ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ), ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561 203, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್ ನ ಬಳಿ ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿದೆ.
ಈ ದೇವಾಲಯದ ಭೂಮಿಪೂಜೆಯನ್ನು ಫೆಬ್ರವರಿ 2007 ರಲ್ಲಿ ಮಾಡಲಾಯಿತು.
ಈ ದೇವಾಲಯವನ್ನು 29ನೇ ಮಾರ್ಚ್ 2012 ರಂದು "ನಡೆದಾಡುವ ದೇವರು" ಎಂದೇ ಪ್ರಸಿದ್ಧಿ ಪಡೆದಿರುವ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಉದ್ಘಾಟಿಸಿದರು. ಬೆಂಗಳೂರಿನ ಗಿರಿನಗರ ಶಿರಡಿ ಸಾಯಿಬಾಬಾ ಮಂದಿರದ ಶ್ರೀ ಶ್ರೀ ಶ್ರೀ ಗೋಪಾಲಕೃಷ್ಣ ಬಾಬಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಹೆಚ್.ಪಿ.ಶಂಕರ್ ರವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಸೇವಾಶ್ರಮ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರು ಈ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದ ಮೊದಲನೇ ಮಹಡಿಯಲ್ಲಿ ಮಂದಿರವಿದ್ದು ಮಂದಿರದ ಮಧ್ಯಭಾಗದಲ್ಲಿ 6 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಇಕ್ಕೆಲದಲ್ಲಿ 3 ಅಡಿ ಎತ್ತರದ ಗಣಪತಿ ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 1 ಅಡಿ ಎತ್ತರದ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳನ್ನು ಕೂಡ ಮಂದಿರದಲ್ಲಿ ನೋಡಬಹುದು.
ದೇವಾಲಯದ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ 7:30 ರ ವರೆಗೆ ತೆರೆದಿರುತ್ತದೆ.
ದೇವಾಲಯದ ಹೊರ ಆವರಣದ ಎಡಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇವಾಲಯದ ಹೊರ ಆವರಣದ ಮಧ್ಯಭಾಗದಲ್ಲಿ ತುಳಸಿ ಬೃಂದಾವನವನ್ನು ಕೂಡ ಸ್ಥಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ 6:30 ರಿಂದ 12:30 ರವರೆಗೆ.
ಸಂಜೆ 4:30 ರಿಂದ 8:00 ರವರೆಗೆ.
ಆರತಿಯ ಸಮಯ:
ಕಾಕಡಾ ಆರತಿ - ಬೆಳಿಗ್ಗೆ 6:30 ಗಂಟೆಗೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಗಂಟೆಗೆ
ಧೂಪಾರತಿ - ಸಂಜೆ 6 ಗಂಟೆಗೆ
ಶೇಜಾರತಿ - ರಾತ್ರಿ 8 ಗಂಟೆಗೆ
ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ 8:30 ಕ್ಕೆ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು.
ಮಂದಿರದಲ್ಲಿ ಶಾಶ್ವತ ಪೂಜೆಯನ್ನು ಮಾಡಲು ಸಾಯಿಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 5000/- ರೂಪಾಯಿಗಳು.
ವಿಶೇಷ ದಿನಗಳು:
ತಿಂಗಳ ಪ್ರತಿ ಹುಣ್ಣಿಮೆಯ ದಿನ ಬೆಳಿಗ್ಗೆ 9:30 ರಿಂದ 11:30 ರವರೆಗೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 25/- ರೂಪಾಯಿಗಳು.
ವಿಶೇಷ ಉತ್ಸವದ ದಿನಗಳು:
1. ಪ್ರತಿವರ್ಷ 29ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ.
2. ಶ್ರೀ ರಾಮನವಮಿ.
3. ಗುರುಪೂರ್ಣಿಮೆ.
4. ಗೋಕುಲಾಷ್ಟಮಿ.
5. ವಿಜಯದಶಮಿ.
6. ದತ್ತ ಜಯಂತಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಆವರಣದಲ್ಲಿ ವಾರದಲ್ಲಿ ಒಂದು ದಿನ ತಜ್ಞ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ದೇವಾಲಯದ ಧ್ಯಾನಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ಮತ್ತು ಧ್ಯಾನದ ತರಗತಿಯನ್ನು ನಡೆಸಲಾಗುತ್ತಿದೆ.
ದೇಣಿಗೆಗೆ ಮನವಿ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ) ಯು ದೇವಾಲಯದ
ಅಭಿವೃದ್ಧಿ ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು
ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು ನೀಡಲು ಇಚ್ಚಿಸುವ
ಸಾಯಿಭಕ್ತರು ನಗದು / ಚೆಕ್/ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ),ದೊಡ್ಡಬಳ್ಳಾಪುರ" ಇವರಿಗೆ ಸಂದಾಯವಾಗುವಂತೆ ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 22817 ಮತ್ತು ಟಿ.ಎಂ.ಸಿ.ಬ್ಯಾಂಕ್ ಖಾತೆ ಸಂಖ್ಯೆ 463 ಖಾತೆಗಳಿಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ)
ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್,
ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561 203,
ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561 203,
ಕರ್ನಾಟಕ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಹೆಚ್.ಪಿ.ಶಂಕರ್ - ಗೌರವ ಅಧ್ಯಕ್ಷರು / ಶ್ರೀ.ಬಿ.ಸಿ.ಅನಂತ ಮುರ್ತಿ - ಕಾರ್ಯದರ್ಶಿ / ಶ್ರೀ.ಬಿ.ಸಿ.ಜನಾರ್ಧನ - ಕಾನೂನು ಸಲಹೆಗಾರರು / ಶ್ರೀ.ಕೆ.ಎನ್.ದೇವರಾಜ್ - ಖಚಾಂಚಿ.
ದೂರವಾಣಿ ಸಂಖ್ಯೆಗಳು:
+91 94803 66165 - ಕಾರ್ಯದರ್ಶಿ / +91 99800 52055 - ಕಾನೂನು ಸಲಹೆಗಾರರು / +91 99640 49005 - ಖಚಾಂಚಿ.
ಮಾರ್ಗಸೂಚಿ:
ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ
ರಂಗಪ್ಪ ಸರ್ಕಲ್ ನ ಬಳಿ ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ
ನಡಿಗೆಯ ಅಂತರದಲ್ಲಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೇರಳವಾಗಿ ಬಿಎಂಟಿಸಿ ಬಸ್ ಗಳು (285M), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಮತ್ತು ಖಾಸಗಿ ಬಸ್ ಗಳ ಸೌಲಭ್ಯವಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment