Tuesday, May 1, 2012

ಚನ್ನೈನ  ಪಶ್ಚಿಮ  ಕಾಮಕೋಟಿ  ನಗರದಲ್ಲಿ  ನೂತನವಾಗಿ ನಿರ್ಮಿಸಿರುವ ಶ್ರೀ ವಿಶ್ವರೂಪ ಶಿರಡಿ ಸಾಯಿ ಮಂದಿರದ ಉದ್ಘಾಟನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚನ್ನೈನ ಪಶ್ಚಿಮ ಕಾಮಕೋಟಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವಿಶ್ವರೂಪ ಶಿರಡಿ ಸಾಯಿ ಮಂದಿರದ ಉದ್ಘಾಟನೆಯು ಇದೇ ತಿಂಗಳ 4ನೇ ಮೇ 2012, ಶುಕ್ರವಾರ ದಂದು ನಡೆಯಲಿದೆ.

ಕಾರ್ಯಕ್ರಮದ ವಿವರಗಳನ್ನು ಮತ್ತು ತಮಿಳು ಭಾಷೆಯ ಆಹ್ವಾನ ಪತ್ರಿಕೆಯನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

3ನೇ ಮೇ 2012, ಗುರುವಾರ 

ಸಂಜೆ 4:30 ರಿಂದ - ಪ್ರಧಾನ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾ ಪೂಜನ, ಸ್ಥಾಪನಾ, ನಂದಿ ಶ್ರಾದ್ಧ, ಸ್ಥಾಪಿತ ದೇವತಾ ಪೂಜನ, ಜಲಾಧಿವಾಸ, ಸ್ಥಾಪನ, ವಿಗ್ರಹ ನ್ಯಾಸ, ಸ್ಥಾಪಿತ ದೇವತಾ ಹವನ, ಧಾನ್ಯಾಧಿವಾಸ, ಶಯ್ಯಾದಿವಾಸ, ಸಾಯಂಕಾಲ ಪೂಜೆ, ಆರತಿ.

4ನೇ ಮೇ 2012, ಶುಕ್ರವಾರ

ಬೆಳಿಗ್ಗೆ 4:30 ರಿಂದ 5:30 - ಸ್ಥಾಪಿತ ದೇವತಾ ಪೂಜನ, ಬೆಳಗಿನ ಪೂಜೆ, ಸ್ಥಾಪಿತ ದೇವತಾ ಹವನ, ವಿಗ್ರಹ ಪ್ರತಿಷ್ಟಾಪನೆ, ಬಲಿದಾನ, ಪೂರ್ಣಾಹುತಿ

ಬೆಳಿಗ್ಗೆ 5:30 ರಿಂದ 6:30 - ಮಹಾ ಕುಂಭಾಭಿಷೇಕ

ಬೆಳಿಗ್ಗೆ 7:00 ರಿಂದ - ಸಾಮುಹಿಕ ಅಭಿಷೇಕ, ಆರತಿ, ದರ್ಶನ ಮತ್ತು ಮಹಾಪ್ರಸಾದ




ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು  ದೇವಾಲಯದ ಟ್ರಸ್ಟ್ ನಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ನೀಡಲಾಗಿದೆ:

ಶ್ರೀ ವಿಶ್ವರೂಪ ಶಿರಡಿ ಸಾಯಿ ಮಂದಿರ
1,  ವೇಲವನ್ ರಸ್ತೆ, ಪಶ್ಚಿಮ ಕಾಮಕೋಟಿ ನಗರ,
ವಲಸಾರವಾಕ್ಕಂ, ಚನ್ನೈ - 600 087.
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಸಿ.ಸಾಯಿ ಗಣೇಶ್
ದೂರವಾಣಿ: +91 44  2486 8127 / +91 99621 17418 / +91 96001 91730
ಇಮೇಲ್: saiganeshsai@gmail.com  


ಕನ್ನಡ ಅನುವಾದ:  ಶ್ರೀಕಂಠ ಶರ್ಮ 

No comments:

Post a Comment