಮೀಟರ್ ಒಳಗಡೆ ನಡೆಯಬೇಕು.
- 287 C – ಕೆಂಪಾಪುರ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು.
- 287 G – ಕಾಫಿ ಬೋರ್ಡ್ ಲೇಔಟ್ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು ಅರ್ಧ ಕಿಲೋಮೀಟರ್ ಒಳಗಡೆ ನಡೆಯಬೇಕು.
ವಿಜಯನಗರದಿಂದ - 287 S – ಭುವನೆಶ್ವರಿನಗರ ದೇವಸ್ಥಾನ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು.
ಮಾರ್ಕೆಟ್ ನಿಂದ – 287 H – ಕೆಂಪಾಪುರ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment