Sunday, January 19, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ  28ನೇ ಜನವರಿ 2013, ಶನಿವಾರ ದಂದು ಸಾಮಾನ್ಯ ಜ್ಞಾನ ಆಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 

ಶಿರಡಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕಲಿಯುವಿಕೆಯಲ್ಲಿ ಉತ್ಸುಕತೆ, ಶೋಧನಾ ಮನೋಭಾವ, ಆತ್ಮ ಸ್ಥೈರ್ಯ, ಸ್ಪರ್ಧಾ ಮನೋಭಾವ, ತಾರ್ಕಿಕ ಚಿಂತನಾ ಪ್ರವೃತ್ತಿ, ಗಮನವಿಟ್ಟು ಕೇಳುವ ಕುಶಲತೆ, ಮಾತುಗಾರಿಕೆ, ಚರ್ಚೆ ಮಾಡುವ ಕುಶಲತೆ, ಉಚ್ಚಾರಣಾ ರೀತಿ ಮತ್ತು  ವ್ಯಕ್ತಿತ್ವ ವಿಕಸನಕ್ಕಾಗಿ ಈ ರಸಪ್ರಶ್ನೆಯನ್ನು ಆಯೋಜಿಸಲಾಗಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ವಿಷಯಗಳಾದ ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ಕ್ರೀಡೆ, ಪ್ರಚಲಿತ ವಿದ್ಯಮಾನಗಳು ಹಾಗೂ ಭಾಷೆಯ ವಿಷಯಗಳಿಂದ ಆಯ್ದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಉಪಾಧ್ಯಾಯರಿಗೆ ಉಚಿತವಾಗಿ ಟೀ, ಲಘು ಉಪಹಾರ ಹಾಗೂ ಭೋಜನವನ್ನು ನೀಡಲಾಗುತ್ತದೆ.  ಹೊರ ಊರುಗಳಿಂದ ಭಾಗವಹಿಸುವ ವಿದ್ಯಾರ್ಥಿ ಹಾಗೂ ಉಪಾಧ್ಯಾಯರಿಗೆ ಉಚಿತ ವಸತಿಯನ್ನು ಸಹ ಕಲ್ಪಿಸಲಾಗುತ್ತದೆ, ಆದರೆ ಪ್ರಯಾಣ ಭತ್ಯೆಯನ್ನು ಸ್ಪರ್ಧಿಗಳೇ ಭರಿಸಬೇಕಾಗಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು saibabacollegeshirdi@gmail.com ಅಥವಾ www.saibabacollegeshirdi.in ಮುಖಾಂತರವಾಗಿ 16ನೇ ಜನವರಿ 2014 ರ ಒಳಗಡೆ ನೀಡಿ ನೋಂದಣಿ ಮಾಡಿಕೊಳ್ಳಲು ಈ ಮುಖಾಂತರ ಮನವಿ ಮಾಡ ಲಾಗಿದೆ. ಸ್ಪರ್ಧೆಯ ದಿನದಂದು ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಸಹಿ ಮಾಡಿರುವ ಪತ್ರವನ್ನು ತಪ್ಪದೆ ಸಲ್ಲಿಸಬೇಕಾಗಿರುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 2,101 ರೂಪಾಯಿಗಳ ಪ್ರಥಮ ಬಹುಮಾನ, 1,501 ರೂಪಾಯಿಗಳ ದ್ವಿತೀಯ ಬಹುಮಾನ, 1,101 ರೂಪಾಯಿಗಳ ತೃತೀಯ ಬಹುಮಾನ ಹಾಗೂ 501 ರೂಪಾಯಿಗಳ ಎರಡು ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತದೆ. ಅಲ್ಲದೇ ಪಾರಿತೋಷಕ ಹಾಗೂ ಪ್ರಶಂಸಾ ಪತ್ರವನ್ನು ಸಹ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿರಡಿ ಸಾಯಿಬಾಬಾ ಹೈಯರ್ ಸೆಕೆಂಡರಿ ಶಾಲೆಯನ್ನು ದೂರವಾಣಿ ಸಂಖ್ಯೆಗಳಾದ (02423)  259634, 259635 , 258500 & +91 95535 00537 ಮುಖಾಂತರ ಸಂಪರ್ಕಿಸಬೇಕಾಗಿ ಕೋರಲಾಗಿದೆ. ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment