ಚೆನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಉತ್ಸವ - 26ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ
ಭಕ್ತರು ಕೋರಿಕೆಗಳನ್ನು ಈಡೇರಿಸುತ್ತಿರುವ ಕಲಿಯುಗದ ಕಾಮಧೇನು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚೆನ್ನೈನ ಶ್ರೀ ಸಾಯಿ ಪ್ರಚಾರ ಪರಿವಾರವು ಮುಂದಿನ ತಿಂಗಳ 1ನೇ ಮೇ 2011, ಭಾನುವಾರದಂದು ಚೆನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಉತ್ಸವವನ್ನು ಹಮ್ಮಿಕೊಂಡಿರುತ್ತದೆ.
ಬೆಳಗಿನಿಂದ ಸಂಜೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಪ್ರಚಾರ ಪರಿವಾರದ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕಾರ್ಯಕ್ರಮದ ವಿವರ ಮತ್ತು ನಡೆಯುವ ಸ್ಥಳದ ವಿವರವನ್ನು ಈ ಕೆಳಗೆ ಕೊಡಲಾಗಿದೆ.
ಕಾರ್ಯಕ್ರಮದ ಸಮಯ:
ಬೆಳಿಗ್ಗೆ 4:30 ರಿಂದ ಸಂಜೆ 6:30 ರ ವರೆಗೆ
ಕಾರ್ಯಕ್ರಮ ನಡೆಯುವ ಸ್ಥಳ:
ಜೈನ್ ಭವನ, 10/1, ಸನ್ನಿಧಿ ರಸ್ತೆ, ವಡಪಳನಿ, ಚೆನ್ನೈ-26.
ದೂರವಾಣಿ: 044-2483 3233
ಮಾರ್ಗಸೂಚಿ: ವೆಂಗೀಶ್ವರನ್ ದೇವಾಲಯದ ಹತ್ತಿರ.
ಕಾರ್ಯಕ್ರಮದ ವಿವರಗಳು:
4.30 AM – ಮಹಾ ಗಣಪತಿ ಪೂಜೆ
5.00 AM – ಉಚಿತ ವಿವಾಹ ಕಾರ್ಯಕ್ರಮ
7.00 AM – 108 ಶ್ರೀ ಸಾಯಿ ಸತ್ಯ ವ್ರತ ಪೂಜೆ
9.00 AM – ನಾಮ ಸಂಕೀರ್ತನೆ
12.00 PM – ಆರತಿ
12.30 PM – 360 ಮಹಿಳೆಯರಿಗೆ ಸೀರೆ, ಕುಂಕುಮ ವಿತರಣೆ ಮತ್ತು ಅನ್ನದಾನ, ನಲಬಾಗಂ ಮೀನಾಕ್ಷಿಸುಂದರಂ, ಶ್ರೀ ಜನನಿ ಕೇಟರಿಂಗ್ ಸರ್ವೀಸ್ ಇವರಿಂದ.
5.00 PM – ನಾಮ ಸಂಕೀರ್ತನ ನಾಟ್ಯಾಂಜಲಿ ಕಾರ್ಯಕ್ರಮ
6.00 PM – ಆರತಿ
6.30 PM – ಪ್ರಸಾದ ವಿತರಣೆ
ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸಬಹುದು.
ಶ್ರೀ ಸಾಯಿ ಪ್ರಚಾರ ಪರಿವಾರ
11/11, ಆಂಡವರ ನಗರ, 6ನೇ ರಸ್ತೆ, ಕೋಡಂಬಾಕಂ, ಚೆನ್ನೈ-24.
ದೂರವಾಣಿ ಸಂಖ್ಯೆ: 044-6544 9766 / +91 98408 18595
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment