ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿರುವ ಅತ್ಯಂತ ಪುರಾತನ ಚಿತ್ರ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ಚಿತ್ರದಲ್ಲಿ ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿರುವ ದೃಶ್ಯವನ್ನು ಸಾಯಿಭಕ್ತರು ನೋಡಬಹುದು. ಶಿರಡಿಯ ಗ್ರಾಮದ ಜನರು ಆಗಾಗ್ಗೆ ಈ ಸ್ಥಳದಲ್ಲಿ ತಾತ್ಕಾಲಿಕ ಅಂಗಡಿಯನ್ನು ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಈ ಕೆಳಗಿನ ದೃಶ್ಯದಲ್ಲಿ ಸಾಯಿಬಾಬಾರವರು ಚಾವಡಿಯ ಹತ್ತಿರ ಇದ್ದ ವಾಮನ ರಾವ್ ಗೊಂದ್ಕರ್ ಮತ್ತು ಸಖಾರಾಮ್ ಪಾಟೀಲ್ ಶೆಲ್ಕೆಯವರ ಮನೆಯ ನಡುವೆ ಇದ್ದ ಖಾಲಿ ಜಾಗದಲ್ಲಿ ನಿಂತುಕೊಂಡಿರುವುದನ್ನು ಕಾಣಬಹುದು. ಸಾಯಿಬಾಬಾರವರು ಕೈನಲ್ಲಿ ಒಂದು ತಗಡಿನ ಪಾತ್ರೆಯನ್ನು ಹಿಡಿದಿದ್ದಾರೆ ಮತ್ತು ತಲೆಯ ಮೇಲೆ ಒಂದು ಬಟ್ಟೆಯನ್ನು ಹೊದ್ದಿದ್ದಾರೆ. ಅಲ್ಲದೇ, ಜೋಳಿಗೆಯನ್ನು ಕೂಡ ತಮ್ಮ ಬಲಭಾಗದಲ್ಲಿ ಸಿಕ್ಕಿಸಿಕೊಂಡಿದ್ದಾರೆ.
ಕನ್ನಡ ಅನುವಾದ:ಶ್ರೀಕಂಠ ಶರ್ಮ
No comments:
Post a Comment