ಮುಂಬೈ ನಗರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ದರ್ಶನ್ ಮಂದಿರ ಟ್ರಸ್ಟ್, ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ, ಎಸ್.ವಿ.ರೋಡ್, ಮಲಾಡ್ (ಪಶ್ಚಿಮ), ಮುಂಬೈ-400 064, ಮಹಾರಾಷ್ಟ್ರ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವನ್ನು 29 ವರ್ಷಗಳ ಹಿಂದೆ ಅಂದರೆ ಮಾರ್ಚ್ 1982 ರಲ್ಲಿ ಪವಿತ್ರ ಗುಡಿ ಪಾಡ್ವದ ದಿವಸ ಪ್ರಾರಂಭಿಸಲಾಯಿತು. ದೇವಾಲಯದ ಉದ್ಘಾಟನೆಯನ್ನು ಟ್ರಸ್ಟಿ ಶ್ರೀ.ರಾಜಕುಮಾರ್ ಪರಸ್ರಾಮ್ಪುರಿಯಾರವರು ನೆರವೇರಿಸಿದರು.
ಮೊದಲಿಗೆ ಈ ಮಂದಿರದಲ್ಲಿ ಕೇವಲ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಮಾತ್ರವೇ ಪ್ರತಿಷ್ಟಾಪಿಸಲಾಗಿತ್ತು. ಆದುದರಿಂದಲೇ ದೇವಾಲಯಕ್ಕೆ ಶ್ರೀ ಸಾಯಿ ದರ್ಶನ್ ಮಂದಿರ ಎಂಬ ಹೆಸರು ಬಂದಿತ್ತು. ಕಾಲಾನಂತರದಲ್ಲಿ ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ಮತ್ತು ಟ್ರಸ್ಟ್ ಸದಸ್ಯರೆಲ್ಲರ ಪರಿಶ್ರಮದಿಂದ ಈಗ ದೇವಾಲಯದ ಆವರಣದಲ್ಲಿ 16 ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಒಂದೇ ಕಡೆಯಲ್ಲಿ ಎಲ್ಲ ದೇವಾನುದೇವತೆಗಳ ದರ್ಶನ ಮಾಡುವ ಭಾಗ್ಯ ಒದಗಿಬಂದಿದೆ.
ದೇವಾಲಯದಲ್ಲಿ ಶ್ರೀ ಬಾಬೋಸ ಮಹಾರಾಜ, ಶನಿದೇವರು, ಹನುಮಂತ, ದತ್ತಾತ್ರೇಯ, ಜಲರಾಂ ಬಪ್ಪಾ, ಪಿತ್ರಾ ದೇವ, ಸಿತ್ಲಾ ಮಾತಾ, ರಾಣಿ ಸತಿ ದಾದಿ, ಭಗವಾನ್ ಶಂಕರ, ಶಿರಡಿ ಸಾಯಿಬಾಬಾ, ಅಂಬೆ ಮಾತಾ, ಗಣೇಶ, ಖಾಟುವಾಲೆ ಶ್ಯಾಮ್ ಬಾಬಾ, ಜಿನ ಮಾತಾ, ಭೈರವನಾಥ, ರಾಮ ಪರಿವಾರ ಮತ್ತು ರಾಧ ಕೃಷ್ಣ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ಮುಂಬೈ ನ ಪಶ್ಚಿಮ ದಿಗ್ಭಾಗದಲ್ಲಿ ದಹಿಸಾರ್ ನಿಂದ ಹಿಡಿದು ಚರ್ಚ್ ಗೇಟ್ ನ ವರೆಗೆ ಖಾಟುವಾಲೆ ಶ್ಯಾಮ್ ಬಾಬಾರವರ ವಿಗ್ರಹವನ್ನು ಈ ಮಂದಿರದಲ್ಲಿ ಮಾತ್ರ ದರ್ಶನ ಮಾಡಬಹುದಾಗಿದೆ. ಹಾಗೆಯೇ, ಜಿನ ಮಾತಾರ ವಿಗ್ರಹವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು
ದಿನನಿತ್ಯದ ಕಾರ್ಯಕ್ರಮಗಳು
ದೇವಾಲಯದ ಸಮಯ:
ಬೆಳಿಗ್ಗೆ 6 ಘಂಟೆಯಿಂದ ಮಧ್ಯಾನ್ಹ 12 ಘಂಟೆಯ ವರೆಗೆ
ಸಂಜೆ 4 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ
ಗುರುವಾರದಂದು ಬೆಳಿಗ್ಗೆ 5 ಘಂಟೆಯಿಂದ ಮಧ್ಯರಾತ್ರಿ 12 ಘಂಟೆಯವರೆಗೆ
ಆರತಿಯ ಸಮಯ:
ಪ್ರತಿದಿನ ಬೆಳಿಗ್ಗೆ 6 ಘಂಟೆಗೆ ಮತ್ತು ಸಂಜೆ 7:30 ಕ್ಕೆ.
ವಿಶೇಷ ದಿನಗಳು:
- ಪ್ರತಿ ತಿಂಗಳ ಎರಡೂ ಏಕಾದಶಿಯ ದಿನದಂದು ಶ್ಯಾಮ್ ಬಾಬಾ ರವರ ವಿಶೇಷ ಕೀರ್ತನೆ ಮತ್ತು ಭಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
- ಪ್ರತಿ ತಿಂಗಳ ಅಮಾವಾಸ್ಯೆಯಂದು ರಾಣಿ ಸತಿ ದಾದಿಯವರ ಮಂಗಳ ಪಾಠವನ್ನು ಹಮ್ಮಿಕೊಳ್ಳಲಾಗುತ್ತದೆ.
- ಪ್ರತಿ ತಿಂಗಳ ಅಷ್ಟಮಿಯಂದು ಜಿನ ಮಾತಾರವರ ಮಂಗಳ ಪಾಠವನ್ನು ಹಮ್ಮಿಕೊಳ್ಳಲಾಗುತ್ತದೆ.
- ಪ್ರತಿ ಗುರುವಾರ ರಾತ್ರಿ 9 ಘಂಟೆಯಿಂದ 11 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
- ನವರಾತ್ರಿಯ ಸಮಯದಲ್ಲಿ ಅಷ್ಟಮಿಯ ದಿನ ವಿಶೇಷ ಹೋಮ ಹವನ ಕಾರ್ಯಕ್ರಮಗಳು ಮತ್ತು 108 ಕನ್ಯಾಕುಮಾರಿಯರ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ.
- ಪ್ರತಿ ವರ್ಷದ ಗುಡಿ ಪಾಡ್ವ ದಿನದಂದು ದೇವಾಲಯದ ವಾರ್ಷಿಕೋತ್ಸವ - ವಿಶೇಷ ಭಜನ ಸಂಧ್ಯಾ ಮತ್ತು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ.
- ಶ್ರೀರಾಮನವಮಿ.
- ಗೋಕುಲಾಷ್ಟಮಿ.
- ನವರಾತ್ರಿ.
- ಗಣೇಶ ಚತುರ್ಥಿ.
- ಹನುಮಾನ್ ಜಯಂತಿ.
- ಜಲರಾಂ ಜಯಂತಿ.
- ಶಿವರಾತ್ರಿ.
- ಹೋಳಿ ಹುಣ್ಣಿಮೆ.
- ಪ್ರತಿ ಶನಿವಾರದಂದು ಸರಿ ಸುಮಾರು 700 ಬಡ ಜನರಿಗೆ ಬಾಬಾ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ.
- ರಕ್ತದಾನ ಶಿಬಿರ.
- ಉಚಿತ ನೇತ್ರ ತಪಾಸಣಾ ಶಿಬಿರಗಳು.
- ಅರ್ಹರಿಗೆ ಉಚಿತ ವೈದ್ಯಕೀಯ ಸೌಲಭ್ಯ.
- ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರಗಳ ವಿತರಣೆ.
ಸ್ಥಳ:
ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ, ಎಸ್.ವಿ.ರೋಡ್, ಮಲಾಡ್ (ಪಶ್ಚಿಮ)
ವಿಳಾಸ:
ಶ್ರೀ ಸಾಯಿ ದರ್ಶನ್ ಮಂದಿರ ಟ್ರಸ್ಟ್,
ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ,
ಎಸ್.ವಿ.ರೋಡ್, ಮಲಾಡ್ (ಪಶ್ಚಿಮ),
ಮುಂಬೈ-400 064, ಮಹಾರಾಷ್ಟ್ರ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ನೀರಜ್ ಕೇತನ್
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
+91 22 2888 3377 / +91 97027 ೮೧೪೮೭
ಈ ಮೇಲ್ ವಿಳಾಸ:
ಅಂತರ್ಜಾಲ ತಾಣ:
ಮಾರ್ಗಸೂಚಿ:
ದೇವಾಲಯವು ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗದಲ್ಲಿರುವ ಎಸ್.ವಿ.ರೋಡ್ ನಲ್ಲಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment