Tuesday, May 10, 2011

ಬಹುಮುಖ ಪ್ರತಿಭೆಯ ಸಾಯಿ ಬಂಧು ದೀಪಕ್ ಶರ್ಮ ಕುಲುವಿ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ದೀಪಕ್ ಶರ್ಮ ಕುಲುವಿಯವರು ದೆಹಲಿಯ ಪ್ರಸಿದ್ದ ಬರಹಗಾರರು, ಗಾಯಕರು, ವ್ಯಂಗ್ಯಚಿತ್ರಕಾರರು  ಮತ್ತು ಸಂಗೀತ ಸಂಯೋಜಕರಾಗಿದ್ದಾರೆ. ಇವರು 3ನೇ ಮೇ 1962 ರಂದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಜನಿಸಿದರು. ಇವರ ತಂದೆ ಶ್ರೀ.ಜೈದೇವ್ ವಿದ್ರೋಹಿ ಮತ್ತು ತಾಯಿ ಶ್ರೀಮತಿ.ವಿದ್ಯಾದೇವಿ. ಇವರು ಸಂಗೀತಗಾರರು ಮತ್ತು ಬರಹಗಾರರ ವಂಶದಲ್ಲಿ ಜನಿಸಿದರು. ಇವರ ತಂದೆಯವರು ಪ್ರಸಿದ್ದ ಬರಹಗಾರರು, ವರದಿಗಾರರು, ಕುಲು ಪ್ರೆಸ್ ಕ್ಲಬ್ ನ ಮುಖ್ಯ ಸಲಹೆಗಾರರು ಮತ್ತು ಹಿಮಾಚಲಪ್ರದೇಶ ಬರಹಗಾರ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರು ಹಿಮಾಚಲಪ್ರದೇಶ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿದ್ದಾರೆ. ಇಲ್ಲಿಯವರೆಗೂ ಇವರು 250 ಕ್ಕೂ ಹೆಚ್ಚು ಹಿಂದಿ ಮತ್ತು ಉರ್ದು ಗಜಲ್ ಗಳನ್ನು, 1000 ಹಿಂದಿ, ಉರ್ದು ಮತ್ತು ಕಂಗ್ರಿ ಶೇರ್ ಗಳನ್ನು, 500 ಹಿಂದಿ ಕಥೆಗಳನ್ನು, 100 ಹಿಂದಿ ಮತ್ತು ಪಂಜಾಬಿ ಹಾಡುಗಳನ್ನು, 500 ಹಿಂದಿ, ಪಂಜಾಬಿ, ಕುಲುವಿ ಮತ್ತು ಕಂಗ್ರಿ ಕವನಗಳನ್ನು, 150 ಹಿಂದಿ ಪತ್ರಿಕಾ ಬರಹಗಳನ್ನು, 500 ಹಿಂದಿ  ಭಜನೆಗಳನ್ನು, 40 ಆಂಗ್ಲ ಕವನಗಳನ್ನು, 35 ಆಂಗ್ಲ ಮಕ್ಕಳ ಕವಿತೆಗಳನ್ನು, 100 ನುಡಿ ಮುತ್ತುಗಳನ್ನು, 120 ಹಿಂದಿ ಮಕ್ಕಳ ಕವಿತೆಗಳನ್ನು, 350 ಆಂಗ್ಲ ಮತ್ತು ಹಿಂದಿ ವ್ಯಂಗ್ಯಚಿತ್ರಗಳನ್ನು ಮತ್ತು 10 ಹಿಂದಿ, ಉರ್ದು ಕವಾಲಿ ಮಾದರಿಯ ಸೂಫಿಯಾನ ಗೀತೆಗಳನ್ನು ರಚಿಸಿದ್ದಾರೆ.

ಅಷ್ಟೇ ಅಲ್ಲದೇ, ಶ್ರೀ.ದೀಪಕ್ ಶರ್ಮ ಕುಲುವಿಯವರು 1000 ಕ್ಕೂ ಹೆಚ್ಚು ಭಜನೆ, ಗಜಲ್, ಪಂಜಾಬಿ ಮತ್ತು ಹಿಂದಿ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು 3000 ಕ್ಕೂ ಹೆಚ್ಚು  ವಿವಿಧ ಪ್ರಕಾರದ ಬರಹಗಳನ್ನು ರಚಿಸಿದ್ದು ಅವುಗಳು ವಿವಿಧ ವೃತ್ತ ಪತ್ರಿಕೆಗಳು, ಮಾಸ ಪತ್ರಿಕೆಗಳು, ಪುಸ್ತಕಗಳಲ್ಲಿ ಪ್ರಕಟವಾಗಿವೆ. ಅಲ್ಲದೆ, 22 ಸಣ್ಣ ಮತ್ತು ದೊಡ್ಡ ಪುಸ್ತಕಗಳನ್ನು  ಬರೆದಿದ್ದು ಅವುಗಳು ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ನೇರ ಅಂತರ್ಜಾಲ ಮಾಸಪತ್ರಿಕೆಯಾದ "ಜರ್ನಲಿಸ್ಟ್ ಟುಡೇ ನೆಟ್ ವರ್ಕ್" ನ ಪತ್ರಕರ್ತರಾಗಿದ್ದಾರೆ. ಜಸ್ಟ್ ಇಂಡಿಯಾ ಮಾಸಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. "ಸ್ವತಂತ್ರ ರೈಟರ್" ನಿಯತಕಾಲಿಕೆಯ ವರದಿಗಾರರಾಗಿದ್ದಾರೆ. ಇವರು ಚಿತ್ರಕಲಾವಿದರೂ ಕೂಡ ಆಗಿದ್ದು 300 ವಿವಿಧ ಬಗೆಯ ವರ್ಣ ಚಿತ್ರಗಳು, ತೈಲ ಚಿತ್ರಗಳು ಮತ್ತು ಇತರ ಪ್ರಕಾರದ ಚಿತ್ರಗಳನ್ನು ರಚಿಸಿದ್ದಾರೆ. 
ಶ್ರೀ.ದೀಪಕ್ ಶರ್ಮ ಕುಲುವಿಯವರು ಹಿರಿಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪ್ರತಿಷ್ಟಿತ ಲಾಯಿಡ್ ಇನ್ಸುಲೆಶನ್ಸ್ (ಇಂಡಿಯಾ) ಲಿಮಿಟೆಡ್, ನವದೆಹಲಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಸಿದ್ದ ಸಾಯಿ ಭಜನ ಗಾಯಕಿ ಶ್ರೀಮತಿ.ಕುಮುದ್ ಶರ್ಮರವರನ್ನು ವಿವಾಹವಾಗಿ, ಮಗ ಉದಯೋನ್ಮುಖ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ   ಶ್ರೀ.ದೀಪಾಂಕರ್ ಶರ್ಮ ಮತ್ತು ಮಗಳು ಉದಯೋನ್ಮುಖ ಕಥಕ್ ನೃತ್ಯಪಟು ಕುಮಾರಿ.ದೀಪಾಲಿ ಶರ್ಮರವರೊಂದಿಗೆ ನವದೆಹಲಿಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರಿಗೆ 2009 ರಲ್ಲಿ ನವದೆಹಲಿಯ ಅಖಿಲ ಭಾರತ ಸ್ವತಂತ್ರ ಲೇಖಕ ಮಂಚದ ವತಿಯಿಂದ ನೀಡುವ ಸಾಹಿತ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ಜೆ-1/385, ಡಿಡಿಎ ಫ್ಲಾಟ್ಸ್, ಕಲ್ಕಾಜಿ, ನವದೆಹಲಿ-110 019.ಭಾರತ.

ದೂರವಾಣಿ ಸಂಖ್ಯೆಗಳು: 
+91 91362 11486  /  +91 11 3088 2881

ಈ ಮೇಲ್ ವಿಳಾಸ:

ಅಂತರ್ಜಾಲ ತಾಣ: 

ಅಲ್ಬಮ್ ಗಳು: 
ಅಂತರ್ಜಾಲ ತಾಣವಾದ ಫೇಸ್ ಬುಕ್ ನಲ್ಲಿ "ದೀಪಕ್ ಕುಮಾರ್ ಕುಲುವಿ" ಮತ್ತು "ದೀಪ್ಕುಮುದ್ ಸುರ್ ಸಂಗಮ್" ಎಂಬಲ್ಲಿ ಇವರ ಭಜನೆಯ ವೀಡಿಯೋಗಳನ್ನು ನೋಡಬಹುದು. 

ಭಜನೆಗಳು: 
ಇವರ ಭಜನೆಯ ವೀಡಿಯೋಗಳನ್ನು ಫೇಸ್ ಬುಕ್, ಯು ಟ್ಯೂಬ್, ಹಿಂಧಾರಾ ಬ್ಲಾಗ್ ನಲ್ಲಿ ನೋಡಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment