Thursday, May 31, 2012

ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ" ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಕೋರಮಂಗಲ, ಬೆಂಗಳೂರು ವತಿಯಿಂದ 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ರಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ"  ನಾಮಸಂಕೀರ್ತನೆ ಹಾಗೂ ವಿಶಾಲ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿರಡಿಯಲ್ಲಿರುವ ಸಮಾಧಿ ಮಂದಿರದ ಪ್ರತಿರೂಪವನ್ನು ಮುಂಬೈ ನ ಪ್ರಖ್ಯಾತ ಕಲಾವಿದರ ತಂಡವು ಪುನರ್ ನಿರ್ಮಾಣ ಮಾಡುತ್ತಿರುವುದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಕಾರ್ಯಕ್ರಮವು 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ಕ್ಕೆ  ತಾವು ಹಾಡಿರುವ ಶಿರಡಿ ಸಾಯಿಬಾಬಾರವರ ಆರತಿ ಹಾಗೂ ಭಜನೆಗಳಿಗೆ ಪ್ರಪಂಚದಾದ್ಯಂತ ಶಿರಡಿ ಸಾಯಿಭಕ್ತರ ಮನೆಮಾತಾಗಿರುವ ಶ್ರೀ.ಪ್ರಮೋದ್ ಮೇಧಿ ಯವರಿಂದ ಸಾಯಿಬಾಬಾರವರ ಪೂಜಾ ವಿಧಿವಿಧಾನಗಳು ಹಾಗೂ ಭಜನೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಶೈಲೇಂದ್ರ ಭಾರತಿ ಹಾಗೂ ಯುವ ಸಾಯಿ ಭಜನ ಗಾಯಕರಾದ ಶ್ರೀ.ಪಂಕಜ್ ರಾಜ್ ರವರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ. 1977 ರಲ್ಲಿ ಬಿಡುಗಡೆಯಾದ ಮನೋಜ್ ಕುಮಾರ್ ರವರ ಸುಪ್ರಸಿದ್ಧ ಹಿಂದಿ ಚಲನಚಿತ್ರವಾದ "ಶಿರಡಿ ಕೇ ಸಾಯಿಬಾಬಾ" ನಲ್ಲಿ ಶಿರಡಿ ಸಾಯಿಬಾಬಾರವರ ಪಾತ್ರವನ್ನು ನಿರ್ವಹಿಸಿದ ಶ್ರೀ.ಸುಧೀರ್ ದಳವಿಯವರಿಂದ ವಿಶೇಷ ಅಭಿನಯ ಕಾರ್ಯಕ್ರಮವಿರುತ್ತದೆ. ಜಗದ್ವಿಖ್ಯಾತ ಚಿತ್ರಕಾರರಾದ ಹಾಗೂ ಏಷಿಯಾದ ಅತಿ ಎತ್ತರದ ಶಿರಡಿ ಸಾಯಿಬಾಬಾರವರ ಚಿತ್ರವನ್ನು ರಚಿಸಿದ ಹೆಗ್ಗಳಿಕೆಯಿರುವ ಶ್ರೀ.ನವನೀತ್ ಅಗ್ನಿಹೋತ್ರಿಯವರು ಹಾಡಿನ ಸಂದರ್ಭಕ್ಕೆ  ತಕ್ಕಂತೆ ಸ್ಥಳದಲ್ಲೇ ಸಾಯಿಬಾಬಾರವರ ಚಿತ್ರವನ್ನು ಬಿಡಿಸಲಿದ್ದಾರೆ. ಮುಂಬೈ ನ "ಕಲಾ ಸಾಧನ ತಂಡ" ದ ವತಿಯಿಂದ ರಂಗೋಲಿಯಲ್ಲಿ ಶಿರಡಿ ಸಾಯಿಬಾಬಾರವರ ಚಿತ್ರವನ್ನು ಬಿಡಿಸುವ ವಿಶೇಷ ಕಾರ್ಯಕ್ರಮವಿರುತ್ತದೆ.

ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಕಾರ್ಯಕ್ರಮದ ಆಯೋಜಕರು ದಕ್ಷಿಣ ಭಾರತದ ಈ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮಕ್ಕೆ ಎಲ್ಲಾ ಸಾಯಿ ಭಕ್ತರ ಸಹಕಾರವನ್ನು ಕೋರುತ್ತಾರೆ. ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ಅಥವಾ ಇನ್ನ್ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಲು  ಇಚ್ಚಿಸುವ ಸಾಯಿಭಕ್ತರು ಶ್ರೀ.ಚಂದ್ರಕಾಂತ್ ಜಾಧವ್ - ದೂರವಾಣಿ ಸಂಖ್ಯೆ:+91 98453 52984 ಅಥವಾ ಶ್ರೀಮತಿ.ವಿದ್ಯಾ ಜಾಧವ್ - ದೂರವಾಣಿ ಸಂಖ್ಯೆ: +91 98452 47433 ಇ-ಮೈಲ್ ವಿಳಾಸ: saisamarthtrust@gmail.com ನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:




ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, May 30, 2012

ಪಿಯಾಗ್ಗಿಯೋ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ವೆಸ್ಪಾ ಎಲ್.ಎಕ್ಸ್.125 ಸಿಸಿ ದ್ವಿಚಕ್ರ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಪಿಯಾಗ್ಗಿಯೋ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತಾನು ತಯಾರಿಸಿದ ವೆಸ್ಪಾ ಎಲ್.ಎಕ್ಸ್.125 ಸಿಸಿ ದ್ವಿಚಕ್ರ ವಾಹನದ ಪ್ರಥಮ ವಾಹನವನ್ನು ಇದೇ ತಿಂಗಳ 30ನೇ ಮೇ 2012, ಬುಧವಾರ ದಂದು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಕಾಣಿಕೆಯಾಗಿ ನೀಡಿತು. ಈ ವಾಹನದ ಬೆಲೆಯು 75,000 ರುಪಾಯಿಗಳಾಗಿರುತ್ತದೆ.  



ಕನ್ನಡ ಅನುವಾದ: ಶ್ರಿಕಂಠ ಶರ್ಮ

Tuesday, May 29, 2012

ಚನ್ನೈನ  ರಾಯಪುರಂ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರದ ಉದ್ಘಾಟನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚನ್ನೈನ ರಾಯಪುರಂ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರದ ಉದ್ಘಾಟನೆಯು ಇದೇ ತಿಂಗಳ 31ನೇ ಮೇ 2012, ಗುರುವಾರ ದಂದು ನಡೆಯಲಿದೆ.

ಕಾರ್ಯಕ್ರಮದ ವಿವರಗಳನ್ನು ಮತ್ತು ತಮಿಳು ಭಾಷೆಯ ಆಹ್ವಾನ ಪತ್ರಿಕೆಯನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:




29ನೇ ಮೇ 2012, ಮಂಗಳವಾರ 

ಬೆಳಿಗ್ಗೆ 7:00 ರಿಂದ - ಮಂಗಳವಾದ್ಯ, ಗುರು ವಂದನೆ, ಅನುಗ್ರಹ ವಿಘ್ನೇಶ್ವರ ಪೂಜೆ, ನವಗ್ರಹ ಹೋಮ, ಗೋದಾನ ಪೂಜೆ, ಗೋಪೂಜೆ, ದೀಪಾರಾಧನೆ.

ಸಂಜೆ 5:00 ರಿಂದ - ಪ್ರಥಮ ಕಲಾಪೂಜೆ, ವಾಸ್ತು ಶಾಂತಿ, ಬೃತ್ಯಂಗಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಆಧಿವಾಸ್ಯಾಗಂ, ಗುರುಪೂಜೆ, ಭಜನೆಗಳು, ಹೋಮ, ಪೂರ್ಣಾಹುತಿ, ದೀಪಾರಾಧನೆ, ಅನ್ನದಾನ.

30ನೇ ಮೇ 2012, ಬುಧವಾರ

ಬೆಳಿಗ್ಗೆ 8:00 - ದ್ವಿತೀಯ ಕಲಾಪೂಜೆ, ಶಿರ‍ಡಿ ಸಾಯಿಬಾಬಾ ಬಿಂಬ ಯಂತ್ರ ಸ್ಥಾಪನೆ, ಸಹಸ್ರನಾಮ ಹೋಮ, ಪಾರಾಯಣ, ಭಜನೆ, ದೀಪಾರಾಧನೆ, ಅನ್ನದಾನ.

ಸಂಜೆ 5:00 - ತೃತೀಯ ಕಲಾಪೂಜೆ, ಭಜನೆ, ಪಾರಾಯಣ, ಬಿಂಬ ಸಂಸ್ಕಾರ ಹೋಮ, ದೀಪಾರಾಧನೆ.

31ನೇ ಮೇ 2012, ಗುರುವಾರ

ಬೆಳಿಗ್ಗೆ 5:00 - ಚತುರ್ಥ ಕಲಾಪೂಜೆ, ಭಜನೆ, ಪಾರಾಯಣ,ಬಿಂಬ ಸಂಸ್ಕಾರ ಹೋಮ, ದೀಪಾರಾಧನೆ.

ಬೆಳಿಗ್ಗೆ 7:30 - ಕುಂಭದ ಮೆರವಣಿಗೆ.

ಬೆಳಿಗ್ಗೆ 8:00 - ವಿಮಾನ ಮಹಾ ಕುಂಭಾಭಿಷೇಕ

ಬೆಳಿಗ್ಗೆ 8:15 - ಮುಲಸ್ಥಾನ ಗುರುಪೂಜೆ, ಕುಂಭಾಭಿಷೇಕ, ದಶದರ್ಶನ, ದೀಪಾರಾಧನೆ.

ಬೆಳಿಗ್ಗೆ 9:00 - ಅನ್ನದಾನ.

ಕುಂಭಾಭಿಷೇಕ ಹಾಗೂ ಮೇಲಿನ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶ್ರೀ.ಟಿ.ಎಸ್. ಕಾಳಿದಾಸ ಶಿವಾಚಾರ್ಯರ್ ನೇತೃತ್ವದಲ್ಲಿ  ನೆಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು  ದೇವಾಲಯದ ಟ್ರಸ್ಟ್ ನಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ನೀಡಲಾಗಿದೆ:

ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿ ಸಾಯಿ ಮಂದಿರ
ಅರುಳ್ ಮಿಗು ಶ್ರೀ ಮನೋಮಣಿಯಮ್ಮಾಳ್ ಸಮೇತ ಪಂಚಮುಖಿ ಲಿಂಗೇಶ್ವರ ಆಲಯಂ,
ನಂ.18, ಎನ್.ಆರ್.ಟಿ.ರಸ್ತೆ,
ರಾಯಪುರಂ ರೈಲ್ವೇ ನಿಲ್ದಾಣ ಹಾಗೂ ಕ್ಲೈವ್ ಬ್ಯಾಟರಿ ಹತ್ತಿರ,
ಹೊಸ ಪ್ಲೈ ಓವರ್ ಕೆಳಗಡೆ, ರಾಯಪುರಂ, ಚನ್ನೈ - 600 013.
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಎಮ್.ಚಕ್ರಪಾಣಿ
ದೂರವಾಣಿ: +91 94447 10881 / +91 95001 11812
ಇಮೇಲ್: omsairampackingservice@gmail.com


ಕನ್ನಡ ಅನುವಾದ:  ಶ್ರೀಕಂಠ ಶರ್ಮ
ಭರವಸೆಯ ಹಿಂದಿ ಚಿತ್ರನಟ ಶ್ರಿ.ರಿತೇಶ್ ದೇಶಮುಖ್ ಮತ್ತು ಶ್ರೀಮತಿ.ಜೆನೆಲಿಯಾ ಡಿಸೋಜ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭರವಸೆಯ ಹಿಂದಿ ಚಿತ್ರನಟ ಶ್ರಿ.ರಿತೇಶ್ ದೇಶಮುಖ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಜೆನೆಲಿಯಾ ಡಿಸೋಜ ರವರು ಇದೇ ತಿಂಗಳ 29ನೇ ಮೇ 2012, ಮಂಗಳವಾರ ದಂದು ಶಿರ‍ಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.


 ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, May 27, 2012

ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ನೃತ್ಯ ಶಿಕ್ಷಕ ಹಾಗೂ ಸುಪ್ರಸಿದ್ಧ ಚಾವಡಿ ಉತ್ಯವದ ನೃತ್ಯ ಆಯೋಜಕ - ಶ್ರೀ.ಕದಂ ಗೋರಕ್ಷ ಪಂಢರಿನಾಥ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನೆಡೆಸುತ್ತಿರುವ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯಲ್ಲಿ ನೃತ್ಯ ಶಿಕ್ಷಕರು.ಇವರು ಉತ್ತಮ ಗಾಯಕರು ಹಾಗೂ ನೃತ್ಯಪಟುಗಳೂ ಆಗಿರುತ್ತಾರೆ. ಇವರು 7ನೇ ಸೆಪ್ಟೆಂಬರ್ 1963 ರಂದು ಮಹಾರಾಷ್ಟ್ರದ ಅಹಮದ್ ನಗರದಲ್ಲಿ ದಿವಂಗತ ಶ್ರೀ.ಪಂಢರಿನಾಥ ಹಾಗೂ ದಿವಂಗತ ಶ್ರೀಮತಿ.ಸೋನು ಬಾಯಿಯವರ ಮಗನಾಗಿ ಜನ್ಮ ತಳೆದರು.

ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಅಹಮದ್ ನಗರದ ಪ್ರಗತ್ ಕಲಾ ಮಹಾವಿದ್ಯಾಲಯದಿಂದ ಕಲಾ ಮಾಸ್ಟರ್ ಡಿಪ್ಲೋಮಾ ಗಳಿಸಿರುತ್ತಾರೆ. ಪ್ರಸ್ತುತ ಇವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನೆಡೆಸುತ್ತಿರುವ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯಲ್ಲಿ ನೃತ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಮತ್ತು ಇವರ ಧರ್ಮಪತ್ನಿ ಶ್ರೀಮತಿ.ಸುನಂದಾ ರವರು ಕಳೆದ ೩೦ ವರ್ಷಗಳಿಂದಲೂ ಪ್ರತಿ ಗುರುವಾರ, ವಿಶೇಷ ಉತ್ಸವದ ಸಂದರ್ಭಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ವತಿಯಿಂದ ನಡೆಸುವ ಜಗತ್ ಪ್ರಸಿದ್ಧ "ಚಾವಡಿ ಉತ್ಸವ" ದಲ್ಲಿ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳು ಮಾಡುವ ನೃತ್ಯದ ಮೇಲ್ವಿಚಾರಣೆಯನ್ನು ಅತ್ಯಂತ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಶ್ರೀ. ಕದಂ ಗೋರಕ್ಷ ಪಂಢರಿನಾಥ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಸುನಂದಾ ರವರು ಪ್ರತಿ ಗುರುವಾರ ಸಂಜೆ 5 ರಿಂದ 6 ರವರೆಗೆ ಸುಮಾರು 125 ಕ್ಕೂ ಹೆಚ್ಚು ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಭಜನೆ, ಹಾಡುಗಳು ಹಾಗೂ ನೃತ್ಯವನ್ನು ಹೇಳಿಕೊಡುತ್ತಾರೆ. ಅಲ್ಲದೆ, ಉತ್ಸವದ ಸಂದರ್ಭಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ, ಆಯಾ ಸಂದರ್ಭಕ್ಕೆ ತಕ್ಕಂತೆ ವೇಷಭೂಷಣಗಳನ್ನು ಮಕ್ಕಳಿಗೆ ಹಾಕಿ ಅವರನ್ನು ಅಣಿ ಮಾಡುತ್ತಾರೆ. ಅಲ್ಲದೆ, ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಲ್ಲಿ ನೆಡೆಯುವ ಜಗತ್ ಪ್ರಸಿದ್ಧ "ಚಾವಡಿ ಉತ್ಸವ" ದಲ್ಲಿ ಮಕ್ಕಳ ಹತ್ತಿರವೇ ಇದ್ದು ಮಾರ್ಗದರ್ಶನ ಮಾಡುತ್ತಾರೆ.

ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳು ಪ್ರತಿ ಗುರುವಾರ ಸಂಜೆ 7 ಗಂಟೆಗೆ ಸರಿಯಾಗಿ ಶಿರಡಿಯ ಸಮಾಧಿ ಮಂದಿರದ ಮಧ್ಯದ ಹಾಲ್ ನಲ್ಲಿ ಸೇರಿ ನೃತ್ಯವನ್ನು ಆರಂಭಿಸುತ್ತಾರೆ. ಸುಮಾರು 8:30 ಕ್ಕೆ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಪ್ರಾರಂಭವಾಗುತ್ತದೆ. ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಸಾಯಿಬಾಬಾರವರಿಗೆ ಆರತಿ ಮಾಡಲಾಗುತ್ತದೆ. ನಂತರ ಉತ್ಸವವು ಚಾವಡಿಯಿಂದ ಹೊರಟು ಶಿರಡಿ ಗ್ರಾಮದ ಪ್ರದಕ್ಷಿಣೆ ಮಾಡಿದ ನಂತರ ಪುನಃ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಹೀಗೆ ಸುಮಾರು 3 ಗಂಟೆಯ ಕಾಲ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಸತತ 3 ಗಂಟೆಗಳ ಕಾಲ ಮಕ್ಕಳು ವಿವಿಧ ಭಜನೆಗಳಿಗೆ, ಹಾಡುಗಳಿಗೆ ಎಡೆಬಿಡದೆ ನೃತ್ಯ ಮಾಡುತ್ತಾರೆ. ಶ್ರೀ ಕದಂ ಮಾಸ್ಟರ್ ರವರ ಮಾರ್ಗದರ್ಶನದಲ್ಲಿ ನೃತ್ಯ ಮಾಡುವ ಆ ಎಳೆಯ ಮಕ್ಕಳ ನೃತ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಉತ್ಪ್ರೇಕ್ಷೆಯಲ್ಲ!!! 



ಅಷ್ಟೇ ಅಲ್ಲದೇ, 1991 ನೇ ಇಸವಿಯಿಂದ ಪ್ರತಿದಿನ ಬೆಳಗಿನ ಜಾವ 1000 ಕ್ಕೂ ಹೆಚ್ಚು ಸಾಯಿಭಕ್ತರ ಮೊಬೈಲ್ ಗಳಿಗೆ  ಸಾಯಿಬಾಬಾರವರ ಅತ್ಯುತ್ತಮ ಸಂದೇಶಗಳನ್ನು ತಪ್ಪದೇ ಕಳುಹಿಸುತ್ತಾರೆ. 




ಪ್ರತಿಯೊಬ್ಬ ಸಾಯಿಭಕ್ತರು ತಮ್ಮ ನಿತ್ಯ ಜೀವನದಲ್ಲಿ ಶಿರಡಿ ಸಾಯಿಬಾಬಾರವರ ಅತ್ಯುತ್ತಮ ಸಂದೇಶವಾದ "ಶ್ರದ್ಧೆ" ಮತ್ತು "ಸಬೂರಿ" ಯನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಕೇಳಿಕೊಳ್ಳುತ್ತಾರೆ. 



ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಸುನಂದಾ ಹಾಗೂ ತಮ್ಮ ಇಬ್ಬರು ಮಕ್ಕಳಾದ ಶ್ರೀ.ಪ್ರಸಾದ್ ಹಾಗೂ ಹೃಷೀಕೇಷ್ ರವರೊಂದಿಗೆ ಶಿರಡಿಯ ತಮ್ಮ ಸ್ವಗೃಹದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ. 






ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ:

ನಂ.11, ಚಾರಿ, ನೀಮಗಾವ್ ವಾಡಿ,
ಹೆಲಿಪ್ಯಾಡ್ ರಸ್ತೆ, ಶಿರಡಿ,
ರಹತಾ ತಾಲ್ಲೂಕ್, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.

ದೂರವಾಣಿ ಸಂಖ್ಯೆ:

+91 99750  13888

ಇ-ಮೈಲ್ ವಿಳಾಸ:

kadamgoraksha@gmail.com

ಚಾವಡಿ ಉತ್ಸವದ ನೃತ್ಯದ ವೀಡಿಯೋಗಳು: 

















ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, May 25, 2012

ತಮಿಳು ಶ್ರೀಸಾಯಿ ಸಚ್ಚರಿತ್ರೆಯ ಅನುವಾದಕ ಶ್ರೀ.ಪಿ.ಅಯ್ಯಪ್ಪನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಪಿ.ಅಯ್ಯಪ್ಪನ್ ರವರು ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯನ್ನು ತಮಿಳು ಭಾಷೆಯಲ್ಲಿ ಅನುವಾದ ಮಾಡಿರುತ್ತಾರೆ. ಇವರು ಈ ಮಹಾನ್ ಗ್ರಂಥವನ್ನು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದಿರುತ್ತಾರೆ.



ಈ ಸಾಯಿ ಸಚ್ಚರಿತ್ರೆಯಲ್ಲಿ ಲೇಖಕರು ತಿರುಪ್ಪಾವೈನ ನುಡಿಗಟ್ಟುಗಳನ್ನು ಬಳಸಿರುವುದು ಒಂದು ವಿಶೇಷ.ಲೇಖಕರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಎಲ್ಲರಿಗೂ ಅನುಕೂಲವಾಗಲೆಂದು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದು ಆಸಕ್ತಿ ಇರುವ ಸಾಯಿಭಕ್ತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸಚ್ಚರಿತ್ರೆಯನ್ನು ಓದುವಾಗ  ಮತ್ತು ಕೇಳುವಾಗ ಅನೇಕ ಕಡೆ  ತಾವು  ಅತ್ಯಂತ  ಭಾವುಕರಾಗಿ  ಪುನಃ  ಅದೇ  ಭಾಗವನ್ನು  ಮತ್ತೆ ಮತ್ತೆ ಕೇಳಿದ್ದಾಗಿ ಹೇಳುವ ಲೇಖಕರು ಸಾಯಿ ಭಕ್ತರಿಗೂ  ಕೂಡ  ಅದೇ  ರೀತಿ  ಅನುಭವವಾಗುವುದರಲ್ಲಿ  ಯಾವುದೇ ಸಂಶಯ  ಇಲ್ಲ  ಎಂದು  ನುಡಿಯುತ್ತಾರೆ. ಈ ಪುಸ್ತಕವು 900 ಪುಟಗಳನ್ನು ಮತ್ತು 53 ಅಧ್ಯಾಯಗಳನ್ನು ಹೊಂದಿರುತ್ತದೆ.



ಶ್ರೀ.ಪಿ.ಅಯ್ಯಪ್ಪನ್ ರವರು ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಅರಿಯನಾಯಗಪುರಂ ನಲ್ಲಿ 11ನೇ ಜೂನ್ 1943 ರಂದು ದಿವಂಗತ ಶ್ರೀ.ಪಿಚ್ಚಯ್ಯ ಮತ್ತು ಶ್ರೀಮತಿ.ಈಶ್ವರಿ ಅಮ್ಮಾಳ್ ರವರ ಮಗನಾಗಿ ಜನಿಸಿರುತ್ತಾರೆ.ಇವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ  ಪದವಿಯನ್ನು  ಗಳಿಸಿರುತ್ತಾರೆ.ಅಲ್ಲದೇ, ವಿಕಿರಣ ಸುರಕ್ಷತೆ ಮತ್ತು ಡೋಸಿಮೀಟರ್ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಿರುತ್ತಾರೆ.ಇವರು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ.

ಇವರು ತಮ್ಮ ಆಧ್ಯಾತ್ಮಿಕ ಗುರುಗಳಾದ ಗುರೂಜಿ ಶ್ರೀ.ಎ.ಎಸ್.ರಾಘವನ್ ರವರ ಬಳಿ 1980 ನೇ ಇಸವಿಯಲ್ಲಿ  ತಿರುಪ್ಪಾವೈ ನುಡಿಗಟ್ಟುಗಳ ಗಾಯನವನ್ನು ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಿರುತ್ತಾರೆ. 

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ತಾಯಮ್ಮಾಳ್ ರವರೊಂದಿಗೆ ಚನ್ನೈನಲ್ಲಿರುವ ತಂಬಾರಮ್ ಪಶ್ಚಿಮದ ಸ್ವಗೃಹದಲ್ಲಿ  ಸುಖೀಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು  ಅವರುಗಳಿಗೆ ವಿವಾಹವಾಗಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಪಿ.ಅಯ್ಯಪ್ಪನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 


ಶ್ರೀ.ಪಿ.ಅಯ್ಯಪ್ಪನ್ - ಲೇಖಕರು, 
ಎಸ್-1, ರಾವ್ ಶಂಕರ ಅಪಾರ್ಟ್ಮೆಂಟ್ಸ್,  2ನೇ ಮಹಡಿ,
37, ಕಾಮರಾಜಾರ್ ರಸ್ತೆ, 
ತಂಬಾರಮ್ ಪಶ್ಚಿಮ, 
ಚನ್ನೈ- 600 045, 
ತಮಿಳುನಾಡು, ಭಾರತ, 
ದೂರವಾಣಿ ಸಂಖ್ಯೆಗಳು: +91 44 2226 3871 / +91 94440 49061  
ಇ ಮೇಲ್ ವಿಳಾಸ: p.ayappan@gmail.com  


 ಕನ್ನಡ ಅನುವಾದ: ಶ್ರೀಕಂಠ ಶರ್ಮ 
ತ್ರಿಪುರ ರಾಜ್ಯಪಾಲರ ಶಿರಡಿ ಭೇಟಿ - ಕೃಪೆ : ಸಾಯಿಅಮೃತಧಾರಾ.ಕಾಂ 

ತ್ರಿಪುರ ರಾಜ್ಯಪಾಲರಾದ ಡಾ.ಡಿ.ವೈ.ಪಾಟೀಲ್ ರವರು ಇದೇ ತಿಂಗಳ 25ನೇ ಮೇ 2012, ಶುಕ್ರವಾರ ದಂದು  ಶಿರಡಿಗೆ  ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  



ಕನ್ನಡ ಅನುವಾದ:  ಶ್ರೀಕಂಠ ಶರ್ಮ 

Saturday, May 19, 2012

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದ ವತಿಯಿಂದ 2ನೇ ವಾರ್ಷಿಕೋತ್ಸವದ ಆಚರಣೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರವು ಇದೇ ತಿಂಗಳ 25, 26 ಮತ್ತು 27ನೇ ಮೇ 2012 ರಂದು ತನ್ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತೆ ಇವೆ:

25ನೇ ಮೇ 2012, ಶುಕ್ರವಾರ  

ಸಂಜೆ 6 ರಿಂದ 8 ರವರೆಗೆ   
 
ರಮಣ ಮಹರ್ಷಿ ಅಂಧರ ಶಾಲೆ ಹಾಗೂ ಸಮರ್ಥನಂ ಟ್ರಸ್ಟ್ ನ ಮಕ್ಕಳಿಂದ ನೃತ್ಯ ಕಾರ್ಯಕ್ರಮ. ನೃತ್ಯ ನಿರ್ದೇಶನ - ರಕ್ಷಾ ಡ್ಯಾನ್ಸ್ ಗ್ರೂಪ್.

ರಾತ್ರಿ 8 ರಿಂದ 8:30 ರವರೆಗೆ 

ಆರತಿ ಮತ್ತು ಪ್ರಸಾದ ವಿನಿಯೋಗ. 

26ನೇ ಮೇ 2012, ಶನಿವಾರ 

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ 

ಅಖಂಡ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ (ಎಲ್ಲಾ ಭಾಷೆಗಳಲ್ಲಿ).

ಸಂಜೆ 6 ರಿಂದ 10 ಗಂಟೆಯವರೆಗೆ 

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದಿಂದ ಬಿಟಿಎಂ ಬಡಾವಣೆಯಲ್ಲಿರುವ ಶ್ರೀ ಸಾಯಿಬಾಬಾ ಆನಂದ  ಆಶ್ರಮದ  ವರೆಗೆ ಮತ್ತು ಪುನಃ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದವರೆಗೆ  ಪಲ್ಲಕ್ಕಿ ಉತ್ಸವ.

ರಾತ್ರಿ 10 ಗಂಟೆಗೆ 
 
ಆರತಿ ಮತ್ತು ಪ್ರಸಾದ ವಿನಿಯೋಗ. 
 
27ನೇ ಮೇ 2012, ಭಾನುವಾರ 

ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ 

ಅಖಂಡ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮ. ನಾಮಜಪ ಮುಕ್ತಾಯವಾದ ನಂತರ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದ ಆವರಣದಲ್ಲಿ ಪಲ್ಲಕ್ಕಿ ಉತ್ಸವ.
 
ರಾತ್ರಿ 8 ರಿಂದ 8:30 ರವರೆಗೆ 
 
ಆರತಿ ಮತ್ತು ಪ್ರಸಾದ ವಿನಿಯೋಗ.
 

ಸ್ಥಳ: 
 
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ, 3ನೇ ಮಹಡಿ, (ಕೆಫೆ ಕಾಫಿ ಡೇ ಮೇಲೆ)
ನಂ.1481, ಸೌತ್ ಎಂಡ್ "ಬಿ" ಅಡ್ಡರಸ್ತೆ, 28ನೇ ಮುಖ್ಯರಸ್ತೆ, 
9ನೇ ಬ್ಲಾಕ್, ರಾಗಿಗುಡ್ಡ ದೇವಾಲಯದ ಬಳಿ, 
ಜಯನಗರ, ಬೆಂಗಳೂರು-560 069.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀಮತಿ.ಇಂದು ಮತ್ತು ಶ್ರೀ.ಆರ್.ಸತೀಶ್ 
ದೂರವಾಣಿ ಸಂಖ್ಯೆ: +91 93412 64696 
ಮಾರ್ಗಸೂಚಿ: ಈಸ್ಟ್ ಎಂಡ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ಧ್ಯಾನಮಂದಿರ ಸಿಗುತ್ತದೆ. 


ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಧ್ಯಾನ ಮಂದಿರದ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, May 18, 2012

ಶ್ರೀ ಸಾಯಿ ಪ್ರಚಾರ ಪರಿವಾರ, ಚೆನ್ನೈ ನ ವತಿಯಿಂದ ಶಿರಡಿ ಸಾಯಿಬಾಬಾ ಚಿತ್ರಾ ಪೂರ್ಣಿಮಾ ಉತ್ಸವ -  ಕೃಪೆ: ಸಾಯಿಅಮೃತಧಾರಾ.ಕಾಂ 

ಭಕ್ತರು ಕೋರಿಕೆಗಳನ್ನು ಈಡೇರಿಸುತ್ತಿರುವ ಕಲಿಯುಗದ ಕಾಮಧೇನು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚೆನ್ನೈನ  ಶ್ರೀ ಸಾಯಿ ಪ್ರಚಾರ ಪರಿವಾರವು ಇದೇ  ತಿಂಗಳ 20ನೇ ಮೇ 2011, ಭಾನುವಾರ ದಂದು ಚೆನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಪೂರ್ಣಿಮಾ ಉತ್ಸವವನ್ನು ಹಮ್ಮಿಕೊಂಡಿರುತ್ತದೆ. 

ಬೆಳಗಿನಿಂದ ಸಂಜೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಪ್ರಚಾರ ಪರಿವಾರದ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮದ ವಿವರ ಮತ್ತು ನಡೆಯುವ ಸ್ಥಳದ ವಿವರವನ್ನು ಈ ಕೆಳಗೆ ಕೊಡಲಾಗಿದೆ.

ಕಾರ್ಯಕ್ರಮದ ಸಮಯ: 
 
ಬೆಳಿಗ್ಗೆ 6:00 ರಿಂದ ಸಂಜೆ 6:30 ರವರೆಗೆ 

ಕಾರ್ಯಕ್ರಮ ನಡೆಯುವ ಸ್ಥಳ: 
 
ಪದ್ಮಾರಾಂ ಮಹಲ್ (ಹಳೆ ರಾಮ್ ಚಿತ್ರಮಂದಿರ), 
83, ಆರ್ಕಾಟ್ ರಸ್ತೆ, 
ಕೋಡಮ್ಬಾಕ್ಕಂ, ಚೆನ್ನೈ - 24.
ದೂರವಾಣಿ: +91 44 6544 9766 / +91 98408 18595 


ಕಾರ್ಯಕ್ರಮದ ವಿವರಗಳು: 
 
6.00 AM – ಮಹಾ ಗಣಪತಿ ಪೂಜೆ, ಶ್ರೀ ಸಾಯಿನಾಥ ಆವಾಹನೆ.
6.30 AM – ಉಚಿತ ವಿವಾಹ ಕಾರ್ಯಕ್ರಮ.
7.00 AM – ಶ್ರೀ ಸಾಯಿ ಸತ್ಯವ್ರತ ಪೂಜೆ.
9.00 AM – ನಾಮ ಸಂಕೀರ್ತನೆ.
12.00 PM – ಆರತಿ 
12.30 PM – ಅನ್ನದಾನ ಕಾರ್ಯಕ್ರಮ. 
02.00 PM -  ಮಹಿಳೆಯರಿಗೆ ಸೀರೆ, ಕುಂಕುಮ ವಿತರಣೆ.
5.00 PM – ನಾಮ ಸಂಕೀರ್ತನ ನಾಟ್ಯಾಂಜಲಿ ಕಾರ್ಯಕ್ರಮ.
6.00 PM – ಆರತಿ.
6.30 PM – ಪ್ರಸಾದ ವಿತರಣೆ.

ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸಬಹುದು. 

ಶ್ರೀ ಸಾಯಿ ಪ್ರಚಾರ ಪರಿವಾರ 
11/11, ಆಂಡವರ ನಗರ, 6ನೇ ರಸ್ತೆ, ಕೋಡಂಬಾಕಂ, ಚೆನ್ನೈ-24.
ದೂರವಾಣಿ: +91 44 6544 9766 / +91 98408 18595 
ಅಂತರ್ಜಾಲ ತಾಣ: www.srisaipracharpariwar.org
 
ಕನ್ನಡ ಅನುವಾದ:  ಶ್ರೀಕಂಠ ಶರ್ಮ 

Saturday, May 12, 2012

ತಮಿಳು ಶ್ರೀ ಸಾಯಿ ಸಚ್ಚರಿತ್ರೆ ಧ್ವನಿಸುರಳಿ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ 



ತಮಿಳು ಮಾತನಾಡುವ ಶಿರಡಿ ಸಾಯಿಬಾಬಾ ಭಕ್ತರಿಗೊಂದು ಸಿಹಿ ಸುದ್ದಿ! ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯು ಈಗ ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರಬಂದಿದೆ. 

ಈ ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ಯನ್ನು ಕಳೆದ ತಿಂಗಳು 14ನೇ ಏಪ್ರಿಲ್ 2012,ಶನಿವಾರ ದಂದು ಚನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. 



ಈ ತಮಿಳು ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದವನ್ನು ಚನ್ನೈನ ಶ್ರೀ.ಪಿ.ಅಯ್ಯಪ್ಪನ್ ರವರು ಮಾಡಿರುತ್ತಾರೆ. ಈ ಸಾಯಿ  ಸಚ್ಚರಿತ್ರೆಯಲ್ಲಿ ಲೇಖಕರು ತಿರುಪ್ಪಾವೈನ ನುಡಿಗಟ್ಟುಗಳನ್ನು ಬಳಸಿರುವುದು ಒಂದು ವಿಶೇಷ.ಲೇಖಕರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಎಲ್ಲರಿಗೂ ಅನುಕೂಲವಾಗಲೆಂದು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದು ಆಸಕ್ತಿ ಇರುವ ಸಾಯಿಭಕ್ತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸಚ್ಚರಿತ್ರೆಯನ್ನು ಓದುವಾಗ  ಮತ್ತು ಕೇಳುವಾಗ ಅನೇಕ ಕಡೆ  ತಾವು  ಅತ್ಯಂತ  ಭಾವುಕರಾಗಿ  ಪುನಃ  ಅದೇ  ಭಾಗವನ್ನು  ಮತ್ತೆ ಮತ್ತೆ ಕೇಳಿದ್ದಾಗಿ ಹೇಳುವ ಲೇಖಕರು ಸಾಯಿ ಭಕ್ತರಿಗೂ  ಕೂಡ  ಅದೇ  ರೀತಿ  ಅನುಭವವಾಗುವುದರಲ್ಲಿ  ಯಾವುದೇ ಸಂಶಯ  ಇಲ್ಲ  ಎಂದು  ನುಡಿಯುತ್ತಾರೆ. ಈ ಪುಸ್ತಕವು 900 ಪುಟಗಳನ್ನು ಮತ್ತು 53 ಅಧ್ಯಾಯಗಳನ್ನು ಹೊಂದಿರುತ್ತದೆ.

ಸಾಯಿ ಭಕ್ತರು ಈ ತಮಿಳು ಗದ್ಯ ಹಾಗೂ ಆಡಿಯೋವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಕೇಳಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಲೇಖಕರು ಮನವಿ ಮಾಡಿಕೊಳ್ಳುತ್ತಾರೆ. ಅಲ್ಲದೇ, ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಲಿಸಿದ ನಂತರ ಭಕ್ತರು ಅವರ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದು  ಲೇಖಕರು ಮನವಿ ಮಾಡಿಕೊಳ್ಳುತ್ತಾರೆ.

ಲೇಖಕರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ಶ್ರೀ.ಪಿ.ಅಯ್ಯಪ್ಪನ್ - ಲೇಖಕರು, 
ಎಸ್-1, ರಾವ್ ಶಂಕರ ಅಪಾರ್ಟ್ಮೆಂಟ್ಸ್, 
37, ಕಾಮರಾಜಾರ್ ರಸ್ತೆ, 
ತಂಬಾರಮ್ ಪಶ್ಚಿಮ, 
ಚನ್ನೈ- 600 045, 
ತಮಿಳುನಾಡು, ಭಾರತ, 
ದೂರವಾಣಿ ಸಂಖ್ಯೆಗಳು: +91 44 2226 3871 / +91 94440 49061 

ಕನ್ನಡ ಅನುವಾದ: ಶ್ರೀಕಂಠ ಶರ್ಮ 








ಅನಾಮಧೇಯ ಸಾಯಿ ಭಕ್ತರಿಂದ ಶಿರಡಿ ಸಾಯಿಬಾಬನಿಗೆ  ಚಿನ್ನದ ಕಿರೀಟದ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ

ಅನಾಮಧೇಯ ಸಾಯಿ ಭಕ್ತರೊಬ್ಬರು ಇದೇ  ತಿಂಗಳ 12ನೇ ಮೇ 2012, ಶನಿವಾರ ದಂದು 570 ಗ್ರಾಂ ತೂಕದ ಹದಿನಾಲ್ಕು  ಲಕ್ಷ ಎಂಬತ್ತೆಂಟು ಸಾವಿರದ ಎಂಟನೂರಾ ನಲವತ್ತು ರುಪಾಯಿ (14,88,840/- ರುಪಾಯಿ) ಬೆಲೆಬಾಳುವ ಚಿನ್ನದ ಕಿರೀಟವನ್ನು  ಸಾಯಿಬಾಬನಿಗೆ ಕಾಣಿಕೆಯಾಗಿ ನೀಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ 
 

Friday, May 11, 2012

ಬಹುಮುಖ ಪ್ರತಿಭೆಯ ಸಾಯಿಭಜನ ಗಾಯಕ ಶ್ರೀ.ಜಯದೇವ ಚಟರ್ಜಿ (ಜಾಯ್)  - ಕೃಪೆ: ಸಾಯಿಅಮೃತಧಾರಾ.ಕಾಂ 


ಉದಯೋನ್ಮುಖ ಸಾಯಿಭಜನೆ ಮತ್ತು ಗಜಲ್ ಗಾಯಕರಾದ ಶ್ರೀ.ಜಯದೇವ ಚಟರ್ಜಿಯವರು 14ನೇ  ಫೆಬ್ರವರಿ 1975  ರಂದು ಉತ್ತರಪ್ರದೇಶದ ಲಕ್ನೌನಲ್ಲಿ ಸಂಗೀತ ಪ್ರೇಮಿಗಳ ವಂಶದಲ್ಲಿ ಜನಿಸಿದರು. ಇವರ ತಂದೆ ಶ್ರೀ.ರಾಜ್ ಕುಮಾರ್ ಚಟರ್ಜಿ ಮತ್ತು  ತಾಯಿ ಶ್ರೀಮತಿ.ಶಿಬಾನಿ ಚಟರ್ಜಿ. ಇವರ ಮನೆಯವರು ಮತ್ತು ಇವರ ಹತ್ತಿರದ ಸ್ನೇಹಿತರು ಪ್ರೀತಿಯಿಂದ ಇವರನ್ನು ಜಾಯ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಬಹುಮುಖ ಪ್ರತಿಭೆಯ ಶ್ರೀ.ಜಯದೇವ ಚಟರ್ಜಿಯವರು ಪತ್ರಕರ್ತ, ರೇಖಾಚಿತ್ರಕಾರ, ಫ್ಯಾಷನ್ ಡಿಸೈನರ್, ಸಂಗೀತ ಸಂಯೋಜಕರು, ಗಾಯಕರು ಮತ್ತು  ಗಾಯನ  ತರಬೇತುದಾರರಾಗಿ  ತಮ್ಮ  ನಿತ್ಯ  ಬದುಕಿನಲ್ಲಿ  ವಿವಿಧ  ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 


ಶ್ರೀ ಸತ್ಯ ಸಾಯಿಬಾಬಾ ರವರ ಜೊತೆ ಬಾಲ್ಯದ ದಿನಗಳಲ್ಲಿ 


ಇವರು ತಮ್ಮ ಬಾಲ್ಯದಲ್ಲಿ ಸಂಗೀತವನ್ನು ತಮ್ಮ ತಂದೆಯವರು ಹಾಗೂ ಜ್ಯೂನಿಯರ್ ಕಿಶೋರ್ ಕುಮಾರ್ಎಂದು  ಖ್ಯಾತಿಯನ್ನು ಪಡೆದಿದ್ದ ಶ್ರೀ.ರಾಜ್ ಕುಮಾರ್ ಚಟರ್ಜಿಯವರ ಬಳಿ ಕಲಿತರು. ನಂತರದ ದಿನಗಳಲ್ಲಿ ಬನಾರಸ್ ಘರಾನದ  ಖ್ಯಾತನಾಮರಾದ ಪಂಡಿತ್ ಶ್ರೀ.ರಾಮೇಶ್ವರ ಪ್ರಸಾದ್ ಮಿಶ್ರಾರವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ಹೀಗೆ ಅಭ್ಯಾಸ ಮಾಡುತ್ತಾ ಕೇವಲ ತಮ್ಮ 10ನೇ ವಯಸ್ಸಿನಲ್ಲೇ ಬಾಲಕ ಜಯದೇವ ಚಟರ್ಜಿಯವರು ಒಳ್ಳೆಯ  ಗಾಯಕರಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು. ಇವರು ತಮ್ಮ ಭಜನೆಯ ಅಭ್ಯಾಸವನ್ನು ಖ್ಯಾತ ಭಜನ ಗಾಯಕರಾದ ಭಜನ ಸಾಮ್ರಾಟ್ ಎಂದೇ ಖ್ಯಾತನಾಮರಾದ ಶ್ರೀ.ಅನುಪ್ ಜಲೋಟರವರ ಬಳಿ ಹಾಗೂ ಗಜಲ್ ಗಾಯನವನ್ನು  ಖ್ಯಾತ  ಗಜಲ್ ಗಾಯಕರಾದ ದಿವಂಗತ  ಶ್ರೀ.ಜಗಜಿತ್  ಸಿಂಗ್ ರವರ ಬಳಿ ಕಲಿತಿದ್ದಾರೆ..

ಜೈದೇವ್ ರವರು ಶ್ರೀ.ಅನುಪ್ ಜಲೋಟರವರೊಂದಿಗೆ 

ಇವರು ಗುಲ್ಷನ್ ಕುಮಾರ್ ಪ್ರಶಸ್ತಿ, ಇ-ಟಿವಿ ಪ್ರಶಸ್ತಿ ಅಲ್ಲದೇ ಇನ್ನು ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಸಂಗೀತ ಜಗತ್ತಿನ ಖ್ಯಾತ ನಾಮರಾದ ಕುಮಾರಿ.ಮಹಾಲಕ್ಷ್ಮಿ ಅಯ್ಯರ್, ಶ್ರೀ.ಅನುಪ್ ಜಲೋಟ, ಶ್ರೀಮತಿ.ಆಶಾ ದರ್ಬಾರ್ ಪಾರಸ್ ಜೈನ್ ಮತ್ತು ಇನ್ನು ಹಲವಾರು ಖ್ಯಾತ ಗಾಯಕರೊಂದಿಗೆ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, 2011ನೇ ಇಸವಿಯಲ್ಲಿ 22ನೇ ಏಪ್ರಿಲ್ 2011 ರಿಂದ 28ನೇ ಆಗಸ್ಟ್ 2011 ರವರೆಗೆ ಮಲೇಶಿಯಾ ದೇಶದಾದ್ಯಂತ ಪ್ರವಾಸ ಮಾಡಿ ಅನೇಕ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಜೈದೇವ್ ರವರು ಶ್ರೀ.ಪಾರಸ್ ಜೈನ್ ರವರೊಂದಿಗೆ 

ಜೈದೇವ್ ರವರು ಕುಮಾರಿ.ಮಹಾಲಕ್ಷ್ಮಿ ಅಯ್ಯರ್ ರವರೊಂದಿಗೆ 

ಜೈದೇವ್ ರವರು ಶ್ರೀ.ಸೋನು ಸೂದ್ ರವರೊಂದಿಗೆ 

ಪ್ರಸ್ತುತ ಇವರು ಸಮ್ಮೇಳನ ಶೈಲಿಯಲ್ಲಿ ಗಜಲ್ ಅಲ್ಬಮ್ ನ್ನು ತರುವ ಪ್ರಯತ್ನದಲ್ಲಿದ್ದು 2012ನೇ ಇಸವಿಯಲ್ಲಿ ಅಲ್ಬಮ್ ನ್ನು  ಹೊರತರುವ ಇರಾದೆಯನ್ನು ಹೊಂದಿದ್ದಾರೆ. 

ಗಜಲ್, ಭಜನೆ ಮತ್ತು ಚಲನಚಿತ್ರ ಗೀತೆಗಳಿಗೆ ಸಮಾನವಾದ ಮರ್ಯಾದೆಯನ್ನು ನೀಡುವುದನ್ನು ನೋಡಿದಾಗ ನಮಗೆ  ಇವರ ಬಹುಮುಖ ಪ್ರತಿಭೆಯ ಅರಿವಾಗುತ್ತದೆ. 

ವಿವಾಹಿತರಾಗಿರುವ ಇವರು ಪ್ರಸ್ತುತ ಲಕ್ನೌ ನ ತಮ್ಮ ಸ್ವಗೃಹದಲ್ಲಿ ಪತ್ನಿಯೊಂದಿಗೆ ಸುಖೀ ಜೇವನವನ್ನು ನಡೆಸುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ಇವರು ನೀಡಿರುವ ಕೆಲವು ಪ್ರಮುಖ ಕಾರ್ಯಕ್ರಮಗಳ ವಿವರವನ್ನು ಸಾಯಿಭಕ್ತರ ಆವಗಾಹನೆಗಾಗಿ ಈ ಕಳಗೆ 
ನೀಡಲಾಗಿದೆ. 

1. 1993 ರಲ್ಲಿ ಲಕ್ನೌ ನಗರದಲ್ಲಿ ಮೆಹಫಿಲ್ ಏ ಗಜಲ್ ಕಾರ್ಯಕ್ರಮ. 
2. 1996 ರಲ್ಲಿ ನವದೆಹಲಿಯ ಕಾನ್ನಾಟ್ ಹೋಟೆಲ್ ನವರು ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ. 
3. 1996 ರಲ್ಲಿ ನವದೆಹಲಿಯ ಮೌರ್ಯ ಶೇರ್ಟಾನ್ ನವರು ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ.
4. 1997 ರಲ್ಲಿ ನವದೆಹಲಿಯಲ್ಲಿ ಗುಜರಾತ್ ಭೂಕಂಪ ಪೀಡಿತರಿಗಾಗಿ ನಡೆದ ವಿಶೇಷ ಕಾರ್ಯಕ್ರಮ. 
5. 1998 ರಲ್ಲಿ ಡೆಹೆರಾಡೂನ ನಲ್ಲಿ ನಡೆದ ಏಕ್ ಶಾಮ್ ಗಜಲ್ ಕೆ ನಾಮ್ ಕಾರ್ಯಕ್ರಮ. 
6. 1998 ರಲ್ಲಿ ಲಕ್ನೌ ನಗರದ ಹಜರತ ಗಂಜ್ ನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ. 
7. 1997 ರಲ್ಲಿ ನವದೆಹಲಿಯ ತಾಜ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಗಜಲೋ ಕಿ ಶಾಮ್ ಕಾರ್ಯಕ್ರಮ. 
8. 2000 ನೇ  ಇಸವಿಯಲ್ಲಿ ಮುಂಬೈ ನಲ್ಲಿ ನಡೆದ ಆರ್ಟಿಸ್ಟ್ ಆಫ್ ದಿ ಮಿಲಾನಿಯಂ ಕಾರ್ಯಕ್ರಮ. 
9. 2000 ನೇ ಇಸವಿಯಲ್ಲಿ ಮುಂಬೈ ನಲ್ಲಿ ಇಸ್ಕಾನ್ ಆಯೋಜಿಸಿದ್ದ ಭಕ್ತಿ ಸಂಗೀತ ಸಂಧ್ಯಾ ಕಾರ್ಯಕ್ರಮ. 
10.2001ನೇ ಇಸವಿಯಲ್ಲಿ 32ನೇ ಬೆಟಾಲಿಯಾನ್ ಸೈನ್ಯದ ವತಿಯಿಂದ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
11.25ನೇ ಡಿಸೆಂಬರ್ 2001 ರಂದು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಗಜಲ್ ರಾತ್ರಿ ಕಾರ್ಯಕ್ರಮ.
12.2002ನೇ ಇಸವಿಯಲ್ಲಿ ಲಕ್ನೌ  ಕೃಷ್ಣ  ಜನ್ಮಾಷ್ಟಮಿಯ  ಅಂಗವಾಗಿ  ಆಶಿಯಾನಾ  ರೆಸಿಡೆಂಟ್  ಅಸೋಸಿಯೇಶನ್
     ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
13.2002ನೇ ಇಸವಿಯಲ್ಲಿ ನೈನಿಟಾಲ್ ನಲ್ಲಿ ಆಯೋಜಿಸಿದ್ದ ಶಾಮ್ ಏ ಗಜಲ್ ಕಾರ್ಯಕ್ರಮ.
14.2003ನೇ ಇಸವಿಯಲ್ಲಿ ಲಕ್ನೌ ನ ಇಸ್ಕಾನ್ ಕೃಷ್ಣ  ಜನ್ಮಾಷ್ಟಮಿಯ  ಅಂಗವಾಗಿ ಆಯೋಜಿಸಿದ್ದ ಭಜನ
     ಸಂಧ್ಯಾ ಕಾರ್ಯಕ್ರಮ. 
15.ಸೆಪ್ಟೆಂಬರ್ 2004 ರಲ್ಲಿ ಮುಂಬೈ ನ ಧುನ್ ಸಂಸ್ಥೆ ಆಯೋಜಿಸಿದ್ದ ಭಕ್ತಿ ಸಂಗೀತ ಸಮ್ಮೇಳನ ಕಾರ್ಯಕ್ರಮ.
16.9ನೇ ಜುಲೈ 2005 ರಂದು ಸಂಸ್ಕೃತಿ ಕಾರವಾನ್ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮ.
17.2006 ರಲ್ಲಿ ನವದೆಹಲಿಯಲ್ಲಿ ನಡೆದ ಭಜನ ಸಮ್ಮೇಳನ ಕಾರ್ಯಕ್ರಮ.
18.8ನೇ ಫೆಬ್ರವರಿ 2007 ರಂದು ಮಿರ್ಜಾಪುರ್ ನಲ್ಲಿ ನಡೆದ ಗಜಲೋ ಕೇ  ಶಾಮ್ ಜಗಜಿತ್ ಸಿಂಗ್ ಕೇ
     ನಾಮ್ ಕಾರ್ಯಕ್ರಮ. 
19.23ನೇ ನವೆಂಬರ್ 2008 ರಂದು ಫತೇಪುರ್ ಜಿಲ್ಲೆಯ ಖಾಗಾನಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ.
20.19ನೇ ಏಪ್ರಿಲ್ 2008 ರಂದು ಲಕ್ನೌ ನಲ್ಲಿ ನಡೆದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ.
21.16ನೇ ಜೂನ್ 2008 ರಂದು ಅಹಮದಾಬಾದ್ ನಲ್ಲಿ ಧುನ್ ಸಂಸ್ಥೆ ಆಯೋಜಿಸಿದ್ದ ಶಾಮ್ ಏ ಮೆಹಫಿಲ್ ಕಾರ್ಯಕ್ರಮ.
22.2008 ರಲ್ಲಿ ಸೀತಾಪುರ ಮಹೋತ್ಸವದಲ್ಲಿ ನಡೆದ ಶಾಮ್ ಏ ಗಜಲ್ ಕಾರ್ಯಕ್ರಮ.
23.8ನೇ ಫೆಬ್ರವರಿ 2008 ರಂದು ಲಕ್ನೌ ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ಗಜಲೋ ಕೇ
     ಶಾಮ್ ಜಗಜಿತ್ ಸಿಂಗ್ ಕೇ ನಾಮ್ ಕಾರ್ಯಕ್ರಮ.
24.2009ನೇ ಇಸವಿಯಲ್ಲಿ ಸೀತಾಪುರ ಮಹೋತ್ಸವದಲ್ಲಿ ನಡೆದ ಶಾಮ್ ಏ ಗಜಲ್ ಕಾರ್ಯಕ್ರಮ.
25.27ನೇ ನವೆಂಬರ್ 2009 ರಂದು ಲಕ್ನೌ ಮಹೋತ್ಸವದಲ್ಲಿ ನಡೆದ ಭಜನ ಸಂಧ್ಯಾ ಕಾರ್ಯಕ್ರಮ.
26.2ನೇ ಅಕ್ಟೋಬರ್ 2010 ರಂದು ಲಕ್ನೌ ನಲ್ಲಿ ನ್ಯಾಷನಲ್ ಬುಕ್ ಫೇರ್ ನವರು ಆಯೋಜಿಸಿದ್ದ ರವೀಂದ್ರನಾಥ್ ಟಾಕುರ್
     ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.
27.22ನೇ ಏಪ್ರಿಲ್ 2011 ರಿಂದ 28ನೇ ಆಗಸ್ಟ್ 2011 ರವರೆಗೆ ಮಲೇಶಿಯಾ ದೇಶದಾದ್ಯಂತ ಭಜನೆ ಮತ್ತು ಗಜಲ್  
     ಕಾರ್ಯಕ್ರಮ.
28.20ನೇ ಅಕ್ಟೋಬರ್ 2011 ರಂದು ಲಕ್ನೌ ನಲ್ಲಿ ನ್ಯಾಷನಲ್ ಬುಕ್ ಫೇರ್ ನವರು ಆಯೋಜಿಸಿದ್ದ ಪುರಾತನ ಸುಪ್ರಸಿದ್ಧ
     ಗಾಯಕರುಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.
29.16ನೇ ಅಕ್ಟೋಬರ್ 2011 ರಂದು ಉತ್ತರಪ್ರದೇಶದ ಸೀತಾಪುರದಲ್ಲಿ ಆಯೋಜಿಸಿದ್ದ ಜಗಜಿತ್ ಸಿಂಗ್ ರವರಿಗೆ
     ಶ್ರದ್ಧಾಂಜಲಿ ಕಾರ್ಯಕ್ರಮ.

ಶ್ರೀ ಜೈದೇವ್ ರವರ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ  ಪ್ರಕಟವಾಗಿರುವ  ಕೆಲವು  ಪ್ರಶಂಸನೀಯ ಲೇಖನಗಳನ್ನು ಈ ಕೆಳಗೆ  ಲಗತ್ತಿಸಲಾಗಿದೆ:











ಶ್ರೀ.ಜಯದೇವ ಚಟರ್ಜಿ ಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 

ಬಿ-1509, ಇಂದಿರಾನಗರ, ಲಕ್ನೌ-16.
ಉತ್ತರಪ್ರದೇಶ, ಭಾರತ.

ದೂರವಾಣಿ ಸಂಖ್ಯೆಗಳು: 

+91 88088 16234 / +91 93357 15547 / +91 95545 41001 

ಇ ಮೇಲ್ ವಿಳಾಸ: 

musical.jaidev@gmail.com


ಫೇಸ್ ಬುಕ್ ಜೋಡಣೆ: 

www.facebook.com/JAIDEV14FEB


ಭಜನೆ ಮತ್ತು ಗಜಲ್ ವೀಡಿಯೋ ಜೋಡಣೆಗಳು: 








ಕನ್ನಡ ಅನುವಾದ: ಶ್ರೀಕಂಠ ಶರ್ಮ   

Saturday, May 5, 2012

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ), ಶ್ರೀ  ಭಜನೆ  ಹಟ್ಟಿ  ರಂಗಪ್ಪ ಸರ್ಕಲ್, ದೊಡ್ಡಬಳ್ಳಾಪುರ, ಬೆಂಗಳೂರು  ಗ್ರಾಮಾಂತರ ಜಿಲ್ಲೆ-561 203, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ 


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್ ನ ಬಳಿ  ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿದೆ.

ಈ ದೇವಾಲಯದ ಭೂಮಿಪೂಜೆಯನ್ನು ಫೆಬ್ರವರಿ 2007 ರಲ್ಲಿ ಮಾಡಲಾಯಿತು.

ಈ ದೇವಾಲಯವನ್ನು 29ನೇ ಮಾರ್ಚ್ 2012 ರಂದು "ನಡೆದಾಡುವ ದೇವರು"  ಎಂದೇ  ಪ್ರಸಿದ್ಧಿ  ಪಡೆದಿರುವ  ಡಾಕ್ಟರ್  ಶ್ರೀ  ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಉದ್ಘಾಟಿಸಿದರು. ಬೆಂಗಳೂರಿನ  ಗಿರಿನಗರ  ಶಿರಡಿ  ಸಾಯಿಬಾಬಾ  ಮಂದಿರದ ಶ್ರೀ ಶ್ರೀ ಶ್ರೀ ಗೋಪಾಲಕೃಷ್ಣ ಬಾಬಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಹೆಚ್.ಪಿ.ಶಂಕರ್ ರವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಸೇವಾಶ್ರಮ ಟ್ರಸ್ಟ್ ನ  ಆಡಳಿತ  ಮಂಡಳಿಯ ಸದಸ್ಯರು ಈ ದೇವಾಲಯದ ದಿನನಿತ್ಯದ  ಆಗುಹೋಗುಗಳನ್ನು  ಮತ್ತು  ಅಭಿವೃದ್ಧಿ  ಕಾರ್ಯಗಳನ್ನು  ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿ ಮಂದಿರವಿದ್ದು ಮಂದಿರದ ಮಧ್ಯಭಾಗದಲ್ಲಿ 6 ಅಡಿ ಎತ್ತರದ ಸುಂದರ  ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಇಕ್ಕೆಲದಲ್ಲಿ 3 ಅಡಿ ಎತ್ತರದ ಗಣಪತಿ ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ  ವಿಗ್ರಹದ  ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 1 ಅಡಿ ಎತ್ತರದ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳನ್ನು ಕೂಡ ಮಂದಿರದಲ್ಲಿ ನೋಡಬಹುದು.

ದೇವಾಲಯದ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8  ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ 7:30 ರ ವರೆಗೆ ತೆರೆದಿರುತ್ತದೆ. 

ದೇವಾಲಯದ ಹೊರ ಆವರಣದ ಎಡಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇವಾಲಯದ  ಹೊರ  ಆವರಣದ ಮಧ್ಯಭಾಗದಲ್ಲಿ ತುಳಸಿ ಬೃಂದಾವನವನ್ನು ಕೂಡ ಸ್ಥಾಪಿಸಲಾಗಿದೆ.
















ದೇವಾಲಯದ ಕಾರ್ಯಚಟುವಟಿಕೆಗಳು:  
 
ದಿನನಿತ್ಯದ ಕಾರ್ಯಕ್ರಮಗಳು:
 
ದೇವಾಲಯದ ಸಮಯ: 
 
ಬೆಳಿಗ್ಗೆ 6:30 ರಿಂದ 12:30 ರವರೆಗೆ.
ಸಂಜೆ 4:30 ರಿಂದ 8:00 ರವರೆಗೆ. 
 
ಆರತಿಯ ಸಮಯ:  
 
ಕಾಕಡಾ ಆರತಿ  - ಬೆಳಿಗ್ಗೆ 6:30 ಗಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ - ಸಂಜೆ 6 ಗಂಟೆಗೆ 
ಶೇಜಾರತಿ - ರಾತ್ರಿ 8 ಗಂಟೆಗೆ 
 
ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ 8:30 ಕ್ಕೆ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. 
 
ಮಂದಿರದಲ್ಲಿ  ಶಾಶ್ವತ ಪೂಜೆಯನ್ನು ಮಾಡಲು ಸಾಯಿಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 5000/- ರೂಪಾಯಿಗಳು.
 
ವಿಶೇಷ ದಿನಗಳು:   
 
ತಿಂಗಳ ಪ್ರತಿ ಹುಣ್ಣಿಮೆಯ ದಿನ ಬೆಳಿಗ್ಗೆ 9:30 ರಿಂದ 11:30 ರವರೆಗೆ  ಸತ್ಯನಾರಾಯಣ  ಪೂಜೆಯನ್ನು  ಮಾಡಲಾಗುತ್ತದೆ. ಸೇವಾ ಶುಲ್ಕ 25/- ರೂಪಾಯಿಗಳು. 
 
ವಿಶೇಷ ಉತ್ಸವದ ದಿನಗಳು: 
 
1. ಪ್ರತಿವರ್ಷ  29ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ. 
2. ಶ್ರೀ ರಾಮನವಮಿ. 
3. ಗುರುಪೂರ್ಣಿಮೆ. 
4. ಗೋಕುಲಾಷ್ಟಮಿ.
5. ವಿಜಯದಶಮಿ. 
6. ದತ್ತ ಜಯಂತಿ. 
 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಆವರಣದಲ್ಲಿ ವಾರದಲ್ಲಿ ಒಂದು ದಿನ ತಜ್ಞ ವೈದ್ಯರು ಮಕ್ಕಳ  ಆರೋಗ್ಯ  ತಪಾಸಣೆ  ಮಾಡಿ  ಉಚಿತವಾಗಿ  ಔಷಧಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ದೇವಾಲಯದ ಧ್ಯಾನಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ಮತ್ತು ಧ್ಯಾನದ ತರಗತಿಯನ್ನು ನಡೆಸಲಾಗುತ್ತಿದೆ. 

ದೇಣಿಗೆಗೆ ಮನವಿ: 
 
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ) ಯು ದೇವಾಲಯದ ಅಭಿವೃದ್ಧಿ  ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು / ಚೆಕ್/ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ),ದೊಡ್ಡಬಳ್ಳಾಪುರ" ಇವರಿಗೆ  ಸಂದಾಯವಾಗುವಂತೆ  ಕಾರ್ಪೋರೇಶನ್  ಬ್ಯಾಂಕ್ ಖಾತೆ ಸಂಖ್ಯೆ 22817 ಮತ್ತು ಟಿ.ಎಂ.ಸಿ.ಬ್ಯಾಂಕ್ ಖಾತೆ ಸಂಖ್ಯೆ 463  ಖಾತೆಗಳಿಗೆ  ಹಣವನ್ನು  ಸಂದಾಯ ಮಾಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 

ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್.
 
ವಿಳಾಸ: 
 
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ)
ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್,
ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561 203, 
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹೆಚ್.ಪಿ.ಶಂಕರ್ - ಗೌರವ ಅಧ್ಯಕ್ಷರು / ಶ್ರೀ.ಬಿ.ಸಿ.ಅನಂತ ಮುರ್ತಿ - ಕಾರ್ಯದರ್ಶಿ / ಶ್ರೀ.ಬಿ.ಸಿ.ಜನಾರ್ಧನ - ಕಾನೂನು  ಸಲಹೆಗಾರರು / ಶ್ರೀ.ಕೆ.ಎನ್.ದೇವರಾಜ್ - ಖಚಾಂಚಿ.

ದೂರವಾಣಿ ಸಂಖ್ಯೆಗಳು: 

+91 94803 66165 -  ಕಾರ್ಯದರ್ಶಿ / +91 99800 52055 - ಕಾನೂನು ಸಲಹೆಗಾರರು /  +91 99640 49005 - ಖಚಾಂಚಿ.

ಇ ಮೇಲ್ ವಿಳಾಸ:

Vijay.bcj5@gmail.com 


ಮಾರ್ಗಸೂಚಿ: 

ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್ ನ ಬಳಿ ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ನಡಿಗೆಯ  ಅಂತರದಲ್ಲಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೇರಳವಾಗಿ ಬಿಎಂಟಿಸಿ ಬಸ್ ಗಳು (285M),  ಕರ್ನಾಟಕ  ರಾಜ್ಯ  ರಸ್ತೆ  ಸಾರಿಗೆ  ಸಂಸ್ಥೆ ಬಸ್ ಗಳು ಮತ್ತು ಖಾಸಗಿ ಬಸ್ ಗಳ ಸೌಲಭ್ಯವಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, May 2, 2012

ಚಿತ್ರದುರ್ಗ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ  ಶಿರಡಿ  ಸಾಯಿಬಾಬಾ  ಟ್ರಸ್ಟ್ (ನೋಂದಣಿ), ಹುಳಿಯಾರು ಮುಖ್ಯರಸ್ತೆ, ಹೊಸದುರ್ಗ-577 527, ಚಿತ್ರದುರ್ಗ ಜಿಲ್ಲೆ, ಕರ್ನಾಟಕ,  ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಹುಳಿಯಾರು ಮುಖ್ಯರಸ್ತೆಯಲ್ಲಿರುವ ಎಪಿಎಂಸಿ  ಮಾರುಕಟ್ಟೆಯ ಎದುರುಗಡೆ ಹಾಗೂ ಪೋಲಿಸ್ ವಸತಿಗೃಹದ ಹತ್ತಿರ  ಇರುತ್ತದೆ.ದೇವಾಲಯವು ಹೊಸದುರ್ಗ ಬಸ್  ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯವು 18000 ಚದರ ಅಡಿಯಷ್ಟು ವಿಶಾಲವಾದ ಪ್ರದೇಶದಲ್ಲಿ ಇರುತ್ತದೆ. ದೇವಾಲಯ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು  ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ಸ್ಥಳೀಯ ಭೂಪ್ರಾಧಿಕಾರದಿಂದ ಪಡೆದುಕೊಂಡು ದೇವಾಲಯದ ನಿರ್ಮಾಣ  ಮಾಡಿರುತ್ತದೆ. ದೇವಾಲಯದ ಭೂಮಿಪೂಜೆಯನ್ನ್ನು 1ನೇ ಫೆಬ್ರವರಿ 2007 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 20ನೇ ಮೇ 2010 ರಂದು ಹೊಸದುರ್ಗ ತಾಲ್ಲೂಕಿನ ಶ್ರೀ ಕ್ಷೇತ್ರ ಬೆಳಗೂರಿನ ಶ್ರೀ ಶ್ರೀ  ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಜಯಾನಂದ  ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ  ನೆರವೇರಿಸಿರುತ್ತಾರೆ. 

ಶ್ರೀ.ಹಂಜಿ ಶಿವಸ್ವಾಮಿಯವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮೊದಲನೇ ಮಹಡಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ 5 1/2 ಅಡಿ ಎತ್ತರದ ಸುಂದರ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಶಿರಡಿಯಲ್ಲಿ  ಇರುವಂತೆ  ಸಾಯಿಬಾಬಾರವರ  ವಿಗ್ರಹದ  ಎದುರುಗಡೆ  ಅಮೃತಶಿಲೆಯ  ನಂದಿಯ  ವಿಗ್ರಹವನ್ನು  ಸ್ಥಾಪಿಸಲಾಗಿದೆ. 

ದೇವಾಲಯದ ಹಿಂಭಾಗದಲ್ಲಿ ಗುರುಸ್ಥಾನವನ್ನು ಸ್ಥಾಪಿಸಲಾಗಿದ್ದು ಅಲ್ಲಿ ಪವಿತ್ರ ಬೇವಿನ ಮರವನ್ನು ಸಾಯಿಭಕ್ತರು ನೋಡಬಹುದು. 

ದೇವಾಲಯದ ಹಿಂಭಾಗದಲ್ಲಿರುವ ದ್ವಾರಕಾಮಾಯಿಯಲ್ಲಿ ಆಳೆತ್ತರದ ಸುಂದರ ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟವನ್ನು, ಪುಟ್ಟದಾದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ ಹಾಗೂ ಪವಿತ್ರ ಧುನಿಯನ್ನು ನೋಡಬಹುದು. 

ದೇವಾಲಯದ ಹಿಂಭಾಗದಲ್ಲಿರುವ 3 ಪ್ರತ್ಯೇಕ ದೇವಾಲಯಗಳಲ್ಲಿ ಕಪ್ಪು ಶಿಲೆಯ ವಿನಾಯಕ, ಈಶ್ವರ ಮತ್ತು  ಅಮೃತ  ಶಿಲೆಯ ದತ್ತಾತ್ರೇಯ ದೇವರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.ಈಶ್ವರ  ದೇವಾಲಯದ  ಎದುರುಗಡೆ  ಇರುವಂತೆ  ಕಪ್ಪುಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಧ್ಯಾನಮಂದಿರವು ದೇವಾಲಯದ ನೆಲಮಾಳಿಗೆಯಲ್ಲಿದ್ದು ಅಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಆಳೆತ್ತರದ  ಚಿತ್ರಪಟ  ಮತ್ತು ಸುಮಾರು 3 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ನೋಡಬಹುದು. 

ದೇವಾಲಯದಲ್ಲಿ ಮರದ ಪಲ್ಲಕ್ಕಿಯಿದ್ದು ಇದನ್ನು ಪ್ರತಿ ಗುರುವಾರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತದೆ. 

ದೇವಾಲಯದ ಹೊರಆವರಣದ ಎರಡೂ ಬದಿಗಳಲ್ಲಿ ಸುಂದರ ಹೂತೋಟವನ್ನು ನಿರ್ಮಿಸಲಾಗಿದ್ದು ದೇವಾಲಯದ  ಆಡಳಿತ  ಮಂಡಳಿಯ ಸದಸ್ಯರು ಅದನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯದ ಹಿಂಭಾಗದಲ್ಲಿ ಉಚಿತ ಶ್ರೀ ಶಿರಡಿ ಸಾಯಿಬಾಬಾ ಚಿಕಿತ್ಸಾಲಯವಿದ್ದು ಇಲ್ಲಿ ಪ್ರತಿನಿತ್ಯ ತಜ್ಞ  ವೈದ್ಯರುಗಳು  ರೋಗಿಗಳ ತಪಾಸಣೆಯನ್ನು ಮಾಡಿ ಉಚಿತವಾಗಿ ಔಷಧಿಗಳನ್ನೂ ಸಹ ನೀಡುತ್ತಾರೆ. 





























ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ: 

ಕಾಕಡಾ ಆರತಿ  - ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ - ಸಂಜೆ 6 ಗಂಟೆಗೆ 
ಶೇಜಾರತಿ - ರಾತ್ರಿ 9 ಗಂಟೆಗೆ 

ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. 

ಪ್ರತಿ ಗುರುವಾರ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 2500/- ರೂಪಾಯಿಗಳು.

ವಿಶೇಷ ದಿನಗಳು:  

ತಿಂಗಳ ಪ್ರತಿ ಹುಣ್ಣಿಮೆಯ ದಿನ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ  ಸತ್ಯನಾರಾಯಣ  ಪೂಜೆಯನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ. 

ವಿಶೇಷ ಉತ್ಸವದ ದಿನಗಳು: 

1. ಪ್ರತಿವರ್ಷ  20ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ. 
2. ಶ್ರೀ ರಾಮನವಮಿ. 
3. ಗುರುಪೂರ್ಣಿಮೆ. 
4. ವಿಜಯದಶಮಿ. 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ದೇವಾಲಯದ ಹಿಂಭಾಗದಲ್ಲಿ ಉಚಿತ ಶ್ರೀ ಶಿರಡಿ ಸಾಯಿಬಾಬಾ ಚಿಕಿತ್ಸಾಲಯವಿದ್ದು ಇಲ್ಲಿ ಪ್ರತಿನಿತ್ಯ ತಜ್ಞ ವೈದ್ಯರುಗಳು ರೋಗಿಗಳ ತಪಾಸಣೆಯನ್ನು ಮಾಡಿ ಉಚಿತವಾಗಿ ಔಷಧಿಗಳನ್ನೂ ಸಹ ನೀಡುತ್ತಾರೆ. 

ದೇವಾಲಯದಲ್ಲಿ ನಿಯಮಿತವಾಗಿ ಉಚಿತವಾಗಿ ಸಾಮುಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗುತ್ತದೆ.

ದೇವಾಲಯದಲ್ಲಿ ಪ್ರತಿನಿತ್ಯ ಉಚಿತ ಯೋಗ ಮತ್ತು ಧ್ಯಾನದ ತರಗತಿಯನ್ನು ನಡೆಸಲಾಗುತ್ತಿದೆ.

ದೇವಾಲಯದಲ್ಲಿ ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಲಾಗುತ್ತದೆ. 

ದೇಣಿಗೆಗೆ ಮನವಿ: 

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ)ಯು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು /ಚೆಕ್ /ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ),  ಹೊಸದುರ್ಗ" ಇವರಿಗೆ  ಸಂದಾಯವಾಗುವಂತೆ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಹೊಸದುರ್ಗ  - ಖಾತೆ ಸಂಖ್ಯೆ 31016880816
ಕೆನರಾ ಬ್ಯಾಂಕ್, ಹೊಸದುರ್ಗ  - ಖಾತೆ ಸಂಖ್ಯೆ 0454101023822
ಸೀತಾರಾಘವ ಸಹಕಾರಿ ಬ್ಯಾಂಕ್, ಹೊಸದುರ್ಗ - ಖಾತೆ ಸಂಖ್ಯೆ CD-107


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 

ಎಪಿಎಂಸಿ ಮಾರುಕಟ್ಟೆಯ ಎದುರುಗಡೆ ಹಾಗೂ ಪೋಲಿಸ್ ವಸತಿಗೃಹದ ಹತ್ತಿರ. 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ), 
ಹುಳಿಯಾರು ಮುಖ್ಯರಸ್ತೆ, ಹೊಸದುರ್ಗ-577 527, 
ಚಿತ್ರದುರ್ಗ ಜಿಲ್ಲೆ, ಕರ್ನಾಟಕ,  ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹಂಜಿ ಶಿವಸ್ವಾಮಿ - ಅಧ್ಯಕ್ಷರು / ಶ್ರೀ.ಎನ್.ಮಂಜುನಾಥ್ - ಗೌರವ ಕಾರ್ಯದರ್ಶಿ 

ದೂರವಾಣಿ ಸಂಖ್ಯೆಗಳು: 

+ 91 94481 39405 - ಶ್ರೀ.ಹಂಜಿ ಶಿವಸ್ವಾಮಿ - ಅಧ್ಯಕ್ಷರು / +91 94491 45703 / +91 98866 45703 – ಶ್ರೀ. ಎನ್. ಮಂಜುನಾಥ್ - ಗೌರವ ಕಾರ್ಯದರ್ಶಿ 

ಇ ಮೇಲ್ ವಿಳಾಸ:  


ಮಾರ್ಗಸೂಚಿ:  

ಹೊಸದುರ್ಗ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ಕರ್ನಾಟಕದ  ಚಿತ್ರದುರ್ಗ  ಜಿಲ್ಲೆಯ ಹೊಸದುರ್ಗ ಪಟ್ಟಣದ ಹುಳಿಯಾರು ಮುಖ್ಯರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಎದುರುಗಡೆ  ಹಾಗೂ  ಪೋಲಿಸ್ ವಸತಿಗೃಹದ ಹತ್ತಿರ ಇರುತ್ತದೆ. ದೇವಾಲಯವು ಹೊಸದುರ್ಗ ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ