ಚನ್ನೈನ ರಾಯಪುರಂ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರದ ಉದ್ಘಾಟನೆ - ಕೃಪೆ: ಸಾಯಿಅಮೃತಧಾರಾ.ಕಾಂ
ಚನ್ನೈನ ರಾಯಪುರಂ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರದ ಉದ್ಘಾಟನೆಯು ಇದೇ ತಿಂಗಳ 31ನೇ ಮೇ 2012, ಗುರುವಾರ ದಂದು ನಡೆಯಲಿದೆ.
ಕಾರ್ಯಕ್ರಮದ ವಿವರಗಳನ್ನು ಮತ್ತು ತಮಿಳು ಭಾಷೆಯ ಆಹ್ವಾನ ಪತ್ರಿಕೆಯನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
29ನೇ ಮೇ 2012, ಮಂಗಳವಾರ
ಬೆಳಿಗ್ಗೆ 7:00 ರಿಂದ - ಮಂಗಳವಾದ್ಯ, ಗುರು ವಂದನೆ, ಅನುಗ್ರಹ ವಿಘ್ನೇಶ್ವರ ಪೂಜೆ, ನವಗ್ರಹ ಹೋಮ, ಗೋದಾನ ಪೂಜೆ, ಗೋಪೂಜೆ, ದೀಪಾರಾಧನೆ.
ಸಂಜೆ 5:00 ರಿಂದ - ಪ್ರಥಮ ಕಲಾಪೂಜೆ, ವಾಸ್ತು ಶಾಂತಿ, ಬೃತ್ಯಂಗಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಆಧಿವಾಸ್ಯಾಗಂ, ಗುರುಪೂಜೆ, ಭಜನೆಗಳು, ಹೋಮ, ಪೂರ್ಣಾಹುತಿ, ದೀಪಾರಾಧನೆ, ಅನ್ನದಾನ.
30ನೇ ಮೇ 2012, ಬುಧವಾರ
ಬೆಳಿಗ್ಗೆ 8:00 - ದ್ವಿತೀಯ ಕಲಾಪೂಜೆ, ಶಿರಡಿ ಸಾಯಿಬಾಬಾ ಬಿಂಬ ಯಂತ್ರ ಸ್ಥಾಪನೆ, ಸಹಸ್ರನಾಮ ಹೋಮ, ಪಾರಾಯಣ, ಭಜನೆ, ದೀಪಾರಾಧನೆ, ಅನ್ನದಾನ.
ಸಂಜೆ 5:00 - ತೃತೀಯ ಕಲಾಪೂಜೆ, ಭಜನೆ, ಪಾರಾಯಣ, ಬಿಂಬ ಸಂಸ್ಕಾರ ಹೋಮ, ದೀಪಾರಾಧನೆ.
31ನೇ ಮೇ 2012, ಗುರುವಾರ
ಬೆಳಿಗ್ಗೆ 5:00 - ಚತುರ್ಥ ಕಲಾಪೂಜೆ, ಭಜನೆ, ಪಾರಾಯಣ,ಬಿಂಬ ಸಂಸ್ಕಾರ ಹೋಮ, ದೀಪಾರಾಧನೆ.
ಬೆಳಿಗ್ಗೆ 7:30 - ಕುಂಭದ ಮೆರವಣಿಗೆ.
ಬೆಳಿಗ್ಗೆ 8:00 - ವಿಮಾನ ಮಹಾ ಕುಂಭಾಭಿಷೇಕ
ಬೆಳಿಗ್ಗೆ 8:15 - ಮುಲಸ್ಥಾನ ಗುರುಪೂಜೆ, ಕುಂಭಾಭಿಷೇಕ, ದಶದರ್ಶನ, ದೀಪಾರಾಧನೆ.
ಬೆಳಿಗ್ಗೆ 9:00 - ಅನ್ನದಾನ.
ಕುಂಭಾಭಿಷೇಕ ಹಾಗೂ ಮೇಲಿನ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶ್ರೀ.ಟಿ.ಎಸ್. ಕಾಳಿದಾಸ ಶಿವಾಚಾರ್ಯರ್ ನೇತೃತ್ವದಲ್ಲಿ ನೆಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಟ್ರಸ್ಟ್ ನಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ನೀಡಲಾಗಿದೆ:
ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರ
ಅರುಳ್ ಮಿಗು ಶ್ರೀ ಮನೋಮಣಿಯಮ್ಮಾಳ್ ಸಮೇತ ಪಂಚಮುಖಿ ಲಿಂಗೇಶ್ವರ ಆಲಯಂ,
ನಂ.18, ಎನ್.ಆರ್.ಟಿ.ರಸ್ತೆ,
ರಾಯಪುರಂ ರೈಲ್ವೇ ನಿಲ್ದಾಣ ಹಾಗೂ ಕ್ಲೈವ್ ಬ್ಯಾಟರಿ ಹತ್ತಿರ,
ಹೊಸ ಪ್ಲೈ ಓವರ್ ಕೆಳಗಡೆ, ರಾಯಪುರಂ, ಚನ್ನೈ - 600 013.
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಎಮ್.ಚಕ್ರಪಾಣಿ
ದೂರವಾಣಿ: +91 94447 10881 / +91 95001 11812
ಇಮೇಲ್: omsairampackingservice@gmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment