ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಮತ್ತು ಸತ್ಸಂಗ ಕೇಂದ್ರ - ಶ್ರೀ ಸಾಯಿಪಾದಾನಂದ ಸತ್ಸಂಗ, ನಂ.29/1, ಭಗವತಿ ನಿಲಯ, 6ನೇ ಮುಖ್ಯರಸ್ತೆ, ( 8ನೇ ಮತ್ತು 9ನೇ ಅಡ್ಡರಸ್ತೆ ನಡುವೆ), ಎನ್.ಆರ್.ಕಾಲೋನಿ, ಬೆಂಗಳೂರು-560 019. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ಸಾಯಿಪಾದಾನಂದ ಸತ್ಸಂಗ ಕೇಂದ್ರವನ್ನು ಸಾಯಿ ಸೇವಕ ಶ್ರೀ.ಪುಟ್ಟಣ್ಣನವರು 1999ನೇ ಇಸವಿಯಲ್ಲಿ ಪ್ರಾರಂಭಿಸಿದರು. ಶಿರಡಿ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಎಲ್ಲೆಡೆ ಪ್ರಚಾರ ಪಡಿಸುವುದೇ ಶ್ರೀ ಸಾಯಿಪಾದಾನಂದ ಸತ್ಸಂಗದ ಉದ್ದೇಶವಾಗಿರುತ್ತದೆ.
ಶ್ರೀ ಸಾಯಿಪಾದಾನಂದ ಸತ್ಸಂಗದ ಕಾರ್ಯಚಟುವಟಿಕೆಗಳು ಈ ಕೆಳಕಂಡಂತೆ ಇರುತ್ತವೆ.
ಪ್ರತಿ ಗುರುವಾರ ಶ್ರೀ.ಸಾಯಿ ಸಚ್ಚರಿತೆಯ ಸಾಮುಹಿಕ ಪಾರಾಯಣ (ಕಾಕಡಾ ಆರತಿ ನಂತರ ಬೆಳಿಗ್ಗೆ 7:30 ರಿಂದ ಸಂಜೆ 5:30 ರ ವರೆಗೆ. ಇದರಲ್ಲಿ ಎಲ್ಲರೂ ಬಂದು, ತಮ್ಮ ಕಾಲಾವಕಾಶಕ್ಕೆ ತಕ್ಕಂತೆ ಕನ್ನಡ, ತೆಲುಗು, ತಮಿಳು, ಇಂಗ್ಲೀಷ್ ಭಾಷೆಗಳಲ್ಲಿ ಪಾರಾಯಣ ಮಾಡಬಹುದು. ಸಂಜೆ ೬ ರಿಂದ ೮:೩೦ ರ ವರೆಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಆರತಿ ಮತ್ತು ಪ್ರಸಾದ ವಿನಿಯೋಗ).
ಭಕ್ತರ ಮನೆಗಳಲ್ಲಿ ಶ್ರೀ ಸಾಯಿ ಸಹಸ್ರನಾಮ, ಭಸ್ಮಾರ್ಚನೆ, ಭಜನೆ-ಸತ್ಸಂಗವನ್ನು ಮಾಡುವುದು.
ಆಗಾಗ್ಗೆ ಶ್ರೀ ವಿಷ್ಣು ಸಹಸ್ರನಾಮ, ಭಗವದ್ಗೀತೆ, ಶ್ರೀ ಲಲಿತಾ ಸಹಸ್ರನಾಮ ಹೋಮಗಳನ್ನು ಮಾಡುವುದು.
ತಿಂಗಳಿಗೊಮ್ಮೆ ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಕುಷ್ಟರೋಗಿಗಳಿಗೆ ಶ್ರೀ ಸಾಯಿಪ್ರಸಾದ ವಿತರಣೆ.
ಪ್ರತಿ ತಿಂಗಳೂ ಪೌರ್ಣಮಿಯ ದಿನ ಸಂಜೆ ಶ್ರೀ ಸತ್ಯನಾರಾಯಣ ಪೂಜೆ.
ಭಕ್ತರಿಂದ ಹಣ ಸಹಾಯ ಬಂದಲ್ಲಿ ಶ್ರೀ.ಸಾಯಿಬಾಬಾ, ಶ್ರೀ.ರಾಧಾಕೃಷ್ಣ ಸ್ವಾಮೀಜಿ, ಶ್ರೀ.ನರಸಿಂಹ ಸ್ವಾಮೀಜಿಯ ಜೀವನ ಚರಿತ್ರೆಗಳನ್ನು ಮತ್ತು ಶ್ರೀ.ಸಾಯಿ ಸತ್ಕಥಾಮೃತವನ್ನು ತಿಳಿಗನ್ನಡದಲ್ಲಿ ಮುದ್ರಿಸಿ ಉಚಿತವಾಗಿ ಹಂಚುವುದು. ಇದುವರೆವಿಗೆ ಶ್ರೀ.ಸಾಯಿಪಾದಾನಂದ ಸತ್ಸಂಗವು ಶ್ರೀ.ಸಾಯಿಬಾಬಾ, ಶ್ರೀ.ರಾಧಾಕೃಷ್ಣ ಸ್ವಾಮೀಜಿ, ಶ್ರೀ.ನರಸಿಂಹ ಸ್ವಾಮೀಜಿಯ ಜೀವನ ಚರಿತ್ರೆಗಳನ್ನು ಮತ್ತು ಶ್ರೀ.ಸಾಯಿ ಸತ್ಕಥಾಮೃತವನ್ನು ಮುದ್ರಿಸಿ ಉಚಿತವಾಗಿ ಹಂಚಿದೆ.
ಆಗಾಗೆ ಪುಣ್ಯಕ್ಷೇತ್ರಗಳಿಗೆ ಹೋಗಿ, ಸತ್ಸಂಗವನ್ನು ಏರ್ಪಡಿಸುವುದು.
ವಾರಕ್ಕೊಮ್ಮೆ ಭಗವದ್ಗೀತೆಯ ಸಾಮುಹಿಕ 18 ಅಧ್ಯಾಯಗಳ ಪಾರಾಯಣ ಮಾಡುವುದು.
ಒಂದು ತಿಂಗಳಿಗೊಮ್ಮೆ ಶ್ರೀ.ಸಾಯಿಸತ್ಯನಾರಾಯಣ ಪೂಜೆಯನ್ನು ಏರ್ಪಡಿಸುವುದು.
ಪ್ರತಿ ಶನಿವಾರ ಸಂಜೆ 6 ರಿಂದ 8:30 ರ ವರೆಗೆ ಭಜನೆ ಕಾರ್ಯಕ್ರಮ ಏರ್ಪಡಿಸುವುದು.
ಶ್ರೀ ಸಾಯಿಪಾದಾನಂದ ಸತ್ಸಂಗದ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ
ಸಂಪರ್ಕದ ವಿವರಗಳು:
ಸ್ಥಳ:
ದತ್ತಾತ್ರೇಯ ಮಂದಿರದ ಹತ್ತಿರ, ಎನ್.ಆರ್.ಕಾಲೋನಿ.
ವಿಳಾಸ:
ಶ್ರೀ ಸಾಯಿಪಾದಾನಂದ ಸತ್ಸಂಗ,
ನಂ.29/1, ಭಗವತಿ ನಿಲಯ, 6ನೇ ಮುಖ್ಯರಸ್ತೆ,
( 8ನೇ ಮತ್ತು 9ನೇ ಅಡ್ಡರಸ್ತೆ ನಡುವೆ), ಎನ್.ಆರ್.ಕಾಲೋನಿ,
ಬೆಂಗಳೂರು-560 019. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಪುಟ್ಟಣ್ಣ.
ದೂರವಾಣಿ ಸಂಖ್ಯೆ:
+91 80 2677 0695
ಈ ಮೇಲ್ ವಿಳಾಸ:
saipadananda@gmail.com
ಮಾರ್ಗಸೂಚಿ:
ಎನ್.ಆರ್.ಕಾಲೋನಿ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಸತ್ಸಂಗದ ಸ್ಥಳ ಸಿಗುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment