Friday, May 11, 2012

ಬಹುಮುಖ ಪ್ರತಿಭೆಯ ಸಾಯಿಭಜನ ಗಾಯಕ ಶ್ರೀ.ಜಯದೇವ ಚಟರ್ಜಿ (ಜಾಯ್)  - ಕೃಪೆ: ಸಾಯಿಅಮೃತಧಾರಾ.ಕಾಂ 


ಉದಯೋನ್ಮುಖ ಸಾಯಿಭಜನೆ ಮತ್ತು ಗಜಲ್ ಗಾಯಕರಾದ ಶ್ರೀ.ಜಯದೇವ ಚಟರ್ಜಿಯವರು 14ನೇ  ಫೆಬ್ರವರಿ 1975  ರಂದು ಉತ್ತರಪ್ರದೇಶದ ಲಕ್ನೌನಲ್ಲಿ ಸಂಗೀತ ಪ್ರೇಮಿಗಳ ವಂಶದಲ್ಲಿ ಜನಿಸಿದರು. ಇವರ ತಂದೆ ಶ್ರೀ.ರಾಜ್ ಕುಮಾರ್ ಚಟರ್ಜಿ ಮತ್ತು  ತಾಯಿ ಶ್ರೀಮತಿ.ಶಿಬಾನಿ ಚಟರ್ಜಿ. ಇವರ ಮನೆಯವರು ಮತ್ತು ಇವರ ಹತ್ತಿರದ ಸ್ನೇಹಿತರು ಪ್ರೀತಿಯಿಂದ ಇವರನ್ನು ಜಾಯ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಬಹುಮುಖ ಪ್ರತಿಭೆಯ ಶ್ರೀ.ಜಯದೇವ ಚಟರ್ಜಿಯವರು ಪತ್ರಕರ್ತ, ರೇಖಾಚಿತ್ರಕಾರ, ಫ್ಯಾಷನ್ ಡಿಸೈನರ್, ಸಂಗೀತ ಸಂಯೋಜಕರು, ಗಾಯಕರು ಮತ್ತು  ಗಾಯನ  ತರಬೇತುದಾರರಾಗಿ  ತಮ್ಮ  ನಿತ್ಯ  ಬದುಕಿನಲ್ಲಿ  ವಿವಿಧ  ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 


ಶ್ರೀ ಸತ್ಯ ಸಾಯಿಬಾಬಾ ರವರ ಜೊತೆ ಬಾಲ್ಯದ ದಿನಗಳಲ್ಲಿ 


ಇವರು ತಮ್ಮ ಬಾಲ್ಯದಲ್ಲಿ ಸಂಗೀತವನ್ನು ತಮ್ಮ ತಂದೆಯವರು ಹಾಗೂ ಜ್ಯೂನಿಯರ್ ಕಿಶೋರ್ ಕುಮಾರ್ಎಂದು  ಖ್ಯಾತಿಯನ್ನು ಪಡೆದಿದ್ದ ಶ್ರೀ.ರಾಜ್ ಕುಮಾರ್ ಚಟರ್ಜಿಯವರ ಬಳಿ ಕಲಿತರು. ನಂತರದ ದಿನಗಳಲ್ಲಿ ಬನಾರಸ್ ಘರಾನದ  ಖ್ಯಾತನಾಮರಾದ ಪಂಡಿತ್ ಶ್ರೀ.ರಾಮೇಶ್ವರ ಪ್ರಸಾದ್ ಮಿಶ್ರಾರವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ಹೀಗೆ ಅಭ್ಯಾಸ ಮಾಡುತ್ತಾ ಕೇವಲ ತಮ್ಮ 10ನೇ ವಯಸ್ಸಿನಲ್ಲೇ ಬಾಲಕ ಜಯದೇವ ಚಟರ್ಜಿಯವರು ಒಳ್ಳೆಯ  ಗಾಯಕರಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು. ಇವರು ತಮ್ಮ ಭಜನೆಯ ಅಭ್ಯಾಸವನ್ನು ಖ್ಯಾತ ಭಜನ ಗಾಯಕರಾದ ಭಜನ ಸಾಮ್ರಾಟ್ ಎಂದೇ ಖ್ಯಾತನಾಮರಾದ ಶ್ರೀ.ಅನುಪ್ ಜಲೋಟರವರ ಬಳಿ ಹಾಗೂ ಗಜಲ್ ಗಾಯನವನ್ನು  ಖ್ಯಾತ  ಗಜಲ್ ಗಾಯಕರಾದ ದಿವಂಗತ  ಶ್ರೀ.ಜಗಜಿತ್  ಸಿಂಗ್ ರವರ ಬಳಿ ಕಲಿತಿದ್ದಾರೆ..

ಜೈದೇವ್ ರವರು ಶ್ರೀ.ಅನುಪ್ ಜಲೋಟರವರೊಂದಿಗೆ 

ಇವರು ಗುಲ್ಷನ್ ಕುಮಾರ್ ಪ್ರಶಸ್ತಿ, ಇ-ಟಿವಿ ಪ್ರಶಸ್ತಿ ಅಲ್ಲದೇ ಇನ್ನು ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಸಂಗೀತ ಜಗತ್ತಿನ ಖ್ಯಾತ ನಾಮರಾದ ಕುಮಾರಿ.ಮಹಾಲಕ್ಷ್ಮಿ ಅಯ್ಯರ್, ಶ್ರೀ.ಅನುಪ್ ಜಲೋಟ, ಶ್ರೀಮತಿ.ಆಶಾ ದರ್ಬಾರ್ ಪಾರಸ್ ಜೈನ್ ಮತ್ತು ಇನ್ನು ಹಲವಾರು ಖ್ಯಾತ ಗಾಯಕರೊಂದಿಗೆ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, 2011ನೇ ಇಸವಿಯಲ್ಲಿ 22ನೇ ಏಪ್ರಿಲ್ 2011 ರಿಂದ 28ನೇ ಆಗಸ್ಟ್ 2011 ರವರೆಗೆ ಮಲೇಶಿಯಾ ದೇಶದಾದ್ಯಂತ ಪ್ರವಾಸ ಮಾಡಿ ಅನೇಕ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಜೈದೇವ್ ರವರು ಶ್ರೀ.ಪಾರಸ್ ಜೈನ್ ರವರೊಂದಿಗೆ 

ಜೈದೇವ್ ರವರು ಕುಮಾರಿ.ಮಹಾಲಕ್ಷ್ಮಿ ಅಯ್ಯರ್ ರವರೊಂದಿಗೆ 

ಜೈದೇವ್ ರವರು ಶ್ರೀ.ಸೋನು ಸೂದ್ ರವರೊಂದಿಗೆ 

ಪ್ರಸ್ತುತ ಇವರು ಸಮ್ಮೇಳನ ಶೈಲಿಯಲ್ಲಿ ಗಜಲ್ ಅಲ್ಬಮ್ ನ್ನು ತರುವ ಪ್ರಯತ್ನದಲ್ಲಿದ್ದು 2012ನೇ ಇಸವಿಯಲ್ಲಿ ಅಲ್ಬಮ್ ನ್ನು  ಹೊರತರುವ ಇರಾದೆಯನ್ನು ಹೊಂದಿದ್ದಾರೆ. 

ಗಜಲ್, ಭಜನೆ ಮತ್ತು ಚಲನಚಿತ್ರ ಗೀತೆಗಳಿಗೆ ಸಮಾನವಾದ ಮರ್ಯಾದೆಯನ್ನು ನೀಡುವುದನ್ನು ನೋಡಿದಾಗ ನಮಗೆ  ಇವರ ಬಹುಮುಖ ಪ್ರತಿಭೆಯ ಅರಿವಾಗುತ್ತದೆ. 

ವಿವಾಹಿತರಾಗಿರುವ ಇವರು ಪ್ರಸ್ತುತ ಲಕ್ನೌ ನ ತಮ್ಮ ಸ್ವಗೃಹದಲ್ಲಿ ಪತ್ನಿಯೊಂದಿಗೆ ಸುಖೀ ಜೇವನವನ್ನು ನಡೆಸುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ಇವರು ನೀಡಿರುವ ಕೆಲವು ಪ್ರಮುಖ ಕಾರ್ಯಕ್ರಮಗಳ ವಿವರವನ್ನು ಸಾಯಿಭಕ್ತರ ಆವಗಾಹನೆಗಾಗಿ ಈ ಕಳಗೆ 
ನೀಡಲಾಗಿದೆ. 

1. 1993 ರಲ್ಲಿ ಲಕ್ನೌ ನಗರದಲ್ಲಿ ಮೆಹಫಿಲ್ ಏ ಗಜಲ್ ಕಾರ್ಯಕ್ರಮ. 
2. 1996 ರಲ್ಲಿ ನವದೆಹಲಿಯ ಕಾನ್ನಾಟ್ ಹೋಟೆಲ್ ನವರು ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ. 
3. 1996 ರಲ್ಲಿ ನವದೆಹಲಿಯ ಮೌರ್ಯ ಶೇರ್ಟಾನ್ ನವರು ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ.
4. 1997 ರಲ್ಲಿ ನವದೆಹಲಿಯಲ್ಲಿ ಗುಜರಾತ್ ಭೂಕಂಪ ಪೀಡಿತರಿಗಾಗಿ ನಡೆದ ವಿಶೇಷ ಕಾರ್ಯಕ್ರಮ. 
5. 1998 ರಲ್ಲಿ ಡೆಹೆರಾಡೂನ ನಲ್ಲಿ ನಡೆದ ಏಕ್ ಶಾಮ್ ಗಜಲ್ ಕೆ ನಾಮ್ ಕಾರ್ಯಕ್ರಮ. 
6. 1998 ರಲ್ಲಿ ಲಕ್ನೌ ನಗರದ ಹಜರತ ಗಂಜ್ ನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ. 
7. 1997 ರಲ್ಲಿ ನವದೆಹಲಿಯ ತಾಜ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಗಜಲೋ ಕಿ ಶಾಮ್ ಕಾರ್ಯಕ್ರಮ. 
8. 2000 ನೇ  ಇಸವಿಯಲ್ಲಿ ಮುಂಬೈ ನಲ್ಲಿ ನಡೆದ ಆರ್ಟಿಸ್ಟ್ ಆಫ್ ದಿ ಮಿಲಾನಿಯಂ ಕಾರ್ಯಕ್ರಮ. 
9. 2000 ನೇ ಇಸವಿಯಲ್ಲಿ ಮುಂಬೈ ನಲ್ಲಿ ಇಸ್ಕಾನ್ ಆಯೋಜಿಸಿದ್ದ ಭಕ್ತಿ ಸಂಗೀತ ಸಂಧ್ಯಾ ಕಾರ್ಯಕ್ರಮ. 
10.2001ನೇ ಇಸವಿಯಲ್ಲಿ 32ನೇ ಬೆಟಾಲಿಯಾನ್ ಸೈನ್ಯದ ವತಿಯಿಂದ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
11.25ನೇ ಡಿಸೆಂಬರ್ 2001 ರಂದು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಗಜಲ್ ರಾತ್ರಿ ಕಾರ್ಯಕ್ರಮ.
12.2002ನೇ ಇಸವಿಯಲ್ಲಿ ಲಕ್ನೌ  ಕೃಷ್ಣ  ಜನ್ಮಾಷ್ಟಮಿಯ  ಅಂಗವಾಗಿ  ಆಶಿಯಾನಾ  ರೆಸಿಡೆಂಟ್  ಅಸೋಸಿಯೇಶನ್
     ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
13.2002ನೇ ಇಸವಿಯಲ್ಲಿ ನೈನಿಟಾಲ್ ನಲ್ಲಿ ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ.
14.2003ನೇ ಇಸವಿಯಲ್ಲಿ ಲಕ್ನೌ ನ ಇಸ್ಕಾನ್ ಕೃಷ್ಣ  ಜನ್ಮಾಷ್ಟಮಿಯ  ಅಂಗವಾಗಿ ಆಯೋಜಿಸಿದ್ದ ಭಜನ
     ಸಂಧ್ಯಾ ಕಾರ್ಯಕ್ರಮ. 
15.ಸೆಪ್ಟೆಂಬರ್ 2004 ರಲ್ಲಿ ಮುಂಬೈ ನ ಧುನ್ ಸಂಸ್ಥೆ ಆಯೋಜಿಸಿದ್ದ ಭಕ್ತಿ ಸಂಗೀತ ಸಮ್ಮೇಳನ ಕಾರ್ಯಕ್ರಮ.
16.9ನೇ ಜುಲೈ 2005 ರಂದು ಸಂಸ್ಕೃತಿ ಕಾರವಾನ್ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
17.2006 ರಲ್ಲಿ ನವದೆಹಲಿಯಲ್ಲಿ ನಡೆದ ಭಜನ ಸಮ್ಮೇಳನ ಕಾರ್ಯಕ್ರಮ.
18.8ನೇ ಫೆಬ್ರವರಿ 2007 ರಂದು ಮಿರ್ಜಾಪುರ್ ನಲ್ಲಿ ನಡೆದ ಗಜಲೋ ಕೇ  ಶಾಮ್ ಜಗಜಿತ್ ಸಿಂಗ್ ಕೇ
     ನಾಮ್ ಕಾರ್ಯಕ್ರಮ. 
19.23ನೇ ನವೆಂಬರ್ 2008 ರಂದು ಫತೇಪುರ್ ಜಿಲ್ಲೆಯ ಖಾಗಾನಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ.
20.19ನೇ ಏಪ್ರಿಲ್ 2008 ರಂದು ಲಕ್ನೌ ನಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ.
21.16ನೇ ಜೂನ್ 2008 ರಂದು ಅಹಮದಾಬಾದ್ ನಲ್ಲಿ ಧುನ್ ಸಂಸ್ಥೆ ಆಯೋಜಿಸಿದ್ದ ಶಾಮ್ ಏ ಮೆಹಫಿಲ್ ಕಾರ್ಯಕ್ರಮ.
22.2008 ರಲ್ಲಿ ಸೀತಾಪುರ ಮಹೋತ್ಸವದಲ್ಲಿ ನಡೆದ ಶಾಮ್ ಏ ಗಜಲ್ ಕಾರ್ಯಕ್ರಮ.
23.8ನೇ ಫೆಬ್ರವರಿ 2008 ರಂದು ಲಕ್ನೌ ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ಗಜಲೋ ಕೇ
     ಶಾಮ್ ಜಗಜಿತ್ ಸಿಂಗ್ ಕೇ ನಾಮ್ ಕಾರ್ಯಕ್ರಮ.
24.2009ನೇ ಇಸವಿಯಲ್ಲಿ ಸೀತಾಪುರ ಮಹೋತ್ಸವದಲ್ಲಿ ನಡೆದ ಶಾಮ್ ಏ ಗಜಲ್ ಕಾರ್ಯಕ್ರಮ.
25.27ನೇ ನವೆಂಬರ್ 2009 ರಂದು ಲಕ್ನೌ ಮಹೋತ್ಸವದಲ್ಲಿ ನಡೆದ ಭಜನ ಸಂಧ್ಯಾ ಕಾರ್ಯಕ್ರಮ.
26.2ನೇ ಅಕ್ಟೋಬರ್ 2010 ರಂದು ಲಕ್ನೌ ನಲ್ಲಿ ನ್ಯಾಷನಲ್ ಬುಕ್ ಫೇರ್ ನವರು ಆಯೋಜಿಸಿದ್ದ ರವೀಂದ್ರನಾಥ್ ಟಾಕುರ್
     ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.
27.22ನೇ ಏಪ್ರಿಲ್ 2011 ರಿಂದ 28ನೇ ಆಗಸ್ಟ್ 2011 ರವರೆಗೆ ಮಲೇಶಿಯಾ ದೇಶದಾದ್ಯಂತ ಭಜನೆ ಮತ್ತು ಗಜಲ್  
     ಕಾರ್ಯಕ್ರಮ.
28.20ನೇ ಅಕ್ಟೋಬರ್ 2011 ರಂದು ಲಕ್ನೌ ನಲ್ಲಿ ನ್ಯಾಷನಲ್ ಬುಕ್ ಫೇರ್ ನವರು ಆಯೋಜಿಸಿದ್ದ ಪುರಾತನ ಸುಪ್ರಸಿದ್ಧ
     ಗಾಯಕರುಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.
29.16ನೇ ಅಕ್ಟೋಬರ್ 2011 ರಂದು ಉತ್ತರಪ್ರದೇಶದ ಸೀತಾಪುರದಲ್ಲಿ ಆಯೋಜಿಸಿದ್ದ ಜಗಜಿತ್ ಸಿಂಗ್ ರವರಿಗೆ
     ಶ್ರದ್ಧಾಂಜಲಿ ಕಾರ್ಯಕ್ರಮ.

ಶ್ರೀ ಜೈದೇವ್ ರವರ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ  ಪ್ರಕಟವಾಗಿರುವ  ಕೆಲವು  ಪ್ರಶಂಸನೀಯ ಲೇಖನಗಳನ್ನು ಈ ಕೆಳಗೆ  ಲಗತ್ತಿಸಲಾಗಿದೆ:











ಶ್ರೀ.ಜಯದೇವ ಚಟರ್ಜಿ ಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 

ಬಿ-1509, ಇಂದಿರಾನಗರ, ಲಕ್ನೌ-16.
ಉತ್ತರಪ್ರದೇಶ, ಭಾರತ.

ದೂರವಾಣಿ ಸಂಖ್ಯೆಗಳು: 

+91 88088 16234 / +91 93357 15547 / +91 95545 41001 

ಇ ಮೇಲ್ ವಿಳಾಸ: 

musical.jaidev@gmail.com


ಫೇಸ್ ಬುಕ್ ಜೋಡಣೆ: 

www.facebook.com/JAIDEV14FEB


ಭಜನೆ ಮತ್ತು ಗಜಲ್ ವೀಡಿಯೋ ಜೋಡಣೆಗಳು: 








ಕನ್ನಡ ಅನುವಾದ: ಶ್ರೀಕಂಠ ಶರ್ಮ   

No comments:

Post a Comment