ಶ್ರೀ ಸಾಯಿನಾಥ ಆಸ್ಪತ್ರೆಯು ಶ್ರೀ ಸಾಯಿಬಾಬಾ ಸಂಸ್ಥಾನ ಹಾಗೂ ಶಿರಡಿಯ ಲಯನ್ಸ್ ಕ್ಲಬ್ ನ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ 244 ರೋಗಿಗಳು ಪ್ರಯೋಜನ ಪಡೆಯುವುದರೊಂದಿಗೆ ಅತ್ಯಂತ ಯಶಸ್ವಿಯಾಯಿತು ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ಧಿಗಾರರಿಗೆ ತಿಳಿಸಿದರು.
ಶ್ರೀ ಸಾಯಿನಾಥ ಆಸ್ಪತ್ರೆಯು ಇದೇ ತಿಂಗಳ 4ನೇ ಜೂನ್ 2014 ರಿಂದ 6ನೇ ಜೂನ್ 2014 ರವರೆಗೆ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಿತ್ತು. ಶಿರಡಿ ಸುತ್ತಮುತ್ತಲಿನ ಹಳ್ಳಿಗಳ ಒಟ್ಟು 244 ಅರ್ಹ ಹಾಗೂ ಬಡ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಅವರಲ್ಲಿ ಅಗತ್ಯವಿದ್ದ 108 ಬಡ ರೋಗಿಗಳಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಶ್ರೀ ಸಾಯಿನಾಥ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸುನೀಲ್ ಸೊಂಟಕ್ಕೆಯವರು ಮಾಡಿದರು. ಅಲ್ಲದೇ ನಂತರ ನೆಡೆದ ಸಮಾರಂಭವೊಂದರಲ್ಲಿ ಅಗತ್ಯವಿರುವ ರೋಗಿಗಳಿಗೆ ಶಿರಡಿಯ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಉಚಿತ ಕನ್ನಡಕದ ವಿತರಣೆಯನ್ನು ಮಾಡಲಾಯಿತು. ಶಿರಡಿ ಲಯನ್ಸ್ ಕ್ಲಬ್ ನ ಸದಸ್ಯರುಗಳಾದ ಡಾ.ಏಕನಾಥ್ ಗೋಂಡ್ಕರ್, ಶ್ರೀ.ವಸಂತ್ ಕದಂ ಹಾಗೂ ಶ್ರೀ.ವಿಶಾಲ್ ತಿಡಕೆಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶ್ರೀ ಸಾಯಿನಾಥ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ಡಾ.ಸಂಜಯ್ ಪಟಾರೆ, ಡಾ.ಸುನೀಲ್ ಸೊಂಟಕ್ಕೆ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಹಗಲು ರಾತ್ರಿ ಈ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಪಟ್ಟಿದ್ದರಿಂದ ಶಿಬಿರವು ಅತ್ಯಂತ ಯಶಸ್ವಿಯಾಗಿ ಸುಸಂಪನ್ನಗೊಂಡಿತು ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment