ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದುರ್ಗಾದೇವಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ, 7ನೇ ಅಡ್ಡರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ದುರ್ಗಾದೇವಿಯ ಆಲಯವನ್ನು 1995 ರಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಲಾಯಿತು. ನಂತರ 9ನೇ ಜೂನ್ 2009 ರಲ್ಲಿ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.
ದೇವಾಲಯದಲ್ಲಿ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಕಪ್ಪು ಶಿಲೆಯ ದುರ್ಗಾ ದೇವಿ (ಒಂದು ದೊಡ್ಡ ವಿಗ್ರಹ ಮತ್ತೊಂದು ಸಣ್ಣ ವಿಗ್ರಹ), ಗಣೇಶ, ಸುಬ್ರಮಣ್ಯ, ನವಗ್ರಹ, ನಾಗದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಬೆಳಿಗ್ಗೆ 6:00 ಘಂಟೆಗೆ
ಸಂಜೆ 6:30 ಘಂಟೆಗೆ
ವಿಶೇಷ ಉತ್ಸವದ ದಿನಗಳು:
- ಪ್ರತಿ ವರ್ಷದ 1ನೇ ಜನವರಿ.
- ಶ್ರೀರಾಮನವಮಿ.
- ಗುರುಪೂರ್ಣಿಮೆ.
- ವಿಜಯದಶಮಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ರಾಮಮುರ್ತಿನಗರ ಚರ್ಚ್ ಬಳಿ
ವಿಳಾಸ:
ಶ್ರೀ ದುರ್ಗಾದೇವಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ,
7ನೇ ಅಡ್ಡರಸ್ತೆ, ರಾಮಮುರ್ತಿನಗರ,
ಬೆಂಗಳೂರು-560 016, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಅನಸೂಯ ನಾಗಪ್ಪ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
+91 98802 15771
ಮಾರ್ಗಸೂಚಿ:
ರಾಮಮುರ್ತಿನಗರದ ಚರ್ಚ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಮಜೆಸ್ಟಿಕ್, ಮಾರ್ಕೆಟ್ ಮತ್ತು ಶಿವಾಜಿನಗರದಿಂದ ರಾಮಮುರ್ತಿ ನಗರಕ್ಕೆ ಒಳ್ಳೆಯ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment