ಡಾ.ರಬೀಂದ್ರ ನಾಥ್ ಕಾಕಾರ್ಯರವರು ಓರ್ವ ಬಹುಮುಖ ಪ್ರತಿಭೆಯುಳ್ಳ ಸಾಯಿ ಬಂಧು ಹಾಗೂ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರೊಬ್ಬ ಸರ್ವಶ್ರೇಷ್ಠ ಬರಹಗಾರ, ಅನುವಾದಕ ಹಾಗೂ ಸಾಯಿ ಭಜನ ಗಾಯಕರು. ಅಷ್ಟೇ ಅಲ್ಲದೇ ಇವರು ನವದೆಹಲಿಯ ರೋಹಿಣಿ ಸಾಯಿಬಾಬಾ ಮಂದಿರದ ಸಂಸ್ಥಾಪಕ ಅಧ್ಯಕ್ಷರೂ ಕೂಡ ಆಗಿದ್ದಾರೆ.
ಕಾಕಾರ್ಯರವರು 19ನೇ ಮಾರ್ಚ್ 1967 ರಂದು ಶ್ರೀಮತಿ.ಸುಧಾರ್ಣಾ ಕಾಕಾರ್ಯರವರ ಪುತ್ರನಾಗಿ ನವದೆಹಲಿಯಲ್ಲಿ ಜನ್ಮ ತಾಳಿದರು. ಪ್ರತಿಭಾವಂತ ವಿಜ್ಞಾನಿಯಾದ ಇವರು ದೆಹಲಿ ವಿಶ್ವವಿದ್ಯಾಲಯದಿಂದ ಎಂ.ಎಸ್. ಸಿ (ಭೌತಶಾಸ್ತ್ರ), ಎಂ.ಎಡ್ ಹಾಗೂ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮಲ್ಲಿರುವ ಎಲ್ಲಾ ಪ್ರತಿಭೆ, ಶಕ್ತಿ ಹಾಗೂ ಸಾಧನೆಗಳನ್ನು ಕ್ರೋಢೀಕರಿಸಿ ಸಾಯಿಬಾಬಾರವರ ದಿವ್ಯತೆಯನ್ನು ಹಾಗೂ ವೈಭವವನ್ನು ಹೊಸ ಭಕ್ತರಿಗೆ ತಿಳಿಸುವ ದೃಷ್ಟಿಯಿಂದ ಬೋಧನೆಯನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿದರು. ಇವರ ಮನೆಯಲ್ಲಿದ್ದ ಉತ್ತಮವಾದ ವಾತಾವರಣದ ಕಾರಣದಿಂದ ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿ ಇವರಲ್ಲಿ ಆಳವಾಗಿ ಬೇರೂರಿತ್ತು. ಅಲ್ಲದೇ ಅದರೊಂದಿಗೆ ಸಾಯಿಬಾಬಾರವರ ಆಶೀರ್ವಾದವೂ ಮೇಳೈಸಿದ್ದರಿಂದ ಇವರು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕೆಲಸಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಇವರು ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರ ಜೊತೆಗೆ ಶಿರಡಿ ಸಾಯಿಬಾಬಾರವರ ಜೀವನ, ತತ್ವ ಹಾಗೂ ಲೀಲೆಗಳನ್ನು ಕುರಿತ ಸಾಹಿತ್ಯಗಳ ಸಂಕಲನ, ಅನುವಾದ ಹಾಗೂ ರಚನೆಯ ಕಾರ್ಯಗಳಲ್ಲಿ ತಮ್ಮನ್ನು ತಾವು ಅವಿರತವಾಗಿ ತೊಡಗಿಸಿಕೊಂಡರು
ಇವರು ಇಲ್ಲಿಯವರೆಗೂ ಶಿರಡಿ ಸಾಯಿಬಾಬಾರವರ ಬಗ್ಗೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ 20 ಪುಸ್ತಕಗಳನ್ನು ರಚಿಸಿದ್ದು ಅವುಗಳನ್ನು ನವದೆಹಲಿಯ ಪ್ರತಿಷ್ಟಿತ ಸ್ಟರ್ಲಿಂಗ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ನವರು ಬಿಡುಗಡೆ ಮಾಡಿರುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: 1008 Names of Shirdi Sai Baba, Shri Sai Baba the Saviour, Sai Hari Katha, Shirdi within & Beyond, Shirdi Sai Baba Ke Divya Leelayein, Shirdi Sampoorna Darshan, Shri Sai Baba Ke Param Bhakt, Sai Bhaktanubhav, Shri Sai Baba Ke Ananya Bhakt, Sai Ka Sandesha, Muktidata Shri Sai Baba, Shri Narasimha Swami. ಇವರ ಹತ್ತೊಂಬತ್ತನೆಯ ಕೃತಿಯಾದ Shirdi within & Beyond ಗೆ ಇವರು ತಮ್ಮ ಸರ್ವಸ್ವವನ್ನೂ ಧಾರೆಯೆರೆದು ಶಿರಡಿಯ ದಿವ್ಯತ್ಮರಾದ ಶ್ರೀ ಸಾಯಿ ಮಹಾರಾಜರ ಹಾಗೂ ಶಿರಡಿಯ ವಿಷಯಗಳನ್ನು ಚಿತ್ರ-ಲೇಖನ ರೂಪದಲ್ಲಿ ಬಹಳ ಸುಂದರವಾಗಿ ಹೊರತಂದಿದ್ದಾರೆ.
ಇವರು ಶಿರಡಿ ಸಾಯಿಬಾಬಾರವರ ಬಗ್ಗೆ ಬರೆದ ಹಲವಾರು ಲೇಖನಗಳು ಸಾಯಿ ಸುಧಾ, ಸಾಯಿಪಾದಾನಂದ, ಸಾಯಿ ಸುಮಿರನ್ ಟೈಮ್ಸ್ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರತಿಭಾನ್ವಿತ ಗಾಯಕರಾದ ಡಾ.ಕಾಕಾರ್ಯರವರು ಹಲವಾರು ಸಿಡಿ ಹಾಗೂ ಕ್ಯಾಸೆಟ್ ಗಳನ್ನು ಕೂಡ ಹೊರತಂದಿದ್ದಾರೆ. ಅವುಗಳಲ್ಲಿ ನವದೆಹಲಿಯ ರೋಹಿಣಿ ಸಾಯಿಬಾಬಾ ಮಂದಿರದ ವತಿಯಿಂದ ಹೊರತರಲಾದ "Sai Gunagan" ಬಹಳ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಇವರು ಪ್ರತಿ ಗುರುವಾರದಂದು ತಮ್ಮ ಸುಮಧುರ ಧ್ವನಿಯಲ್ಲಿ ತಪ್ಪದೇ ನವದೆಹಲಿಯ ರೋಹಿಣಿ ಸಾಯಿಬಾಬಾ ಮಂದಿರದಲ್ಲಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.
ಇವರು ತಮ್ಮ ಇಡೀ ಜೀವನವನ್ನು ಸಾಯಿಬಾಬಾರವರ ಸೇವೆಗಾಗಿ ಮೀಸಲಾಗಿಟ್ಟಿದ್ದಾರೆ. ಅಲ್ಲದೇ ತಮ್ಮ ಜೀವನದಲ್ಲಿ ತಾವು ಭೇಟಿ ಮಾಡುವ ಪ್ರತಿಯೊಬ್ಬ ಸಾಯಿ ಭಕ್ತರ ಜೀವನದಲ್ಲೂ ಏನಾದರೂ ಒಂದು ರೀತಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತರಬೇಕೆಂಬ ಹೆಬ್ಬಯಕೆಯನ್ನು ಇವರು ಹೊಂದಿದ್ದಾರೆ.
ಡಾ.ಕಾಕಾರ್ಯರವರು ಶಿರಡಿ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಸಾಹಿತ್ಯ ರಚನೆ ಹಾಗೂ ಸಾಯಿ ಭಜನೆ ಸಂಧ್ಯಾಗಳ ಮುಖಾಂತರವಾಗಿ ನಿರಂತರವಾಗಿ ಹರಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಡಾ.ಕಾಕಾರ್ಯರವರು ಶಿರಡಿ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಸಾಹಿತ್ಯ ರಚನೆ ಹಾಗೂ ಸಾಯಿ ಭಜನೆ ಸಂಧ್ಯಾಗಳ ಮುಖಾಂತರವಾಗಿ ನಿರಂತರವಾಗಿ ಹರಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಇವರು ಶ್ರೀಮತಿ.ನೀಲಂ ಕಾಕಾರ್ಯರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀ.ರೌನಕ್ ಕಾಕಾರ್ಯ ಹಾಗೂ ಶ್ರೀ.ರಾಘವ ಕಾಕಾರ್ಯ ಎಂಬ ಇಬ್ಬರು ಪುತ್ರರಿದ್ದಾರೆ. ಪ್ರಸ್ತುತ ಇವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನವದೆಹಲಿಯ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಡಾ.ರಬೀಂದ್ರ ನಾಥ್ ಕಾಕಾರ್ಯರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಡಾ.ರಬೀಂದ್ರ ನಾಥ್ ಕಾಕಾರ್ಯ
ನಂ.236, ಜಹಾಜ್ ಅಪಾರ್ಟ್ ಮೆಂಟ್ಸ್,
ಪ್ಲಾಟ್ ನಂ.6, ಜಿ-17 ಏರಿಯಾ,
ರೋಹಟಕ್ ರಸ್ತೆ,
ನವದೆಹಲಿ–110 087,
ಭಾರತ.
ದೂರವಾಣಿ ಸಂಖ್ಯೆಗಳು:
+91 95602 11156/+91 11 2528 3329
+91 95602 11156/+91 11 2528 3329
ಇ-ಮೇಲ್ ವಿಳಾಸ:
rnkakarya@gmail.com
(ಆಧಾರ: ಡಾ.ರಬೀಂದ್ರ ನಾಥ್ ಕಾಕಾರ್ಯರವರೊಂದಿಗೆ 3ನೇ ಜೂನ್ 2014 ರಂದು ನಡೆಸಿದ ನೇರ ಸಂದರ್ಶನ)
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment