Wednesday, May 2, 2012

ಚಿತ್ರದುರ್ಗ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ  ಶಿರಡಿ  ಸಾಯಿಬಾಬಾ  ಟ್ರಸ್ಟ್ (ನೋಂದಣಿ), ಹುಳಿಯಾರು ಮುಖ್ಯರಸ್ತೆ, ಹೊಸದುರ್ಗ-577 527, ಚಿತ್ರದುರ್ಗ ಜಿಲ್ಲೆ, ಕರ್ನಾಟಕ,  ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಹುಳಿಯಾರು ಮುಖ್ಯರಸ್ತೆಯಲ್ಲಿರುವ ಎಪಿಎಂಸಿ  ಮಾರುಕಟ್ಟೆಯ ಎದುರುಗಡೆ ಹಾಗೂ ಪೋಲಿಸ್ ವಸತಿಗೃಹದ ಹತ್ತಿರ  ಇರುತ್ತದೆ.ದೇವಾಲಯವು ಹೊಸದುರ್ಗ ಬಸ್  ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯವು 18000 ಚದರ ಅಡಿಯಷ್ಟು ವಿಶಾಲವಾದ ಪ್ರದೇಶದಲ್ಲಿ ಇರುತ್ತದೆ. ದೇವಾಲಯ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು  ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ಸ್ಥಳೀಯ ಭೂಪ್ರಾಧಿಕಾರದಿಂದ ಪಡೆದುಕೊಂಡು ದೇವಾಲಯದ ನಿರ್ಮಾಣ  ಮಾಡಿರುತ್ತದೆ. ದೇವಾಲಯದ ಭೂಮಿಪೂಜೆಯನ್ನ್ನು 1ನೇ ಫೆಬ್ರವರಿ 2007 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 20ನೇ ಮೇ 2010 ರಂದು ಹೊಸದುರ್ಗ ತಾಲ್ಲೂಕಿನ ಶ್ರೀ ಕ್ಷೇತ್ರ ಬೆಳಗೂರಿನ ಶ್ರೀ ಶ್ರೀ  ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಜಯಾನಂದ  ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ  ನೆರವೇರಿಸಿರುತ್ತಾರೆ. 

ಶ್ರೀ.ಹಂಜಿ ಶಿವಸ್ವಾಮಿಯವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮೊದಲನೇ ಮಹಡಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ 5 1/2 ಅಡಿ ಎತ್ತರದ ಸುಂದರ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಶಿರಡಿಯಲ್ಲಿ  ಇರುವಂತೆ  ಸಾಯಿಬಾಬಾರವರ  ವಿಗ್ರಹದ  ಎದುರುಗಡೆ  ಅಮೃತಶಿಲೆಯ  ನಂದಿಯ  ವಿಗ್ರಹವನ್ನು  ಸ್ಥಾಪಿಸಲಾಗಿದೆ. 

ದೇವಾಲಯದ ಹಿಂಭಾಗದಲ್ಲಿ ಗುರುಸ್ಥಾನವನ್ನು ಸ್ಥಾಪಿಸಲಾಗಿದ್ದು ಅಲ್ಲಿ ಪವಿತ್ರ ಬೇವಿನ ಮರವನ್ನು ಸಾಯಿಭಕ್ತರು ನೋಡಬಹುದು. 

ದೇವಾಲಯದ ಹಿಂಭಾಗದಲ್ಲಿರುವ ದ್ವಾರಕಾಮಾಯಿಯಲ್ಲಿ ಆಳೆತ್ತರದ ಸುಂದರ ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟವನ್ನು, ಪುಟ್ಟದಾದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ ಹಾಗೂ ಪವಿತ್ರ ಧುನಿಯನ್ನು ನೋಡಬಹುದು. 

ದೇವಾಲಯದ ಹಿಂಭಾಗದಲ್ಲಿರುವ 3 ಪ್ರತ್ಯೇಕ ದೇವಾಲಯಗಳಲ್ಲಿ ಕಪ್ಪು ಶಿಲೆಯ ವಿನಾಯಕ, ಈಶ್ವರ ಮತ್ತು  ಅಮೃತ  ಶಿಲೆಯ ದತ್ತಾತ್ರೇಯ ದೇವರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.ಈಶ್ವರ  ದೇವಾಲಯದ  ಎದುರುಗಡೆ  ಇರುವಂತೆ  ಕಪ್ಪುಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಧ್ಯಾನಮಂದಿರವು ದೇವಾಲಯದ ನೆಲಮಾಳಿಗೆಯಲ್ಲಿದ್ದು ಅಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಆಳೆತ್ತರದ  ಚಿತ್ರಪಟ  ಮತ್ತು ಸುಮಾರು 3 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ನೋಡಬಹುದು. 

ದೇವಾಲಯದಲ್ಲಿ ಮರದ ಪಲ್ಲಕ್ಕಿಯಿದ್ದು ಇದನ್ನು ಪ್ರತಿ ಗುರುವಾರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತದೆ. 

ದೇವಾಲಯದ ಹೊರಆವರಣದ ಎರಡೂ ಬದಿಗಳಲ್ಲಿ ಸುಂದರ ಹೂತೋಟವನ್ನು ನಿರ್ಮಿಸಲಾಗಿದ್ದು ದೇವಾಲಯದ  ಆಡಳಿತ  ಮಂಡಳಿಯ ಸದಸ್ಯರು ಅದನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯದ ಹಿಂಭಾಗದಲ್ಲಿ ಉಚಿತ ಶ್ರೀ ಶಿರಡಿ ಸಾಯಿಬಾಬಾ ಚಿಕಿತ್ಸಾಲಯವಿದ್ದು ಇಲ್ಲಿ ಪ್ರತಿನಿತ್ಯ ತಜ್ಞ  ವೈದ್ಯರುಗಳು  ರೋಗಿಗಳ ತಪಾಸಣೆಯನ್ನು ಮಾಡಿ ಉಚಿತವಾಗಿ ಔಷಧಿಗಳನ್ನೂ ಸಹ ನೀಡುತ್ತಾರೆ. 





























ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ: 

ಕಾಕಡಾ ಆರತಿ  - ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ - ಸಂಜೆ 6 ಗಂಟೆಗೆ 
ಶೇಜಾರತಿ - ರಾತ್ರಿ 9 ಗಂಟೆಗೆ 

ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. 

ಪ್ರತಿ ಗುರುವಾರ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 2500/- ರೂಪಾಯಿಗಳು.

ವಿಶೇಷ ದಿನಗಳು:  

ತಿಂಗಳ ಪ್ರತಿ ಹುಣ್ಣಿಮೆಯ ದಿನ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ  ಸತ್ಯನಾರಾಯಣ  ಪೂಜೆಯನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ. 

ವಿಶೇಷ ಉತ್ಸವದ ದಿನಗಳು: 

1. ಪ್ರತಿವರ್ಷ  20ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ. 
2. ಶ್ರೀ ರಾಮನವಮಿ. 
3. ಗುರುಪೂರ್ಣಿಮೆ. 
4. ವಿಜಯದಶಮಿ. 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ದೇವಾಲಯದ ಹಿಂಭಾಗದಲ್ಲಿ ಉಚಿತ ಶ್ರೀ ಶಿರಡಿ ಸಾಯಿಬಾಬಾ ಚಿಕಿತ್ಸಾಲಯವಿದ್ದು ಇಲ್ಲಿ ಪ್ರತಿನಿತ್ಯ ತಜ್ಞ ವೈದ್ಯರುಗಳು ರೋಗಿಗಳ ತಪಾಸಣೆಯನ್ನು ಮಾಡಿ ಉಚಿತವಾಗಿ ಔಷಧಿಗಳನ್ನೂ ಸಹ ನೀಡುತ್ತಾರೆ. 

ದೇವಾಲಯದಲ್ಲಿ ನಿಯಮಿತವಾಗಿ ಉಚಿತವಾಗಿ ಸಾಮುಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗುತ್ತದೆ.

ದೇವಾಲಯದಲ್ಲಿ ಪ್ರತಿನಿತ್ಯ ಉಚಿತ ಯೋಗ ಮತ್ತು ಧ್ಯಾನದ ತರಗತಿಯನ್ನು ನಡೆಸಲಾಗುತ್ತಿದೆ.

ದೇವಾಲಯದಲ್ಲಿ ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಲಾಗುತ್ತದೆ. 

ದೇಣಿಗೆಗೆ ಮನವಿ: 

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ)ಯು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು /ಚೆಕ್ /ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ),  ಹೊಸದುರ್ಗ" ಇವರಿಗೆ  ಸಂದಾಯವಾಗುವಂತೆ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಹೊಸದುರ್ಗ  - ಖಾತೆ ಸಂಖ್ಯೆ 31016880816
ಕೆನರಾ ಬ್ಯಾಂಕ್, ಹೊಸದುರ್ಗ  - ಖಾತೆ ಸಂಖ್ಯೆ 0454101023822
ಸೀತಾರಾಘವ ಸಹಕಾರಿ ಬ್ಯಾಂಕ್, ಹೊಸದುರ್ಗ - ಖಾತೆ ಸಂಖ್ಯೆ CD-107


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 

ಎಪಿಎಂಸಿ ಮಾರುಕಟ್ಟೆಯ ಎದುರುಗಡೆ ಹಾಗೂ ಪೋಲಿಸ್ ವಸತಿಗೃಹದ ಹತ್ತಿರ. 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ), 
ಹುಳಿಯಾರು ಮುಖ್ಯರಸ್ತೆ, ಹೊಸದುರ್ಗ-577 527, 
ಚಿತ್ರದುರ್ಗ ಜಿಲ್ಲೆ, ಕರ್ನಾಟಕ,  ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹಂಜಿ ಶಿವಸ್ವಾಮಿ - ಅಧ್ಯಕ್ಷರು / ಶ್ರೀ.ಎನ್.ಮಂಜುನಾಥ್ - ಗೌರವ ಕಾರ್ಯದರ್ಶಿ 

ದೂರವಾಣಿ ಸಂಖ್ಯೆಗಳು: 

+ 91 94481 39405 - ಶ್ರೀ.ಹಂಜಿ ಶಿವಸ್ವಾಮಿ - ಅಧ್ಯಕ್ಷರು / +91 94491 45703 / +91 98866 45703 – ಶ್ರೀ. ಎನ್. ಮಂಜುನಾಥ್ - ಗೌರವ ಕಾರ್ಯದರ್ಶಿ 

ಇ ಮೇಲ್ ವಿಳಾಸ:  


ಮಾರ್ಗಸೂಚಿ:  

ಹೊಸದುರ್ಗ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ಕರ್ನಾಟಕದ  ಚಿತ್ರದುರ್ಗ  ಜಿಲ್ಲೆಯ ಹೊಸದುರ್ಗ ಪಟ್ಟಣದ ಹುಳಿಯಾರು ಮುಖ್ಯರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಎದುರುಗಡೆ  ಹಾಗೂ  ಪೋಲಿಸ್ ವಸತಿಗೃಹದ ಹತ್ತಿರ ಇರುತ್ತದೆ. ದೇವಾಲಯವು ಹೊಸದುರ್ಗ ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment