ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ ನಡೆಸುತ್ತಿರುವ ಶ್ರೀ ಸಾಯಿಬಾಬಾ ಪದವಿ ಪೂರ್ವ ಕಾಲೇಜು ಮಹಾರಾಷ್ಟ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇತ್ತೀಚೆಗಷ್ಟೇ ನಡೆಸಿದ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ 98% ಫಲಿತಾಂಶ ಗಳಿಸಿದೆ. ಅಂತಿಮ ಪರೀಕ್ಷೆಯನ್ನು 500 ವಿದ್ಯಾರ್ಥಿಗಳು ಬರೆದಿದ್ದು ಅದರಲ್ಲಿ 488 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಹಾಗಾಗಿ, ಕಳೆದ ವರ್ಷದಂತೆ ಈ ಸಲವೂ ಶ್ರೀ ಸಾಯಿಬಾಬಾ ಪದವಿ ಪೂರ್ವ ಕಾಲೇಜು ತನ್ನ ಸಂಸ್ಥೆಯಿಂದ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವಲ್ಲಿ ಯಶಸ್ವಿಯಾಗಿದೆ.
ಕುಮಾರಿ.ಕಲ್ಯಾಣಿ ಜ್ಯೋತಿಲಾಲ್ ಜಾಧವ್ ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯುವ ಮುಖಾಂತರ ಗಣಿತ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮಹಾರಾಷ್ಟ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್ 2014 ರಲ್ಲಿ ಹನ್ನೆರಡನೇ ತರಗತಿಗಳಿಗೆ ಅಂತಿಮ ಪರೀಕ್ಷೆಯನ್ನು ಆಯೋಜಿಸಿತ್ತು. ಶ್ರೀ ಸಾಯಿಬಾಬಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 157 ವಿದ್ಯಾರ್ಥಿಗಳು, ಕಲಾ ವಿಭಾಗದ 163 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ 178 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ವಿಜ್ಞಾನ ವಿಭಾಗದ ಕುಮಾರಿ.ಕಲ್ಯಾಣಿ ಜ್ಯೋತಿಲಾಲ್ ಜಾಧವ್ 85.69%, ಕಲಾ ವಿಭಾಗದ ಕುಮಾರಿ.ಕವಿತಾ ಭರತ್ ಮೋರೆ 86.46% ಮತ್ತು ವಾಣಿಜ್ಯ ವಿಭಾಗದ ಕುಮಾರಿ.ಗಾಯತ್ರಿ ಭಾಸ್ಕರ ಮಂಡಳೀಕ ಅವರು 86.31% ಪ್ರತಿಶತ ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಅಲ್ಲದೇ ವಿಜ್ಞಾನ ವಿಭಾಗದ ಕುಮಾರಿ. ಜಯಶ್ರೀ ಚಿಂತಾಮಣಿ ಪಾಂಡೆ ಮತ್ತು ಕುಮಾರಿ.ನೇಹಾ ದಿಲೀಪ್ ಚಲ್ಕೇ, ಕಲಾ ವಿಭಾಗದ ಕುಮಾರಿ.ಮಿಶ್ಬಾ ರಾಜು ಶೇಕ್ ಮತ್ತು ಕುಮಾರಿ.ನೇಹಾ ಮಹೇಶ್ ಸೋನಾವಾನೆ ಹಾಗೂ ವಾಣಿಜ್ಯ ವಿಭಾಗದ ಕುಮಾರಿ.ಶಿವಾನಿ ಸಂಜಯ್ ಮಂಜ್ರೆಕರ್ ಮತ್ತು ಕುಮಾರಿ.ಅಶ್ರಫಿ ಹೀನಾ ಅಹಮೆದಾಸನ್ 2ನೇ, 3ನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ, ಜಿಲ್ಲಾಧಿಕಾರಿಗಳಾದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಾವುಸಾಹೇಬ್ ಸಬಲೆ, ಶ್ರೀ.ಸುಭಾಶ್ ಗಾರ್ಕಲ್, ಶ್ರೀ.ಸೂರ್ಯಬಾನ್ ಗಮೆ, ಶ್ರೀ.ಉತ್ತಮ ರಾವ್ ಗೋಂದ್ಕರ್, ಹಾಗೂ ಶ್ರೀ.ದಿಲೀಪ್ ಉಗಳೆಯವರುಗಳು ಯಶಸ್ವಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರುಗಳನ್ನು ಅಭಿನಂದಿಸಿದ್ದಾರೆ.
ಶ್ರೀ ಸಾಯಿಬಾಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆ, ಅಧ್ಯಾಪಕರುಗಳಾದ ಶ್ರೀಮತಿ.ಮಂದಾಕಿನಿ ಸಾವಂತ್, ಶ್ರೀಮತಿ. ಸಂಗೀತ ಅಂದುರೇಕರ್, ಶ್ರೀಮತಿ.ವೈಶಾಲಿ ದೇಶಮುಖ್, ಶ್ರೀ.ದಿಲೀಪ್ ಶೆಲ್ಕೆ, ಶ್ರೀ.ಪ್ರಶಾಂತ್ ಗಡ್ಕರಿ, ಶ್ರೀ.ಸುನೀಲ್ ಕಂಡೇಕರ್, ಶ್ರೀ.ಸುಜಿತ್ ದಳವಿ, ಶ್ರೀಮತಿ.ಸರಿತಾ ಲವರೆ, ಶ್ರೀಮತಿ. ಸ್ವಾತಿ ಕುಡು, ಶ್ರೀಮತಿ.ಸೀಮಾ ಸೋನಾವಾನೆ, ಶ್ರೀಮತಿ.ವಂದನಾ ದೇಶಮುಖ್, ಶ್ರೀಮತಿ.ಕಂಚನ್ ಜವರೇ, ಶ್ರೀ.ದತ್ತಾ ಶೆಲ್ಕೆ, ಶ್ರೀ.ದಿಲೀಪ್ ಸಂಗಮನೇರೆ, ಶ್ರೀ. ಸುಭಾಷ್ ದಂಡವತೆ, ಶ್ರೀ. ಬಾವುಸಾಹೇಬ್ ಅನಾಪ್, ಶ್ರೀಮತಿ.ಅನಿತಾ ಹಾಗೂ ಇನ್ನಿತರ ಪ್ರಧ್ಯಾಪಕರುಗಳು ಹಾಗೂ ಕಾಲೇಜಿನ ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವಲ್ಲಿ ಬಹಳವೇ ಶ್ರಮ ವಹಿಸಿದ್ದಾರೆ.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment