ನವದೆಹಲಿಯ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿಬಾಬಾ ಮಂದಿರ, ಡಿ.ಡಿ.ಎ.ಫ್ಲಾಟ್ಸ್, ಕಲ್ಕಾಜೀ, ನವದೆಹಲಿ-110 019, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವನ್ನು 8ನೇ ಫೆಬ್ರವರಿ 2011 ರ ಪವಿತ್ರ ವಸಂತ ಪಂಚಮಿಯ ದಿವಸ ಪ್ರಾರಂಭಿಸಲಾಯಿತು.
ಈ ದೇವಾಲಯದಲ್ಲಿ ಅಮೃತ ಶಿಲೆಯ ಶಿರಡಿ ಸಾಯಿಬಾಬಾ, ಶ್ರೀರಾಮ ಪರಿವಾರ, ರಾಧಾಕೃಷ್ಣ, ಲಕ್ಷ್ಮಿ ನಾರಾಯಣ, ಹನುಮಂತ, ಶಿವ, ಅರ್ಧನಾರೀಶ್ವರ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ - ಬೆಳಿಗ್ಗೆ 4:30 ಕ್ಕೆ
ಛೋಟಾ ಆರತಿ - ಬೆಳಿಗ್ಗೆ 6:30 ಕ್ಕೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ
ಧೂಪಾರತಿ - ಸಂಜೆ 6:30 ಕ್ಕೆ
ಶೇಜಾರತಿ - ರಾತ್ರಿ 9:30 ಕ್ಕೆ
ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಬೆಳಿಗ್ಗೆ 9:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
ಪ್ರತಿ ಗುರುವಾರ ಶೇಜಾರತಿಯ ನಂತರ ಮಂದಿರಕ್ಕೆ ಬರುವ ಎಲ್ಲ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ಪ್ರತಿ ಶನಿವಾರ ಸಂಜೆ 7 ಘಂಟೆಗೆ ಸುಂದರಕಾಂಡದ ಪಾರಾಯಣವನ್ನು ಮಾಡಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ 11:30 ರಿಂದ ಮಧ್ಯಾನ್ಹ 1 ಘಂಟೆಯ ವರೆಗೆ ಮಹಿಳೆಯರಿಂದ ಭಜನೆ ಮತ್ತು ಕೀರ್ತನೆಯ ಕಾರ್ಯಕ್ರಮವಿರುತ್ತದೆ.
ಪ್ರತಿ ಮಂಗಳವಾರ ಸಂಜೆ 5 ಘಂಟೆಯಿಂದ 7 ಘಂಟೆಯವರೆಗೆ ಮಹಿಳೆಯರಿಂದ ಭಜನೆ ಮತ್ತು ಕೀರ್ತನೆಯ ಕಾರ್ಯಕ್ರಮವಿರುತ್ತದೆ.
ವಿಶೇಷ ಉತ್ಸವದ ದಿನಗಳು:
1.ಶಿವರಾತ್ರಿ
2 .ಕೃಷ್ಣ ಜನ್ಮಾಷ್ಟಮಿ.
3. ನವರಾತ್ರಿ ಉತ್ಸವ.
4. ದೀಪಾವಳಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಡಿ.ಡಿ.ಎ.ಫ್ಲಾಟ್ಸ್, ಕಲ್ಕಾಜೀ, ನವದೆಹಲಿ.
ವಿಳಾಸ:
ಶಿರಡಿ ಸಾಯಿಬಾಬಾ ಮಂದಿರ
ಡಿ.ಡಿ.ಎ.ಫ್ಲಾಟ್ಸ್, ಕಲ್ಕಾಜೀ,
ನವದೆಹಲಿ-110 019, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೆ.ಎಲ್.ಭಾಟಿಯ / ಶ್ರೀ.ಬಿ.ಎಸ್.ಕ್ಷೇತ್ರಪಾಲ್ / ಶ್ರೀ.ಆರ್.ಸಿ.ಶರ್ಮ/ಶ್ರೀ.ಉಮೇಶ್ ಚಂದ್ರ/ಶ್ರೀ.ಗೋವಿಂದ ವಲ್ಲಭ/ಶ್ರೀ.ಅಶೋಕ್ ಶರ್ಮ/ಶ್ರೀ.ಎಸ್.ಕೆ.ಪಾಂಡೆ/ಶ್ರೀ.ರಾಜು ತಿವಾರಿ/ಶ್ರೀ.ನಾರಾಯಣ ಶರ್ಮ
ದೂರವಾಣಿ ಸಂಖ್ಯೆಗಳು:
+91 11 2602 0186 / +91 98990 02276 / +91 98915 86618
ಮಾರ್ಗಸೂಚಿ:
ಐ.ಎಸ್.ಬಿ.ಟಿ. ಮತ್ತು ಹಳೇ ದೆಹಲಿಯಿಂದ ಬಸ್ ಸಂಖ್ಯೆ 429, ಏನ್.ಡೀ.ಆರ್ ನಿಲ್ದಾಣದಿಂದ ಬಸ್ ಸಂಖ್ಯೆ ಎಂ.13 ಮತ್ತು 440 , ಸೆಂಟ್ರಲ್ ಸೆಕ್ರಟೇರಿಯಟ್ ನಿಂದ ಬಸ್ ಸಂಖ್ಯೆ 480, ಆನಂದ್ ವಿಹಾರ್ ನಿಂದ ಬಸ್ ಸಂಖ್ಯೆ 469. ಹತ್ತಿರದ ಮೆಟ್ರೋ ಬಸ್ ನಿಲ್ದಾಣ ಗೋವಿಂದಪುರವಾಗಿದ್ದು ದೇವಾಲಯವು ಇಲ್ಲಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment