ಪವಿತ್ರ ಗ್ರಂಥವನ್ನು ಕೈಯಲ್ಲಿ ಹಿಡಿದಿರುವ ಶಿರಡಿ ಸಾಯಿಬಾಬಾ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ಚಿತ್ರವು ಸಾಯಿಬಾಬಾರವರು ಪುಸ್ತಕವನ್ನು ಕೈಯಲ್ಲಿ ಹಿಡಿದಿರುವ ಅತ್ಯಂತ ಅಪರೂಪದ ಚಿತ್ರ. ಒಮ್ಮೆ ಗುರುಪೂರ್ಣಿಮೆಯ ದಿವಸ ಅನೇಕ ಸಾಯಿಭಕ್ತರು ಸಾಯಿಬಾಬಾರವರ ಬಳಿಗೆ ದರ್ಶನಕ್ಕೆ ಬಂದರು ಮತ್ತು ತಮ್ಮ ಜೊತೆ ಪುಸ್ತಕವೊಂದನ್ನು ತಂದು ಸಾಯಿಬಾಬಾರವರ ಮುಂದೆ ಇರಿಸಿ ಅದನ್ನು ಸಾಯಿಬಾಬಾರವರು ಆಶೀರ್ವದಿಸಿ ವಾಪಸ್ ನೀಡಿದ ನಂತರ ಓದಬೇಕೆಂದು ಮತ್ತು ಅದರಿಂದ ಉಪಯೋಗ ಪಡೆಯಬೇಕೆಂದು ಇಚ್ಚಿಸಿದ್ದರು. ಆದರೆ ಸಾಯಿಬಾಬಾರವರು ಒಂದು ಒಬ್ಬ ಭಕ್ತನ ಪುಸ್ತಕವನ್ನು ತೆಗೆದುಕೊಂಡು ಆಶೀರ್ವದಿಸಿ ಅದನ್ನು ಮತ್ತೊಬ್ಬ ಭಕ್ತನಿಗೆ ನೀಡುತ್ತಿದ್ದರು. ಈ ಚಿತ್ರವನ್ನು ಮರಾಟಿ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯಲ್ಲಿ ಸಾಯಿಭಕ್ತರು ನೋಡಬಹುದು. ಈ ಚಿತ್ರದಲ್ಲಿ ಸಾಯಿಬಾಬಾರವರು ಪವಿತ್ರ "ತುಕಾರಾಮ ಗಾಥಾ" ವನ್ನು ಕೈನಲ್ಲಿ ಹಿಡಿದಿದ್ದಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment