ದೇವಾಲಯದ ವಿಶೇಷತೆಗಳು:
ಶ್ರೀ ಶಿರಡಿ ಸಾಯಿಬಾಬಾರವರ ಈ ಸುಪ್ರಸಿದ್ಧ ಮಂದಿರವು ಶಿರಡಿ ಸಾಯಿಬಾಬಾರವರ ಪ್ರಕಟ ಭೂಮಿ ಎಂದೇ ಪ್ರಸಿದ್ಧವಾದ ಧೂಪಖೇಡಾ ಗ್ರಾಮದಲ್ಲಿದೆ. ಧೂಪಖೇಡಾವು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಠಾಣ್ ತಾಲೂಕಿನಲ್ಲಿದೆ. ಶ್ರೀ ಶಿರಡಿ ಸಾಯಿಬಾಬಾರವರು ಈ ಗ್ರಾಮದಲ್ಲಿ ಸುಮಾರು 9 ವರ್ಷಗಳ ಕಾಲ ಜೀವಿಸಿದ್ದರಿಂದ ಸಾಯಿ ಭಕ್ತರಿಗೆ ಇದೊಂದು ಪವಿತ್ರ ಸ್ಥಳವಾಗಿರುತ್ತದೆ.
ಈ ಮಂದಿರದ ಭೂಮಿ ಪೂಜೆಯನ್ನು 1997 ನೇ ಇಸವಿಯಲ್ಲಿ ನೆರವೇರಿಸಲಾಯಿತು.
ಈ ಮಂದಿರದ ಉದ್ಘಾಟನೆಯನ್ನು 1998ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಖ್ಯಾತ ಸಾಯಿ ಬಂಧುಗಳಾದ ಚೆನ್ನೈನ ಶ್ರೀ.ಸಾಯಿ ರವಿಚಂದ್ರನ್ ಹಾಗೂ ಬೆಂಗಳೂರಿನ ಶ್ರೀ.ವಿ.ಎಸ್. ಕುಬೇರ್ ರವರು ನೆರವೇರಿಸಿದರು.
ಈ ಮಂದಿರವನ್ನು ಮಂದಿರದ ಟ್ರಸ್ಟ್ ನ 10000 ಚದರ ಅಡಿ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ ಹಾಗೂ ವಿಗ್ರಹದ ಎದುರುಗಡೆ ಇರುವ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ.
ಶ್ರೀ ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಹಾಗೂ ವಿಶ್ರಮಿಸುತ್ತಿದ್ದ ಪವಿತ್ರ ಬೇವಿನ ಮರ ಈ ಮಂದಿರದ ಆವರಣದಲ್ಲಿದೆ. ಈ ಬೇವಿನ ಮರದ ಎಲೆಗಳು ಶಿರಡಿಯ ಗುರುಸ್ಥಾನದಲ್ಲಿರುವ ಬೇವಿನ ಮರದ ಎಲೆಗಳಂತೆಯೇ ಸಿಹಿಯಾಗಿವೆ.
ಮೊದಲು ಬೇವಿನ ಮರವಿರುವ ಸ್ಥಳದಲ್ಲಿ ಸ್ಥಳೀಯ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಒಂದು ಪುಟ್ಟ ಮಂದಿರವನ್ನು ನಿರ್ಮಾಣ ಮಾಡಿದ್ದರು. ನಂತರ ಖ್ಯಾತ ಸಾಯಿ ಭಕ್ತರಾದ ಚೆನ್ನೈನ ಶ್ರೀ.ಕೆ.ವಿ.ರಮಣಿಯವರ ಸಹಾಯದಿಂದ ಈ ಮಂದಿರವನ್ನು ಪುನರ್ ನಿರ್ಮಾಣ ಮಾಡಲಾಯಿತು. ಪ್ರತಿ ಗುರುವಾರದಂದು ಈ ಮಂದಿರಕ್ಕೆ ಸಾಯಿ ಭಕ್ತ ಸಾಗರವೇ ಹರಿದು ಬರುತ್ತದೆ. ಆ ದಿನದಂದು ಮಂದಿರಕ್ಕೆ ಬರುವ ಎಲ್ಲಾ ಭಕ್ತರಿಗೂ ಮಹಾಪ್ರಸಾದ ಭೋಜನವನ್ನು ನೀಡಲಾಗುತ್ತದೆ.
ಮಂದಿರದ ನಿತ್ಯ ಕಾರ್ಯಕ್ರಮಗಳು:
ಮಂದಿರದ ಸಮಯ:
ಬೆಳಿಗ್ಗೆ 6:00 ರಿಂದ ರಾತ್ರಿ 9:00 ರವರೆಗೆ.
ಆರತಿ ಸಮಯ:
ಕಾಕಡಾ ಆರತಿ : 6:00
ಮಧ್ಯಾನ್ಹ ಆರತಿ : 12:00
ಧೂಪಾರತಿ : 6:00
ಧೂಪಾರತಿ : 6:00
ಶೇಜಾರತಿ : 9:00
ವಿಶೇಷ ಉತ್ಸವದ ದಿನಗಳು:
1.ಗುರು ಪೂರ್ಣಿಮಾ
2.ಶ್ರೀ ರಾಮನವಮಿ
3.ವಿಜಯದಶಮಿ
ದೇವಾಲಯದ ಸಂಪರ್ಕದ ವಿವರಗಳು:
ಶ್ರೀ ಸಾಯಿ ಭಕ್ತ (ವಿಶ್ವಸ್ಥ) ಮಂಡಲ,
ಶ್ರೀ ಸಾಯಿಬಾಬಾ ಪ್ರಕಟ ಭೂಮಿ,
ದಿನ್ನಾಪುರ್ ರಸ್ತೆ,
ಧೂಪಖೇಡಾ,
ಪೈಠಾಣ್ ತಾಲೂಕು,
ಔರಂಗಾಬಾದ್ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಪೈಠಾಣ್ ತಾಲೂಕು,
ಔರಂಗಾಬಾದ್ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು :ಶ್ರೀ.ಮೋಹನಲಾಲ್ ಲಾಹುಜಿ ವಾಕ್ಚುರೆ/ಶ್ರೀ.ಪಾಂಡುರಂಗ ಕೇಶವರಾವ್ ವಾಕ್ಚುರೆ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +91-98223 34799
ಅಂತರ್ಜಾಲ ತಾಣ: http://saibaba-dhupkheda.in/
ಸ್ಥಳ: ಮಂದಿರವು ಔರಂಗಾಬಾದ್ ನಿಂದ ಪೈಠಾಣಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ರಾಜ್ಯ ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ಕ್ರಮಿಸಿದರೆ ಚಿಟೆಗಾವ್ ಸಿಗುತ್ತದೆ. ಅದೇ ರಸ್ತೆಯಲ್ಲಿ ಸುಮಾರು 6 ಕಿಲೋಮೀಟರ್ ಕ್ರಮಿಸಿದರೆ ಬಿಡಕಿನಗಾವ್ ಸಿಗುತ್ತದೆ. ಮತ್ತೆ 6 ಕಿಲೋಮೀಟರ್ ಕ್ರಮಿಸಿದರೆ ಕೌಡಗಾವ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿದರೆ ಒಂದು ಕಮಾನು ಸಿಗುತ್ತದೆ (ಅದರ ಮೇಲೆ ಬಾಬಾರವರ ಭಾವಚಿತ್ರ ಹಾಗೂ ಧೂಪಖೇಡಾ ಮಂದಿರದ ಹೆಸರು ಬರೆಯಲಾಗಿದೆ). ಅದೇ ದಾರಿಯಲ್ಲಿ ಮುಂದೆ ಸುಮಾರು 3 ಕಿಲೋಮೀಟರ್ ಕ್ರಮಿಸಿದರೆ ಶ್ರೀ ಸಾಯಿಬಾಬಾ ವಿಶ್ವಸ್ಥ ಮಂದಿರ ಸಿಗುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment