ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಸೇವಾ ಸನ್ನಿಧಿ, ಅಂಚೆ ಕಚೇರಿ ರಸ್ತೆ, ಸಾಯಿಬಾಬಾ 7ನೇ ಅಡ್ಡರಸ್ತೆ, ಕಲ್ಕೆರೆ ಮುಖ್ಯರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವು ರಾಮಮುರ್ತಿನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುತ್ತದೆ.
ಈ ಮಂದಿರದ ಭೂಮಿಪೂಜೆಯನ್ನು 2008ನೇ ಇಸವಿಯ ಪವಿತ್ರ ವಿಜಯದಶಮಿಯಂದು ಮಾಡಲಾಯಿತು. ಮಂದಿರದ ನಿರ್ಮಾಣವನ್ನು 3ನೇ ಡಿಸೆಂಬರ್ 2008 ರಂದು ಪ್ರಾರಂಭಿಸಲಾಯಿತು.
ಈ ಮಂದಿರದ ಉದ್ಘಾಟನೆಯನ್ನು 14ನೇ ಫೆಬ್ರವರಿ 2011 ರಂದು ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಅವಧೂತ ಶ್ರೀ.ಶ್ರೀ.ಶ್ರೀ.ರಮಾನಂದ ಸ್ವಾಮೀಜಿಯವರು ನೆರವೇರಿಸಿದರು.
ದೇವಾಲಯದ ಮೊದಲನೇ ಮಹಡಿಯಲ್ಲಿ ನಾಲ್ಕು ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹ, ಸಾಯಿಬಾಬಾರವರ ವಿಗ್ರಹದ ಎರಡೂ ಕಡೆಗಳಲ್ಲಿ ಸಿದ್ಧಿ ಗಣಪತಿ ಮತ್ತು ದತ್ತಾತ್ರೇಯರ ವಿಗ್ರಹಗಳು ಮತ್ತು ದತ್ತಾತ್ರೇಯ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿರುವ ಕೂರ್ಮದ ವಿಗ್ರಹವನ್ನು ಸಾಯಿಭಕ್ತರು ನೋಡಬಹುದು.
ದೇವಾಲಯದ ನೆಲ ಮಹಡಿಯಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ಪಿರಮಿಡ್ ಧ್ಯಾನವನ್ನು ಉಚಿತವಾಗಿ ಸ್ಥಳೀಯ ಸಾಯಿ ಭಕ್ತರಿಗೆ ಹೇಳಿಕೊಡಲಾಗುತ್ತಿದೆ.
ಮಂದಿರದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6 ಘಂಟೆಗೆ
ಶೇಜಾರತಿ: ರಾತ್ರಿ 8:00 ಕ್ಕೆ
ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತಿ ಗುರುವಾರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಯಾವುದೇ ಸೇವಾ ಶುಲ್ಕವನ್ನು ನಿಗದಿ ಮಾಡಿರುವುದಿಲ್ಲ.
ವಿಶೇಷ ಉತ್ಸವದ ದಿನಗಳು:
1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 14ನೇ ಫೆಬ್ರವರಿ ಯಂದು .
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ.
4. ವಿಜಯದಶಮಿ.
5.ಶ್ರೀಕೃಷ್ಣ ಜನ್ಮಾಷ್ಟಮಿ.
6.ದತ್ತ ಜಯಂತಿ.
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಅಂಕಮ್ಮ ದೇವಾಲಯದ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ.
ವಿಳಾಸ:
ಶ್ರೀ ಶಿರಡಿ ಸಾಯಿ ಸೇವಾ ಸನ್ನಿಧಿ, ಅಂಚೆ ಕಚೇರಿ ರಸ್ತೆ, ಸಾಯಿಬಾಬಾ 7ನೇ ಅಡ್ಡರಸ್ತೆ,
ಕಲ್ಕೆರೆ ಮುಖ್ಯರಸ್ತೆ, ರಾಮಮುರ್ತಿನಗರ,
ಬೆಂಗಳೂರು-560 016. ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ರಾಜಣ್ಣ. ದೂರವಾಣಿ ಸಂಖ್ಯೆಗಳು:
+ 91 98806 89935
ಮಾರ್ಗಸೂಚಿ:
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಅಂಕಮ್ಮ ದೇವಾಲಯದ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. ಬಸ್ ಸಂಖ್ಯೆಗಳು: 315-D, 315-P, 315-E, 313, 313-F, 300-E ಮತ್ತು ಇನ್ನು ಹಲವಾರು ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment