Friday, May 25, 2012

ತಮಿಳು ಶ್ರೀಸಾಯಿ ಸಚ್ಚರಿತ್ರೆಯ ಅನುವಾದಕ ಶ್ರೀ.ಪಿ.ಅಯ್ಯಪ್ಪನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಪಿ.ಅಯ್ಯಪ್ಪನ್ ರವರು ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯನ್ನು ತಮಿಳು ಭಾಷೆಯಲ್ಲಿ ಅನುವಾದ ಮಾಡಿರುತ್ತಾರೆ. ಇವರು ಈ ಮಹಾನ್ ಗ್ರಂಥವನ್ನು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದಿರುತ್ತಾರೆ.



ಈ ಸಾಯಿ ಸಚ್ಚರಿತ್ರೆಯಲ್ಲಿ ಲೇಖಕರು ತಿರುಪ್ಪಾವೈನ ನುಡಿಗಟ್ಟುಗಳನ್ನು ಬಳಸಿರುವುದು ಒಂದು ವಿಶೇಷ.ಲೇಖಕರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಎಲ್ಲರಿಗೂ ಅನುಕೂಲವಾಗಲೆಂದು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದು ಆಸಕ್ತಿ ಇರುವ ಸಾಯಿಭಕ್ತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸಚ್ಚರಿತ್ರೆಯನ್ನು ಓದುವಾಗ  ಮತ್ತು ಕೇಳುವಾಗ ಅನೇಕ ಕಡೆ  ತಾವು  ಅತ್ಯಂತ  ಭಾವುಕರಾಗಿ  ಪುನಃ  ಅದೇ  ಭಾಗವನ್ನು  ಮತ್ತೆ ಮತ್ತೆ ಕೇಳಿದ್ದಾಗಿ ಹೇಳುವ ಲೇಖಕರು ಸಾಯಿ ಭಕ್ತರಿಗೂ  ಕೂಡ  ಅದೇ  ರೀತಿ  ಅನುಭವವಾಗುವುದರಲ್ಲಿ  ಯಾವುದೇ ಸಂಶಯ  ಇಲ್ಲ  ಎಂದು  ನುಡಿಯುತ್ತಾರೆ. ಈ ಪುಸ್ತಕವು 900 ಪುಟಗಳನ್ನು ಮತ್ತು 53 ಅಧ್ಯಾಯಗಳನ್ನು ಹೊಂದಿರುತ್ತದೆ.



ಶ್ರೀ.ಪಿ.ಅಯ್ಯಪ್ಪನ್ ರವರು ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಅರಿಯನಾಯಗಪುರಂ ನಲ್ಲಿ 11ನೇ ಜೂನ್ 1943 ರಂದು ದಿವಂಗತ ಶ್ರೀ.ಪಿಚ್ಚಯ್ಯ ಮತ್ತು ಶ್ರೀಮತಿ.ಈಶ್ವರಿ ಅಮ್ಮಾಳ್ ರವರ ಮಗನಾಗಿ ಜನಿಸಿರುತ್ತಾರೆ.ಇವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ  ಪದವಿಯನ್ನು  ಗಳಿಸಿರುತ್ತಾರೆ.ಅಲ್ಲದೇ, ವಿಕಿರಣ ಸುರಕ್ಷತೆ ಮತ್ತು ಡೋಸಿಮೀಟರ್ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಿರುತ್ತಾರೆ.ಇವರು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ.

ಇವರು ತಮ್ಮ ಆಧ್ಯಾತ್ಮಿಕ ಗುರುಗಳಾದ ಗುರೂಜಿ ಶ್ರೀ.ಎ.ಎಸ್.ರಾಘವನ್ ರವರ ಬಳಿ 1980 ನೇ ಇಸವಿಯಲ್ಲಿ  ತಿರುಪ್ಪಾವೈ ನುಡಿಗಟ್ಟುಗಳ ಗಾಯನವನ್ನು ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಿರುತ್ತಾರೆ. 

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ತಾಯಮ್ಮಾಳ್ ರವರೊಂದಿಗೆ ಚನ್ನೈನಲ್ಲಿರುವ ತಂಬಾರಮ್ ಪಶ್ಚಿಮದ ಸ್ವಗೃಹದಲ್ಲಿ  ಸುಖೀಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು  ಅವರುಗಳಿಗೆ ವಿವಾಹವಾಗಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಪಿ.ಅಯ್ಯಪ್ಪನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 


ಶ್ರೀ.ಪಿ.ಅಯ್ಯಪ್ಪನ್ - ಲೇಖಕರು, 
ಎಸ್-1, ರಾವ್ ಶಂಕರ ಅಪಾರ್ಟ್ಮೆಂಟ್ಸ್,  2ನೇ ಮಹಡಿ,
37, ಕಾಮರಾಜಾರ್ ರಸ್ತೆ, 
ತಂಬಾರಮ್ ಪಶ್ಚಿಮ, 
ಚನ್ನೈ- 600 045, 
ತಮಿಳುನಾಡು, ಭಾರತ, 
ದೂರವಾಣಿ ಸಂಖ್ಯೆಗಳು: +91 44 2226 3871 / +91 94440 49061  
ಇ ಮೇಲ್ ವಿಳಾಸ: p.ayappan@gmail.com  


 ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment